»   » 'ಮಹಾನುಭಾವರು'ಗಾಗಿ ಒಂದಾದ ಅಪ್ಪು-ಶ್ರೀಮುರಳಿ

'ಮಹಾನುಭಾವರು'ಗಾಗಿ ಒಂದಾದ ಅಪ್ಪು-ಶ್ರೀಮುರಳಿ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿ ಇದೇ ಮೊದಲ ಬಾರಿಗೆ ಒಂದೇ ಹಾಡಿಗೆ ಧ್ವನಿಯಾಗಿದ್ದಾರೆ. ಹೊಸ ಪ್ರತಿಭೆಗಳೇ ಸೇರಿ ಮಾಡುತ್ತಿರುವ 'ಮಹಾನುಭಾವರು' ಚಿತ್ರದ ಟೈಟಲ್ ಹಾಡಿಗೆ ಕನ್ನಡದ ಇಬ್ಬರು ಸ್ಟಾರ್ ನಟರು ಒಟ್ಟಿಗೆ ಧ್ವನಿಗೂಡಿಸಿದ್ದು, ಸಖತ್ ಮಾಸ್ ಆಗಿ ಮೂಡಿ ಬಂದಿದೆ.

'ಮಹಾನುಭಾವರು' ಚಿತ್ರಕ್ಕೆ ಸಂದೀಪ್ ನಾಗಲೀಕರ್ ಸಿಂಧನೂರ್ ಆಕ್ಷನ್ ಕಟ್ ಹೇಳುತ್ತಿದ್ದು, ಸತೀಶ್ ಮೌರ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. 'ಮುನ್ನುಡಿ' ಕ್ರಿಯೇಷನ್ಸ್ ಅಡಿಯಲ್ಲಿ ಬಾಲಚಂದರ್ ಅವರು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

Kannada Movie Mahanubhavaru Song Making

ಇನ್ನುಳಿದಂತೆ ಬಾಲಚಂದರ್ ಮತ್ತು ಗೂಕುಲ್ ರಾಜ್ ಚಿತ್ರದ ನಾಯಕರಾಗಿದ್ದು, ಇವರಿಗೆ ಅನುಷಾ ರೈ ಹಾಗೂ ಪ್ರಿಯಾಂಕಾ ಜೋಡಿಯಾಗಿದ್ದಾರೆ. ಈಗಾಗಲೇ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿರುವ 'ಮಹಾನುಭಾವರು' ಈಗ ಆಡಿಯೋ ಬಿಡುಗಡೆ ಮಾಡಲು ಸಿದ್ದವಾಗುತ್ತಿದೆ.

ಇದರ ಮೊದಲ ಝಲಕ್ ಎಂಬಂತೆ ಅಪ್ಪು ಮತ್ತು ಶ್ರೀಮುರಳಿ ಕಾಂಬಿನೇಷನ್ ಹಾಡಿನ ಮೇಕಿಂಗ್ ಟೀಸರ್ ಬಿಡುಗಡೆ ಮಾಡಿದೆ.

'ಮಹಾನುಭಾವರು' ಚಿತ್ರಕ್ಕಾಗಿ ಪುನೀತ್ ಮತ್ತು ಅಪ್ಪು ಹಾಡಿರುವ ಹಾಡಿನ ಝಲಕ್ ಇಲ್ಲಿದೆ ನೋಡಿ....

English summary
Power Star Puneeth Rajkumar And Roaring Star Sri murali Sing a Song From Kannada Movie Mahanubhavaru. The Movie Directed By Sandeep Naagalikar Sindanoor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada