For Quick Alerts
  ALLOW NOTIFICATIONS  
  For Daily Alerts

  ನವಿರು ಭಾವನೆಗಳ 'ಹೋಮ್ ಸ್ಟೇ' ಹಾಡುಗಳು

  By ರವೀಂದ್ರ ಕೋಟಕಿ
  |

  ಹೋಮ್ ಸ್ಟೇ ಅಂದ ತಕ್ಷಣ ಎರಡು ಸಂಗತಿ ಏಕಕಾಲಕ್ಕೆ ನೆನಪಾಗುತ್ತದೆ. ಒಂದು ದುಡಿಯುವ ಸಲುವಾಗಿ ಏಕಾಂಗಿಗಳಾಗಿ ಬರುವ ಪರಸ್ಥಳದವರಿಗೆ ಮನೆಯಲ್ಲಿ ಊಟ, ವಸತಿ ವ್ಯವಸ್ಥೆ ಮಾಡಿ ಅವರಿಗೆ ತಮ್ಮ ಸ್ವಂತ ಮನೆಯಲ್ಲಿ ನೆಲೆಸಿದ ಅನುಭವ ನೀಡುವಂತ ಪರಿಕಲ್ಪನೆ. ಇನ್ನೊಂದು ಮಂಗಳೂರು-ಕೊಡಗಿನ ಕಡೆ ಕೆಲವೊಂದು ಸಮಾಜಘಾತಕ ಶಕ್ತಿಗಳು ಮನೆಗಳ ಮೇಲೆ ದಾಳಿ ಮಾಡಿ ಅಲ್ಲಿ ಸಿಕ್ಕಿವರಿಗೆ ಹಿಗ್ಗಾ-ಮಗ್ಗಾ ಥಳಿಸಿದ ಘಟನೆಗಳು ನೆನಪಾಗುತ್ತದೆ.

  ಆದರೆ ಇವೆರಡು ಹೊರತಾಗಿ ನಿಮಗೆ ಮೂರನೇಯ ತರದ ಅನುಭವ ನೀಡುವ ಭರವಸೆಯೊಂದಿಗೆ ತೆರೆಗೆ ಬರುತ್ತಿರುವ ಚಿತ್ರವೇ 'ಹೋಮ್ ಸ್ಟೇ'. ಕನ್ನಡ-ತಮಿಳು-ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಈ 'ಹೋಮ್ ಸ್ಟೇ'ಯನ್ನು ಕಥೆ-ಚಿತ್ರಕಥೆ ಹೊಂದಿಗೆ ನಿರ್ದೇಶಿಸಿರುವುದು ಜಾಹಿರಾತು ಪ್ರಚಂಚದಲ್ಲಿ ಸಾಕಷ್ಟು ಹೆಸರು ಮಾಡಿರುವ ಸಂತೋಷ್ ಕೊಡೆಂಕಿರಿ. [ಕನ್ನಡದ ಸಸ್ಪೆನ್ಸ್ ಥ್ರಿಲ್ಲರ್ 'ಹೋಮ್ ಸ್ಟೇ' ಹೈಲೈಟ್ಸ್]

  ಈ ಚಿತ್ರದ ಕೇಂದ್ರ ಬಿಂದುವಾದ ನಾಯಕಿಯ ಪಾತ್ರವನ್ನು ಬಾಲಿವುಡ್ ನಟಿ ಸಯ್ಯಾಲಿ ಭಗತ್ ನಿರ್ವಹಿಸುತ್ತಿದ್ದು ರವಿಕಾಳೆ, ಶ್ರುತಿ, ಅಶೋಕ್, ಮಾನಸಿ, ಸಂತೋಷ ಇತರರು ಮುಖ್ಯಪಾತ್ರದಲ್ಲಿದ್ದಾರೆ. 'ಹೋಮ್ ಸ್ಟೇ' ಪ್ರಯೋಗಾತ್ಮಕ ಚಿತ್ರವಾಗಿದ್ದು ನೋಡುಗರಿಗೆ ಸಾಕಷ್ಟು ಥ್ರಿಲ್ ನೀಡುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ನಿರ್ದೇಶಕ ಸಂತೋಷ್.

  ಮಿರ್ಯಾಕಲ್ ಮೂವೀ ಮೇಕರ್ಸ್ ನಿರ್ಮಿಸುತ್ತಿರುವ ಈ ಪ್ರಯೋಗಾತ್ಮಕ ಚಿತ್ರದಲ್ಲಿ ಕೇವಲ ಎರಡೇ ಎರಡು ಹಾಡುಗಳು ಮಾತ್ರವಿದೆ. ಭರವಸೆಯ ಯುವ ಸಂಗೀತ ನಿರ್ದೇಶಕ ಆಶ್ಲೆ ಮೆಂಡೋಂಕಾ ಚಿತ್ರಕ್ಕೆ ಸಂಗೀತ ನೀಡಿದ್ದು, ಡಾ. ನಾಗೇಂದ್ರ ಪ್ರಸಾದ್ ಸಾಹಿತ್ಯ ನೀಡಿದ್ದಾರೆ. ಈ ಎರಡು ಹಾಡುಗಳ ಜೊತೆಗೆ ಥೀಮ್ ಸಾಂಗ್ ಹಾಗೂ ರೀಮಿಕ್ಸ್ ಥೀಮ್ ಸಾಂಗ್ ಹೊಂದಿರುವ ಆಡಿಯೋ ಸಿಡಿಯನ್ನು ಲೋಟಸ್ ಮ್ಯೂಸಿಕ್ ಮೂಲಕ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.

  ಸುಮಶಾಸ್ತ್ರಿ ಹಾಡಿರುವ "ನೀಲಿ ಕನಸಿನ ಬಾಲೆ ನಾನು..." ಎಂದು ಆರಂಭವಾಗುವ ಹಾಡು ಅತ್ತ ಪೂರ್ತಿಯಾಗಿ ಮೇಲೋಡಿಯೂ ಆಗದೆ ಇತ್ತ ಫಾಸ್ಟ್ ಬೀಟ್ ಅನುಭವಕ್ಕೂ ಒಳಪಡಿಸದೆ ಎರಡರ ಮಧ್ಯದಲ್ಲಿ ನಿಲ್ಲುತ್ತೆ. ನಾಯಕಿ ಅಂದದ ವರ್ಣನೆಯೊಂದಿಗೆ ಬೆಸೆದುಕೊಂಡಿರುವ ಈ ಹಾಡಿನ ಸಾಹಿತ್ಯ ಸಾಧಾರಣವಾಗಿದ್ದು ಯಾವುದೇ ಸಾಲಿನಲ್ಲಿ ವಿಶೇಷವೆನ್ನಿಸುವ ಸಂಗತಿಗಳು ಎದ್ದು ಕಾಣುವುದಿಲ್ಲ.


  ಚೈತ್ರಾ ಎಚ್.ಜಿ. ಹಾಡಿರುವ "ಲೋಕವ ಕಂಡೆ..." ನಾಯಕಿ ತನ್ನನ್ನು ಪ್ರಕೃತಿಯೊಂದಿಗೆ ಸಮೀಕರಿಸಿಕೊಂಡು ಹಾಡುವಂತಿದೆ. ಆದರೆ ಸಾಹಿತ್ಯ-ಸಂಗೀತದ ಮಧ್ಯೆ ಹೊಂದಾಣಿಕೆಯಾಗಿಲ್ಲ. ಇಡೀ ಹಾಡಿನಲ್ಲಿ ಕೊಡುಗು, ಕೊಡವರ ಬದುಕು, ಕಾವೇರಿ, ಪ್ರಕೃತಿ ಹೀಗೆ ಸಾಲು-ಸಾಲಿನಲ್ಲಿ ನಾಯಕಿ ಕಾಣುವ ಹೊಸಲೋಕದ ವರ್ಣನೆ ತುಂಬಿಕೊಂಡಿದೆ.

  ಕರ್ನಾಟಕದ ಕಾಶ್ಮೀರವನ್ನು ವರ್ಣಸುವುದರಲ್ಲಿ ನಾಗೇಂದ್ರ ಪ್ರಸಾದ್ ತಮ್ಮ ಪದಪುಂಜದಿಂದ ಮತ್ತಷ್ಟು ಭಿನ್ನವಾದ ಪದಪ್ರಯೋಗ ಮಾಡಬಹುದಾಗಿತ್ತು ಅನ್ನಿಸುತ್ತೆ. ಒಟ್ಟಾರೆ ಆಡಿಯೋ ಮಟ್ಟಿಗೆ ಪ್ರಯೋಗ ಮತ್ತಷ್ಟು ಬಿಗಿಯಾಗಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸುತ್ತೆ.

  English summary
  Read Kannada movie 'Home Stary' music review by Ravindra Kotaki. The author says, songs are in between melody and fast beat. The first song "Neeli Kanasina Baale Naanu' sung by Suma Shastry and lyrics by Nagendra Prasad is sweet toned. Music by Ashley Mendonca.
  Wednesday, October 8, 2014, 11:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X