'ಬಜಾರ್' ನಲ್ಲಿ ಸದ್ದು ಮಾಡ್ತಿದೆ ಲವ್ ಫೆಲ್ಯೂರ್ ಹಾಡು
ಸಿಂಪಲ್ ಸುನಿ ನಿರ್ದೇಶನದ ನವ ನಾಯಕ ನಟ ಧನ್ವೀರ್ ಅಭಿನಯದ 'ಬಜಾರ್' ಸಿನಿಮಾ ಇಷ್ಟು ದಿನಗಳು ಟೀಸರ್ ನಿಂದಲೇ ಸದ್ದು ಮಾಡುತ್ತಿತ್ತು. ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಿದ್ದತೆ ಮಾಡಿಕೊಂಡಿರುವ ಬಜಾರ್ ಚಿತ್ರದ ಸದ್ಯ ಹಾಡಿನಿಂದ ಸೌಂಡ್ ಮಾಡುತ್ತಿದೆ.
'ಬಜಾರ್' ಸಿನಿಮಾದ ಮೊಟ್ಟ ಮೊದಲ ಹಾಡು ಬಿಡುಗಡೆ ಯೂ ಟ್ಯೂಬ್ ನಲ್ಲಿ ಹಾಡು ಸಖತ್ ಸದ್ದು ಮಾಡುತ್ತಿದೆ.ಲವ್ ಫೇಲ್ಯೂರ್ ಆಗೋಯ್ತು ನನಗೆ.. ಫೀಲ್ ಅಂತೂ ಸೂಪರು ಕಣ್ಣೀರ ಜೊತೆಗೆ.. ಏನೇನೋ ಬೈದ್ರೂ ಚೆಂದಾನೇ ನನಗೆ..ಎಂದು ಶುರುವಾಗುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ ಎನ್ನುವುದೇ ವಿಶೇಷ.
ಚಿತ್ರರಂಗದಲ್ಲಿ ಲವ್ ಫೆಲ್ಯೂರ್ ಸಾಂಗ್ ಇತ್ತು ಆದರೆ ಪ್ರೀತಿ ಕೈ ಕೊಟ್ಟಾಗ ಅದರೆ ಲವ್ ಫೆಲ್ಯೂರ್ ಸೆಲಬ್ರೇಷನ್ ಮಾಡಲು ಯಾವುದೇ ಹಾಡು ಇರಲಿಲ್ಲ.ಇದೇ ಕಾರಣದಿಂದ ಸುನಿ ಲವ್ ಫೆಲ್ಯೂರ್ ಆಚರಣೆ ಮಾಡಬೇಕು ಅಂತಾನೆ ಈ ಹಾಡನ್ನು ಬರೆದಿದ್ದಾರೆ.

'ಬಜಾರ್' ಚಿತ್ರವನ್ನು ಸುನಿ ನಿರ್ದೇಶನ ಮಾಡಿದ್ದು ಧನ್ವೀರ್ ಹಾಗೂ ಅಧಿತಿ ಪ್ರಭುದೇವಾ ಮುಖ್ಯ ಭೂಮಿಕೆಯಲ್ಲಿ ಅಭಿನಯ ಮಾಡಿದ್ದಾರೆ. ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ತಿಮೈ ಗೌಡ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಸದ್ಯ ಮೊದಲ ಹಾಡು ಬಿಡುಗಡೆ ಮಾಡಿರುವ ಸಿನಿಮಾತಂಡ ಆದಷ್ಟು ಬೇಗ ಚಿತ್ರವನ್ನು ರಿಲೀಸ್ ಮಾಡಲಿದ್ದಾರೆ.


Click it and Unblock the Notifications











