ತೆಲುಗು ಐಟಂ ಸಾಂಗ್‌ನ ಪ್ರೇಮ್ ಕದಿಯಲಿಲ್ಲ: ಕನ್ನಡ ಡ್ಯುಯೆಟ್‌ ಸಾಂಗ್‌ನ ನೀವೇ ಐಟಂ ಸಾಂಗ್ ಮಾಡಿದ್ದು

ಸಿನಿಮಾಗಳಲ್ಲಿ ಬೇರೆ ಭಾಷೆಯ ಸಾಂಗ್ ಟ್ಯೂನ್‌ಗಳನ್ನು ಕದಿಯೋದು, ಟ್ಯೂನ್ ಬದಲಿಸಿ ಹೊಸ ಸಾಂಗ್ ಮಾಡಿ ಗೆಲ್ಲೋದು ಕಾಮನ್. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂತಹ ಕಾಪಿ ಪೇಸ್ಟ್ ಬಹಳ ಬೇಗ ಬಟಾ ಬಯಲಾಗಿಬಿಡುತ್ತದೆ. ಹಾಲಿವುಡ್ ಸಿನಿಮಾ ಟ್ಯೂನ್ ಕದ್ದರೂ ಜನ ಹುಡುಕಿ ಬಿಡ್ತಾರೆ. ಸದ್ಯ ತೆಲುಗು ಟ್ಯೂನ್ ಕದ್ದು ಕನ್ನಡದಲ್ಲಿ ಸಾಂಗ್ ಮಾಡಿದ್ದಾರೆ ಎಂದು ಹೇಳಿ ಪೋಸ್ಟ್‌ವೊಂದು ವೈರಲ್ ಆಗ್ತಿದೆ.

ತೆಲುಗಿನ 'ಯೋಗಿ' ಚಿತ್ರದ 'ಓರೋರಿ ಯೋಗಿ' ಐಟಂ ಸಾಂಗ್ ಟ್ಯೂನ್ ಕದ್ದು ಕನ್ನಡದ 'ಜೋಗಿ' ಚಿತ್ರದಲ್ಲಿ 'ಎಲ್ಲೋ ಜೋಗಪ್ಪ ನಿನ್ನ ಅರಮಾನೆ' ಸಾಂಗ್ ಮಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಅದಕ್ಕೆ ಕಾರಣ ಅದೊಂದು ಇನ್‌ಸ್ಟಾಗ್ರಾಮ್ ಪೋಸ್ಟ್. ನೆಟ್ಟಿಗರೊಬ್ಬರು 'ಎಲ್ಲೋ ಜೋಗಪ್ಪ ನಿನ್ನ ಅರಮಾನೆ' ವಿಡಿಯೋ ಹಾಕಿ ಇದು ತೆಲುಗಿನ ಸಾಂಗ್‌ನಿಂದ ಕಾಪಿ ಮಾಡಿದ್ದು ಎನ್ನುವ ಅರ್ಥದಲ್ಲಿ ಮೀಮ್ ಕ್ರಿಯೇಟ್ ಮಾಡಿ ಪೋಸ್ಟ್ ಮಾಡಿದ್ದಾರೆ. ಕೆಲವರು ಇದು ನಿಜ ಅಂತಲೇ ನಂಬಿಕೊಂಡಿದ್ದಾರೆ.

Kannada Jogi film tunes copied in Telugu Yogi

ಅಸಲಿ ಸಂಗತಿ ಬೇರೆನೇ ಇದೆ. ಕನ್ನಡದಲ್ಲಿ ಶಿವಣ್ಣ ನಟಿಸಿದ 'ಜೋಗಿ' ಚಿತ್ರ ತೆಲುಗಿಗೆ 'ಯೋಗಿ' ಹೆಸರಿನಲ್ಲಿ ರೀಮೆಕ್ ಆಗಿತ್ತು. ಪ್ರಭಾಸ್ ಆ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದರು. ರಮಣ ಗೋಗುಲ ಸಂಗೀತ ಸಂಯೋಜನೆ ಮಾಡಿದ್ದರು. ಆದರೆ ಕೆಲ ಒರಿಜಿನಲ್ ಟ್ಯೂನ್‌ಗಳನ್ನು ತೆಲುಗಿನಲ್ಲಿ ಬಳಸಿಕೊಳ್ಳಲಾಗಿತ್ತು. ಸ್ವತಃ ಗುರುಕಿರಣ್ ತೆಲುಗಿನಲ್ಲಿ ರೀ ರೆಕಾರ್ಡಿಂಗ್ ಮಾಡಿದ್ದರು. ಅಂದಹಾಗೆ 'ಎಲ್ಲೋ ಜೋಗಪ್ಪ' ಹಾಡಿನ ಟ್ಯೂನ್‌ ಅನ್ನು ಕೊಂಚ ಬದಲಿಸಿ ತೆಲುಗಿನಲ್ಲಿ ಐಟಂ ಸಾಂಗ್ ಆಗಿ ಬಳಸಿಕೊಳ್ಳಲಾಗಿತ್ತು.

'ಓರೋರಿ ಯೋಗಿ' ಸಾಂಗ್ ಕೂಡ ಹಿಟ್ ಆಗಿತ್ತು. ಸಾಂಗ್‌ನಲ್ಲಿ ಮುಮೈತ್‌ ಖಾನ್ ಜೊತೆ ಪ್ರಭಾಸ್ ಕಾಣಿಸಿಕೊಂಡಿದ್ದರು. ಗುರುಕಿರಣ್ ಟ್ಯೂನ್ ಅಲ್ಲೂ ಸಖತ್ ಸದ್ದು ಮಾಡಿತ್ತು. ಆದರೆ ಈಗ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ತೆಲುಗು ಟ್ಯೂನ್ ಕದ್ದು ಕನ್ನಡದಲ್ಲಿ ಸಾಂಗ್ ಮಾಡಿದ್ದಾರೆ ಎಂದು ಈ ಪೋಸ್ಟ್ ಮಾಡಲಾಗಿದೆ. ನೆಟ್ಟಿಗರು ಕಾಮೆಂಟ್ ಬಾಕ್ಸ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. ಕನ್ನಡ ಸಾಂಗ್ ಒರಿಜಿನಲ್, ತೆಲುಗಿನಲ್ಲಿ ಟ್ಯೂನ್ ಬಳಸಿಕೊಳ್ಳಲಾಗಿದೆ ಎಂದು ಹೇಳುತ್ತಿದ್ದಾರೆ.

ಅಂದಹಾಗೆ ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದ 'ಜೋಗಿ' ಸಿನಿಮಾ ತೆಲುಗಿನಲ್ಲಿ ಸೋಲುಂಡಿತ್ತು. ಆದರೆ ಇದೇ ಚಿತ್ರವನ್ನು ಇತ್ತೀಚೆಗೆ 4K ವರ್ಷನ್‌ನಲ್ಲಿ ಹೊಸ ರೂಪದಲ್ಲಿ ರೀ ರಿಲೀಸ್ ಮಾಡಲಾಗಿತ್ತು. ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಇತ್ತೀಚೆಗಷ್ಟೆ ಕನ್ನಡದ 'ಜೋಗಿ' ಸಿನಿಮಾ 18 ವರ್ಷ ಪೂರೈಸಿತ್ತು. ಪ್ರೇಮ್ ರೌಡಿಸಂ ಹಾಗೂ ಮದರ್ ಸೆಂಟಿಮೆಂಟ್ ಸೇರಿಸಿ ಕಟ್ಟಿಕೊಟ್ಟಿದ್ದ ಸಿನಿಮಾ ಕನ್ನಡದ ಎವರ್‌ಗ್ರೀನ್ ಸಿನಿಮಾಗಳ ಸಾಲಿನಲ್ಲಿ ನಿಂತಿದೆ.

ಆಗ ಕೇವಲ 2 ಸಿನಿಮಾ ಮಾತ್ರ ಮಾಡಿದ್ದ ಪ್ರೇಮ್‌ ಅವರನ್ನು ಕರೆದು ಪಾರ್ವತಮ್ಮ, ಶಿವಣ್ಣ ಒಂದು ಸಿನಿಮಾ ಮಾಡಲು ಹೇಳಿದ್ದರು. ಆಗ ಶುರುವಾಗಿದ್ದೇ 'ಜೋಗಿ'. ಜೆನಿಫರ್ ಕೊತ್ವಾಲ್ ನಾಯಕಿಯಾಗಿ ನಟಿಸಿದರೆ ಹಿರಿಯ ನಟಿ ಅರುಂಧತಿ ನಾಗ್ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಗುರುಕಿರಣ್ ಮ್ಯೂಸಿಕ್ ಚಿತ್ರದ ಮತ್ತೊಂದು ಹೈಲೆಟ್. ಎಲ್ಲಾ ಸೇರಿ 'ಜೋಗಿ' ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿತ್ತು.

ಸೂಪರ್ ಸ್ಟಾರ್ ರಜನಿಕಾಂತ್ ಬೆಂಗಳೂರಿಗೆ ಬಂದು ಅಣ್ಣಾವ್ರ ಜೊತೆ ಸಿನಿಮಾ ನೋಡಿ ಭಾವುಕರಾಗಿದ್ದರು. ಈ ಚಿತ್ರವನ್ನು ತಮಿಳಿಗೆ ರೀಮೆಕ್ ಮಾಡಲು ಇಷ್ಟಪಟ್ಟಿದ್ದರು. ಬಳಿಕ ರಜನಿಕಾಂತ್ ಅಳಿಯ ಧನುಷ್ ತಮಿಳಿನಲ್ಲಿ ಈ ಸಿನಿಮಾ ಮಾಡಿದರು. ಅಲ್ಲೂ ಅಷ್ಟಾಗಿ ಸಿನಿಮಾ ಸದ್ದು ಮಾಡಲಿಲ್ಲ.

More from Filmibeat

English summary
Kannada Jogi film tunes used in Telugu Yogi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X