»   » ಮನಸ್ಸನ್ನ ತಲ್ಲಣಗೊಳಿಸುತ್ತಿದೆ 'ಮುಗುಳುನಗೆ'ಯ 'ರೂಪಸಿ' ಹಾಡು

ಮನಸ್ಸನ್ನ ತಲ್ಲಣಗೊಳಿಸುತ್ತಿದೆ 'ಮುಗುಳುನಗೆ'ಯ 'ರೂಪಸಿ' ಹಾಡು

Posted By:
Subscribe to Filmibeat Kannada

ಜುಲೈ 12, ಸಂಜೆ 5 ಗಂಟೆ ಯಾವಾಗ ಆಗುತ್ತೋ ಅಂತ ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳು ಕಾಯುತ್ತಿದ್ದರು. ಯಾಕಂದ್ರೆ, 'ಮುಗುಳುನಗೆ' ಚಿತ್ರದ ಎರಡನೇ ಹಾಡು ಬಿಡುಗಡೆಯಾಗುತ್ತೆ ಎಂದು ಚಿತ್ರತಂಡ ಹೇಳಿತ್ತು. ಹೇಳಿದಂತೆ ಹಾಡು ಕೂಡ ಬಿಡುಗಡೆಯಾಗಿದ್ದು, ಮತ್ತೊಂದು 'ಮುಂಗಾರು ಮಳೆ' ನೆನಪಿಸುತ್ತಿದೆ.

ಹೌದು, 'ಮುಂಗಾರು ಮಳೆ' ಚಿತ್ರದಲ್ಲಿ ''ಅನಿಸುತಿದೆ ಯಾಕೋ ಇಂದು........'' ಎನ್ನುವ ಸಾಲುಗಳನ್ನ ಗೀಚಿ ಸಂಗೀತ ಪ್ರೇಮಿಗಳ ಮನಸ್ಸು ತಲ್ಲಣಗೊಳಿಸಿದ್ದ ಜಯಂತ್ ಕಾಯ್ಕಿಣಿ ಅಂತಹದ್ದೇ ಮಧುರವಾದ ಗೀತೆಯನ್ನ ನೀಡಿದ್ದಾರೆ.

ಮತ್ತೆ ಜೋಗದ ಗುಂಡಿ ಬಳಿ ಗಣೇಶ್ - ಭಟ್ಟರ ಸಂಚಾರ

Kannada Movie Mugulunage Roopasi Song Release

''ರೂಪಸಿ ಸುಮ್ಮನೆ ಹೇಗಿರಲಿ, ನೀನ್ನನೇ ನೋಡುತ ಕೂತು......ಕೋಪಿಸಿಕೊಳ್ಳದೇ ಜ್ಞಾಪಿಸಿ ನೀ, ಮರೆತರೆ ಮುಂದಿನ ಮಾತು......'' ಎಂದು ಶುರುವಾಗುವ ಸಾಲುಗಳು ಒಮ್ಮೆ ಕೇಳಿದರು ಸಾಕು ಇಷ್ಟವಾಗಿಬಿಡುತ್ತೆ.

'ಮುಗುಳು ನಗು'ತ್ತಲೇ ವೇದಾಂತ ಹೇಳಿದ ಭಟ್ಟರ ಈ ಹಾಡು ಕೇಳಿ...

ಗಾಯಕ ಸೋನು ನಿಗಮ್ ಧ್ವನಿಯಲ್ಲಿ ಈ ಹಾಡು ಮೂಡಿ ಬಂದಿದ್ದು, 'ರೂಪಸಿ' ಹಾಡಿನ ಇಂಪು ಮತ್ತಷ್ಟು ಹೆಚ್ಚಾಗಿದೆ ಎನ್ನಬಹುದು. ಅಂದ್ಹಾಗೆ, 'ಮುಗುಳುನಗೆ' ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನುಳಿದಂತೆ ಯೋಗರಾಜ್ ಭಟ್ ನಿರ್ದೇಶನವಿದ್ದು, ಸೈಯಾದ್ ಸಲಾಂ ನಿರ್ಮಾಣ ಮಾಡಿದ್ದಾರೆ. ಗಣೇಶ್ ಜೋಡಿಯಾಗಿ ಚಿತ್ರದಲ್ಲಿ ಒಟ್ಟು ನಾಲ್ಕು ನಾಯಕಿಯರಿದ್ದು, 'ಸಿದ್ಧಾರ್ಥ್' ಖ್ಯಾತಿಯ ಅಪೂರ್ವ ಆರೋರ, ಆಶಿಕಾ, ನಿಖಿತಾ ನಾರಾಯಣ್ ಮತ್ತು ವಿಶೇಷ ಪಾತ್ರದಲ್ಲಿ ನಟಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ.

English summary
Golden Star Ganesh Starrer Kannada Movie Mugulunage Roopasi Song Release. The Movie Directed by Yogaraj Bhat. Music By Harikrishna,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada