»   » ಅಲೋಕ್ ಪರಿಚಯಿಸಿದ ಕನ್ನಡದ ಆ ಲೋಕ !

ಅಲೋಕ್ ಪರಿಚಯಿಸಿದ ಕನ್ನಡದ ಆ ಲೋಕ !

By: ರಾಘವೇಂದ್ರ ಸಿ.ವಿ
Subscribe to Filmibeat Kannada

ಜಯ ಭಾರತ ಜನನಿಯ ತನು ಜಾತೆ
ಜಯಹೇ ಕರ್ನಾಟಕ ಮಾತೆ .

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣಲಿ ಮೆಟ್ಟಬೇಕು

ಹೀಗೆ ಅಂದಿನಿಂದಲೂ ಇಂದಿನವರೆಗೆ ಭಾವಗೀತೆ ಆದಿಯಾಗಿ ಸಿನಿಮಾ, ಜನಪದ ಮುಂತಾದ ಶೈಲಿಯಲ್ಲಿ ಕನ್ನಡ ಭಾಷೆಯ ಕುರಿತ ಅನೇಕ ಹಾಡುಗಳು ಬಂದಿವೆ, ಬರುತ್ತಲೂ ಇವೆ.[ಈ ವಿಡಿಯೋ ನೋಡಿ ನಗಬೇಕೋ, ನಡುಗಬೇಕೋ..ನೀವೇ ನಿರ್ಧರಿಸಿ]

ಭಾಷೆಯ ಬಗೆಗಿನ ಅಭಿಮಾನವನ್ನು ಎತ್ತಿಹಿಡಿಯುವ ಈ ಹಾಡುಗಳು ಬೆಳವಣಿಗೆಗೆ ಬಹುಮುಖ್ಯ ಪಾತ್ರ ವಹಿಸುತ್ತಿದೆ ಎಂದರೆ ತಪ್ಪಲ್ಲ. ಈ ರೀತಿ ಬರುವ ಯಾವುದೇ ಗೀತೆಯಾದರು ಕನ್ನಡಿಗರು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಾರೆ ಮತ್ತು ಪೋಷಿಸುತ್ತಾರೆ ಎಂಬುದಕ್ಕೆ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.

Kannada Mass Rap Song All.ok - Young engo

'ಜೋಶ್' ಚಿತ್ರದ ಮೂಲಕ ಪರಿಚಿತರಾದ ಅಲೋಕ್ 'ನಿನ್ನಿಂದಲೇ', 'ಸಿದ್ಧಾರ್ಥ' ಮುಂತಾದ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ ಅಲ್ಲದೆ ಅರ್ಬನ್ ಲ್ಯಾಡ್ಸ್ ಎಂಬ ಆಲ್ಬಮ್ ಹೊರತಂದು ಕನ್ನಡದ ಸಂಗೀತ ಪ್ರಿಯರ ಕಿವಿಗಳಿಗೆ ಹೊಸ ರೀತಿಯ ಹಾಡುಗಳನ್ನು ಸ್ಪರ್ಶಿಸಿದ ಹೆಗ್ಗಳಿಕೆ ಇವರದು.

ಆಂಗ್ಲ ಭಾಷೆಯಲ್ಲಷ್ಟೇ ರಾಪ್ ಮ್ಯೂಸಿಕ್ ಕೇಳುತ್ತಿದ್ದ ಕನ್ನಡಿಗರು ಇದೀಗ ಅಲೋಕ್ ಮತ್ತು ಅವರ ತಂಡ ಹೊರತಂದಿರುವ ವಿನೂತನ ವಿಡಿಯೋ ನೋಡಿ ಪುಳಕಿತರಾಗಿದ್ದಾರೆ.

ಸಂಗೀತದಲ್ಲಿ ಹೆಚ್ಚು ಆಸಕ್ತಿಯಿರುವ ಅಲೋಕ್ ಯಾವುದೇ ಬೆನ್ನೆಲುಬಿಲ್ಲದೆ ತನ್ನದೇ ರೀತಿಯಲ್ಲಿ ಸ್ನೇಹಿತರ ಜೊತೆಗೂಡಿ ಉತ್ಪಾದಿಸಿರುವ ಕನ್ನಡದ ಮೊಟ್ಟ ಮೊದಲ ರಾಪ್ ಗೀತೆ ಈಗಾಗಲೇ ಆನ್ಲೈನ್ ಮೂಲಕ ಲಕ್ಷಾಂತರ ಮಂದಿಯನ್ನು ತಲುಪಿದಲ್ಲದೆ ಹಲವಾರು ಸೆಲೆಬ್ರಿಟಿ ಗಳ ಮೆಚ್ಚುಗೆಯನ್ನು ಗಳಿಸಿದೆ. ಅದಕ್ಕೆ ಹೇಳುವುದು ಪ್ರತಿಭೆ ಎನ್ನವುದು ಹಿರಿಯ, ಕಿರಿಯ ಬಡವ ಮತ್ತು ಶ್ರೀಮಂತ ಎಂಬ ಅರಿವಿಲ್ಲದತಂದ್ದು.

ಅನ್ಯ ಭಾಷಿಗರೇ ತುಂಬಿರುವ ಕರ್ನಾಟಕದಲ್ಲಿ ಕನ್ನಡ ಭಾಷೆ ಮತ್ತು ಕನ್ನಡಿಗರ ಮೇಲಿನ ದೌರ್ಜನ್ಯ, ಕೀಳರಿಮೆಯನ್ನು ವಿಶಿಷ್ಟ ರೀತಿಯಲ್ಲಿ ಚಿತ್ರೀಕರಿಸಿ ಭಾಷೆಯ ಉಳಿವಿಕೆಯನ್ನು ತಳ ಹಂತದಿಂದ ಮಾಡಬೇಕೆಂಬುದನ್ನು ಈ ಮೂಲಕ ಹೇಳಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ರೀತಿಯ ಸಮಾಜ ಮುಖಿ ಮತ್ತು ಭಾಷಾಭಿಮಾನದ ಗೀತೆಗಳು ಕನ್ನಡದಲ್ಲಿ ಇನ್ನಷ್ಟು ಹೆಚ್ಚಲಿ, ಜಾಗೃತಿ ಮೂಡಲಿ ಮತ್ತು ನವೆಂಬರ್ ಕನ್ನಡಿಗರಾಗದೇ ಪ್ರತಿಕ್ಷಣ ಕನ್ನಡವನ್ನೇ ಉಸಿರಾಡಲಿ, ಕನ್ನಡದಲ್ಲೇ ಮಾತಾಡಲಿ, ಕನ್ನಡದಲ್ಲೇ ವ್ಯವಹರಿಸಲಿ, ಮನೆ ಮನಗಳಲ್ಲೂ ಕನ್ನಡವನ್ನೇ ಆರಾಧಿಸಲಿ ಮತ್ತು ಕನ್ನಡದ ಕಂಪು ಎಲ್ಲೆಡೆ ಪಸರಿಸಲಿ ಎನ್ನುವುದೇ ನಮ್ಮ ಆಶಯ.

Kannada Mass Rap Song All.ok - Young engo

ಈ ಪ್ರಯತ್ನದ ಹಿಂದೆ ಸಾಕಷ್ಟು ಜನರ ಪರಿಶ್ರಮವಿದ್ದು ವಿಕ್ರಮ್ ಯೋಗಾನಂದ್ ಕ್ಯಾಮರ ಕೈ ಚಳಕವಿದ್ದು, ಅವಿನಾಶ್ ಭಾರಧ್ವಾಜ್ ಪರಿಕಲ್ಪನೆ, ನಿರ್ದೇಶನ ಮತ್ತು ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಖುದ್ದು ಅಲೋಕ್ ವಹಿಸಿದ್ದಾರೆ.ಈ ಹಾಡಿನಲ್ಲಿ ಅಲೋಕ್ ಜೊತೆ ಎಂ ಸಿ ಬಿಜ್ಜು, ಮಾರ್ಟಿನ್ ಯೋ ಅಭಿನಯಿಸಿದ್ದುಸಂಗೀತ ಸಂಯೋಜನೆಯಲ್ಲಿ ಡಿ ಜೆ ಲೆತ್ಹಲ್ ಅಲೋಕ್ ಜೊತೆ ಕೈ ಗೂಡಿಸಿದ್ದಾರೆ ನೀವು ವಿಡಿಯೋ ನೋಡಿ ನಿಮ್ಮವರಿಗೂ ನೋಡಲು ಹೇಳಿ...

English summary
Watch First Kannada mass Rap 'All.ok - Young engo (part 2) by Alok Babu Feat RJ Pradeepa, Martin yo, SID, Mc bijju & Amogh

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada