»   » ಕನ್ನಡ ನಟನ ತಮಿಳು ಚಿತ್ರದ ಆಡಿಯೋ ಬಿಡುಗಡೆ

ಕನ್ನಡ ನಟನ ತಮಿಳು ಚಿತ್ರದ ಆಡಿಯೋ ಬಿಡುಗಡೆ

Posted By:
Subscribe to Filmibeat Kannada
Amith
ಕನ್ನಡದ ನಟ ಕಿಚ್ಚ ಸುದೀಪ್ ನೆರೆಭಾಷೆ ತೆಲುಗು ಈಗ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದ ಆ ಹೊತ್ತಿನಲ್ಲೇ ಕನ್ನಡದ ಇನ್ನೊಬ್ಬ ಯುವ ನಟ ಅಮಿತ್ ನೆರೆಯ ತಮಿಳು ಚಿತ್ರವೊಂದರ ಚಿತ್ರೀಕರಣ ಮುಗಿಸಿ ವಾಪಸ್ಸಾಗಿದ್ದರು. ಆದರೆ ಅದು ಎಲ್ಲಿಯೂ ಅಷ್ಟೊಂದು ಸುದ್ದಿಯಾಗಿರಲಿಲ್ಲ. ಆದರೆ ಗಾಂಧಿನಗರದ ಕೆಲವರ ಗಮನ ಸೆಳೆದಿತ್ತು.

'ಕರುಪಾಲಗಿ' (ಕಪ್ಪು ಸುಂದರಿ) ಹೆಸರಿನ ತಮಿಳು ಚಿತ್ರದಲ್ಲಿ ಏಕೈಕ ನಾಯಕರಾಗಿ ನಟಿಸಿರುವ ಸ್ಪುರದ್ರೂಪಿ ಆ ನಟನ ಹೆಸರು ಅಮಿತ್. ನಾಳೆ (15 ಸೆಪ್ಟೆಂಬರ್ 2012) ಆ ಚಿತ್ರದ ಆಡಿಯೋ ಬಿಡುಗಡೆ ವಡಪಾಲನಿಯಲ್ಲಿರುವ 'ಕಮಲಾ ಥಿಯೇಟರಿ'ನಲ್ಲಿ ಭಾರಿ ಅದ್ದೂರಿಯಾಗಿ ನೆರವೇರಲಿದ್ದು, ತಮಿಳು ಚಿತ್ರರಂಗದ ಘಟಾನುಘಟಿಗಳು ಅಲ್ಲಿ ಸೇರಲಿದ್ದಾರೆ.

ಅಮಿತ್ ಎಂಬ ಈ ಕನ್ನಡದ ನಟ ನಟಿಸಿರುವ ಮೊದಲ ಸಿನಿಮಾ 'ಕಾಳಿದಾಸ ಲವ್ವಲ್ ಬಿದ್ದ' ಇನ್ನೂ ಬಿಡುಗಡೆಯಾಗಿಲ್ಲ. ನಂತರ ನಟಿಸಿದ ಸಿನಿಮಾಗಳಾದ 'ಖದೀಮರು' ಹಾಗೂ 'ಮಾಗಡಿ' ಅಮಿತ್ ಲೆಕ್ಕಕ್ಕೇ ಸಿಗದೇ ಹಾಗೆ ಬಂದು ಹೀಗೆ ಹೊರಟುಹೋದವು. ಆದರೆ ಬಿಡುಗಡೆಯಾದ ಎರಡು ಸಿನಿಮಾಗಳಲ್ಲೇ ವಿಮರ್ಶಕರು ಹಾಗೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು ಅಮಿತ್ ಅವರಿಗಿರುವ ಪ್ರತಿಭೆ ಹಾಗೂ ಸಿನಿಮಾ ಪ್ರೀತಿಗೆ ಸಾಕ್ಷಿಯಾಯ್ತು.

ನಂತರ ಕನ್ನಡದಲ್ಲಿ ತಕ್ಷಣಕ್ಕೆ ಸೂಕ್ತ ಯಾವ ಅವಕಾಶವೂ ಸಿಗಲಿಲ್ಲವಾಗಿ ಹುಡುಕಿಕೊಂಡ ಬಂದ ತಮಿಳು 'ಕರುಪಾಲಗಿ' ಚಿತ್ರದ ಅವಕಾಶವನ್ನು ಬಳಸಿಕೊಂಡಿದ್ದಾರೆ ಅಮಿತ್. ಈ ತಮಿಳು ಚಿತ್ರದ ನಾಯಕ ನಟರಾಗಿ ಮಿಂಚಿದ್ದಾರೆ ಕನ್ನಡದ ನಟ ಅಮಿತ್. 'ಪ್ರಣವ್ ಮೂವಿ ಮೇಕರ್ಸ್' ಲಾಂಛನದಲ್ಲಿ ಪಾಗೈ ಸೆಂಥಿಲ್ ನಿರ್ಮಾಣದ ಈ ಚಿತ್ರವನ್ನು ವಿಜಯ್ ಅರುಣ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಶಿಲ್ಪಾ ಮತ್ತು ವಿಕ್ಟೋರಿಯಾ ಎಂಬ ಇಬ್ಬರು ನಾಯಕಿಯರು.

ಚಿತ್ರದಲ್ಲಿ ಗೆಗೆಟಿವ್ ಶೇಡ್ ನಲ್ಲಿ ವಿವೇಕ್ ಜಂಬಗಿ ಎಂಬ ಇನ್ನೊಬ್ಬ ನಾಯಕನಟ ಕಾಣಿಸಿಕೊಂಡಿದ್ದು ಚಿತ್ರದ ವಿಲನ್ ಆಗಿ ಅಥಿಶಿವನ್ ನಟಿಸಿದ್ದಾರೆ. ವೇಲನ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಕಣ್ಣಾದಾಸನ್ ಛಾಯಾಗ್ರಹಣ ಮತ್ತು ಸಂಕಲನವಿದೆ. ರನ್ ರವಿ ಮತ್ತು ಕುಂದತ್ತೂರ್ ಬಾಬು ಸಾಹಸ ನಿರ್ದೇಶನದ ಈ ಚಿತ್ರಕ್ಕೆ ಕೆನಡಿ ಮತ್ತು ಪವರ್ ಶಿವ ನೃತ್ಯ ನಿರ್ದೇಶನವಿದೆ. ಒಟ್ಟೂ 51 ದಿನಗಳ ಕಾಲ ಚಿತ್ರಕ್ಕೆ ಶೂಟಿಂಗ್ ನಡೆಸಲಾಗಿದೆ.

ಇಂಥ 'ಕರುಪಾಲಗಿ' ತಮಿಳು ಚಿತ್ರದ ಆಡಿಯೋ ಬಿಡುಗಡೆ ವಡಪಾಲನಿಯಲ್ಲಿರುವ ಬೃಹತ್ 'ಕಮಲಾ ಥಿಯೇಟರಿ'ನಲ್ಲಿ ನಾಳೆ ಅದ್ದೂರಿಯಾಗಿ ನೆರವೇರಲಿದೆ. ಕನ್ನಡದ ನಟನ ತಮಿಳು ಸಿನಿಮಾಗೆ ತಮಿಳು ಚಿತ್ರರಂಗದ ಅತಿರಥಮಹಾರತರು ಆಗಮಿಸಿ ಶುಭ ಹಾರೈಸಲಿದ್ದಾರೆ. ನೆರೆಭಾಷೆ ತೆಲುಗಿನಲ್ಲಿ ಕನ್ನಡದ ಕಿಚ್ಚ ಗೆಲುವಿನ ಬಾವುಟ ಹಾರಿಸಿ ಬಂದ ನಂತರದ ಈ ಬೆಳವಣಿಗೆ ಸ್ಯಾಂಡಲ್ ವುಡ್ ಕಣ್ಣಲ್ಲಿ ಕುತೂಹಲ ಮೂಡಿಸಿದೆ.

ಅದಕ್ಕೂ ಮೊದಲೂ ಕೂಡ ಕನ್ನಡ ಮೂಲದ ನಟರಾದ ರಜನಿಕಾಂತ್, ಪ್ರಕಾಶ್ ರೈ ಹಾಗೂ ಅರ್ಜುನ್ ಸರ್ಜಾ ಮುಂತಾದ ನಟರು ನೆರೆಯ ಭಾಷೆಗಳಲ್ಲಿ ಮಾಡಿರುವ ಸಾಧನೆಗಳ ಸಾಕ್ಷಿಯಿದೆ. ಇಂಥ ವೇಳೆಯಲ್ಲಿ ಕನ್ನಡದ ಸ್ಪುರದ್ರೂಪಿ ನಟ ಅಮಿತ್ ಅವರ ಸ್ಟಾರ್ ನಟನಾಗುವ ಕನಸು ತಮಿಳು ಚಿತ್ರದ ಮೂಲಕ ಕೈಗೂಡಿದರೆ ಆಶ್ಚರ್ಯವಿಲ್ಲ. (ಒನ್ ಇಂಡಿಯಾ ಕನ್ನಡ)

English summary
Kannada Actor Ammith acted Tamil movie Karupalagi 'Audio Release' is at Kamala Theater, Vadapalini on 15th September 2012. Many Tamil Stars to join for this Audio Release Celebration. 
 
Please Wait while comments are loading...