ಬಿಸಿಬಿಸಿ ಚರ್ಚೆ ಹುಟ್ಟಾಕುತ್ತಿದೆ 'ಪೆಂಟಗಾನ್' ಸಿನಿಮಾದ ಬೋಲ್ಡ್ ಸಾಂಗ್

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಹೊಸ ಹೊಸ ಪ್ರಯೋಗಗಳು ಆಗುತ್ತಿವೆ. ಹೊಸಬರು ಎಕ್ಸ್‌ಪೆರಿಮೆಂಟ್ ಮಾಡುವ ಮೂಲಕ ಚಿತ್ರರಂಗದಲ್ಲಿ ನೆಲೆಯೂರಲು ಪ್ರಯತ್ನ ಮಾಡುತ್ತಲೇ ಇದ್ದಾರೆ. ಇದರಲ್ಲಿ ಕೆಲವರಿಗೆ ಸಕ್ಸಸ್ ಸಿಕ್ಕರೆ, ಮತ್ತೆ ಕೆಲವರು ಸೋಲುಂಡಿದ್ದಾರೆ.

ಸ್ಯಾಂಡಲ್‌ವುಡ್‌ನ ಇಲ್ಲೊಂದು ಸಿನಿಮಾ ಸದಾ ಚರ್ಚೆಯಲ್ಲಿದೆ. ಹಾಗಂತ ಇದೇ ಮೊದಲ ಬಾರಿಗೆ ಇಂತಹ ಪ್ರಯತ್ನ ಆಗುತ್ತಿದೆ ಅಂತಲ್ಲ. ಈ ಹಿಂದೆನೇ ಇಂತಹ ಸಿನಿಮಾ ಎಕ್ಸ್‌ಪೆರಿಮೆಂಟ್ ಆಗಿದೆ. ಆದರೆ, ಆ ಮಟ್ಟಿಗೆ ಬೋಲ್ಡ್ ಸ್ಟೋರಿಗಳನ್ನು ಬಿಂಬಿಸೋ ಪ್ರಯತ್ನ ಮಾಡಿದ್ದು ವಿರಳ. ಆ ಸಿನಿಮಾವೇ 'ಪೆಂಟಗಾನ್'.

Kannada Anthology Movie: Pentagon, 3rd Chapter Song Kamanabillu Moodide released

ನಿರ್ದೇಶಕ ಗುರುದೇಶ ಪಾಂಡೆ ಮುಂದಾಳತ್ವದಲ್ಲಿ ಐದು ನಿರ್ದೇಶಕರು, ಐದು ಕಥೆಗಳನ್ನು ಈ 'ಪೆಂಟಗಾನ್' ಸಿನಿಮಾಗಾಗಿ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಈ ಸಿನಿಮಾದ 5 ನೇ ಕಥೆಯ ಟೀಸರ್ ರಿಲೀಸ್ ಆಗಿದ್ದು, ಸದ್ದು ಮಾಡುತ್ತಿರೋದಷ್ಟೇ ಅಲ್ಲದೆ ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ.

ಇದೀಗ 'ಪೆಂಟಗಾನ್' ಸಿನಿಮಾದ ಮೂರನೇ ಅಧ್ಯಾಯದ ಲಿರಿಕಲ್ ಹಾಡೊಂದು ರಿಲೀಸ್ ಆಗಿದೆ. 'ಕಾಮನಬಿಲ್ಲು ಮೂಡುತಿದೆ ' ಅನ್ನೋ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆದಲ್ಲಿಂದ ಸಂಚಲನ ಸೃಷ್ಟಿಸುತ್ತಿದೆ. ಈ ಕಥೆಯಲ್ಲಿ ಸಾಮಾಜಿಕ ಜಾಲತಾಣದ ಮೋಸ, ಅಪರಾಧ ಜಗತ್ತು, ಯುವ ಪೀಳಿಗೆಯ ಭವಿಷ್ಯದ ಕುರಿತು ಪರಿಣಾಮಕಾರಿಯಾಗಿ ತೆರೆಮೇಲೆ ತರಲಾಗಿದೆ.

'ಪೆಂಟಗಾನ್' ಸಿನಿಮಾ ಮೂರನೇ ಅಧ್ಯಾಯವನ್ನು ರಾಘು ಶಿವಮೊಗ್ಗ ನಿರ್ದೇಶನ ಮಾಡಿದ್ದಾರೆ. ಈ ಅಧ್ಯಾಯದಲ್ಲಿ ಪ್ರಕಾಶ್ ಬೆಳವಾಡಿ, ತನಿಷಾ ಕುಪ್ಪಂದ, ಪ್ರೇರಣಾ,ಸಾಗರ್,ರಾಕೇಶ್ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯಕ್ಕೀಗ ಸೋಶಿಯಲ್ ಮೀಡಿಯಾದಲ್ಲಿ 'ಕಾಮನಬಿಲ್ಲು ಮೂಡುತಿದೆ ' ಅನ್ನೋ ಬೋಲ್ಡ್ ಸಾಂಗ್‌ ಹಲ್‌ಚಲ್ ಎಬ್ಬಿಸುತ್ತಿದೆ. 3ನೇ ಅಧ್ಯಾಯಕ್ಕೆ ಕಿರಣ್ ಹಂಪಾಪುರ ಛಾಯಾಗ್ರಾಹಣ ಮಾಡುತ್ತಿದ್ದಾರೆ. ಮಣಿಕಾಂತ್ ಕದ್ರಿ ಟ್ಯೂನ್ ಹಾಕಿದ್ದಾರೆ. ಸಾಹಿತ್ಯ ನಾಗಾರ್ಜುನ ಶರ್ಮಾ ಅವರದ್ದು.

Kannada Anthology Movie: Pentagon, 3rd Chapter Song Kamanabillu Moodide released

ಇನ್ನು ವೆಂಕಟೇಶ ಯುಡಿವಿ ಅವರ ಸಂಕಲವಿದ್ದರೆ, ಸಂತೋಷ ವೆಂಕಿ ಮತ್ತು ಇಂಚರ ರಾವ್ ಈ ಹಾಡನ್ನು ಹಾಡಿದ್ದಾರೆ. 'ಪೆಂಟಗನ್' ಸಿನಿಮಾದಲ್ಲಿರೋ ಐದು ಸ್ಟೋರಿಗಳಲ್ಲಿ ಶಿವಾಜಿ ಸುರತ್ಕಲ್ ಖ್ಯಾತಿಯ ಆಕಾಶ್ ಶ್ರೀವತ್ಸ, ಬ್ರಹ್ಮಚಾರಿ ಖ್ಯಾತಿಯ ಚಂದ್ರಮೋಹನ್, ಚೂರಿಕಟ್ಟೆ ಖ್ಯಾತಿಯ ರಾಘು ಶಿವಮೊಗ್ಗ, ಇದೇ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ತಲಾ ಒಂದೊಂದು ಸ್ಟೋರಿಗೆ ಆಕ್ಷನ್ ಕಟ್ ಹೇಳಿದ್ದಾರೆ.

More from Filmibeat

English summary
Kannada Anthology Movie: Pentagon, 3rd Chapter Song Kamanabillu Moodide released, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X