ರವಿ ಬೋಪಣ್ಣನ ಡಿಫರೆಂಟ್ ಲುಕ್: ರಿಲೀಸ್ ಆಯ್ತು ಲಿರಿಕಲ್ ವೀಡಿಯೋ

ಕ್ರೇಜಿ ಸ್ಟಾರ್ ನಟನೆಯ 'ರವಿ ಬೋಪಣ್ಣ' ಸಿನಿಮಾ ಕನ್ನಡದಲ್ಲಿ ಬಾರಿ ನಿರೀಕ್ಷೆ ಹುಟ್ಟಿಸಿದೆ. 'ಅಪೂರ್ವ' ಸಿನಿಮಾ ನಿರ್ದೇಶನದ ಬಳಿಕ ಕ್ರೇಜಿ ಸ್ಟಾರ್ ರವಿಚಂದ್ರನ್ ನಟನೆಯ ಮತ್ತು ನಿರ್ದೇಶನದ ಸಿನಿಮಾ 'ರವಿ ಬೋಪಣ್ಣ'. ಚಿತ್ರ ಸೆಟ್ಟೇರಿದಾಗಿನಿಂದಲೂ ಸಿನಿಮಾದ ಫಸ್ಟ್ ಲುಕ್, ಟೀಸರ್ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಜೊತೆಗೆ ಸಿನಿಮಾದ ವೈಶಿಷ್ಟ್ಯಗಳು ರವಿಚಂದ್ರನ್ ಅಭಿಮಾನಿಗಳಿಗೆ ಸಿನಿಮಾ ನೋಡಲು ಕಾತುರದಿಂದ ಕಾಯುವಂತೆ ಮಾಡಿದೆ.

ಇದೀಗ 'ರವಿ ಬೋಪಣ್ಣ' ಸಿನಿಮಾದ ಲಿರಿಕಲ್ ಹಾಡು ಕೂಡ ರಿಲೀಸ್ ಆಗಿದೆ. ಇಂದು ರಿಲೀಸ್ ಆಗಿರುವ ಹಾಡಿಗೆ ಸಾಕಷ್ಟು ಮಂದಿ ಮೆಚ್ಚುಗೆ ಸೂಚಿಸುತ್ತಿದ್ದು, ಯೂಟ್ಯೂಬ್‌ನಲ್ಲಿ ಹೆಚ್ಚೆಚ್ಚು ವಿವ್ಸ್ ಪಡೆದುಕೊಳ್ತಿದೆ. 'ಹೀರೋನು ಇವನೆ ವಿಲ್ಲನ್ನು ಇವನೆ' ಅನ್ನೋ ಸಾಹಿತ್ಯ ಹೊಂದಿರುವ ಈ ಹಾಡಿನಲ್ಲಿ ರವಿಚಂದ್ರನ್ ಖಡಕ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದರ ಸಣ್ಣ ಝಲಕ್ ಅನ್ನು ಈ ಹಾಡಿನಲ್ಲಿ ತೋರಿಸಲಾಗಿದೆ. ರವಿ ಬೋಪಣ್ಣ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಸಾಕಷ್ಟು ರಿಸರ್ಚ್ ಮಾಡಿ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ರವಿಚಂದ್ರನ್. ಡೈರೆಕ್ಷನ್ ಜೊತೆಗೆ ಸಿನಿಮಾದ ಸಂಗೀತ ನಿರ್ದೇಶನ, ಸಾಹಿತ್ಯ, ಚಿತ್ರಕಥೆ, ಸಂಕಲನ ಎಲ್ಲ ಜವಾಬ್ದಾರಿಯನ್ನು ರವಿಚಂದ್ರನ್ ಅವರೆ ನಿಭಾಯಿಸುತ್ತಿದ್ದಾರೆ. ಹಾಗೆ ಬಿಡುಗಡೆ ಆಗಿರುವ ಹಾಡಿಗೆ ಸುಜಾತ ಎಸ್ ಕಾಮತ್, ಸಂತೋಷ್ ವೆಂಕಿ, ಮಧ್ವೇಶ್ ಭಾರಧ್ವಜ್ ಮತ್ತು ಅನಿರುಧ್

ರವಿ ಬೋಪಣ್ಣ ಪಾತ್ರದಲ್ಲಿ ರವಿಚಂದ್ರನ್ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಖಡಕ್ ಡೈಲಾಗ್‌ಗಳು ಸೇರಿ ಸಾಕಷ್ಟು ವಿಶೇಷ ಎಲಿಮೆಂಟ್‌ಗಳು ಸಿನಿಮಾದಲ್ಲಿ ಇರಲಿದೆ. ರವಿ ಬೋಪಣ್ಣ ಸಿನಿಮಾ ಸೈಬರ್ ಕ್ರೈಂ ಸುತ್ತ ನಡೆಯುವ ಕಥೆಯಾಗಿದ್ದು, ರವಿಚಂದ್ರನ್ ಸೈಬರ್ ಸೆಲ್‌ನ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ರವಿ ಬೋಪ್ಪಣ್ಣ ಸಿನಿಮಾಗೆ ದೃಶ್ಯ 2 ಎಂಬ ಟ್ಯಾಗ್ ಲೈನ್ ಕೂಡ ಇದೆ. ಈಗ ಬಿಡುಗಡೆ ಆಗಿರುವ ಲಿರಿಕಲ್ ಹಾಡು ಕೂಡ ನೋಡುಗರಿಗೆ ತುಂಬಾ ಹಿಡಿಸಿದ್ದು, ರವಿಚಂದ್ರನ್ ಅವರ ದೊಡ್ಡ ಮೀಸೆಯ ಲುಕ್ ಅವರ ಪಾತ್ರಕ್ಕೆ ಗಾಂಭೀರ್ಯವನ್ನು ತುಂಬಿದೆ.ರವಿಚಂದ್ರನ್ ಕೂಡ ಈ ಸಿನಿಮಾದಲ್ಲಿ ಎರೆಡು ಗೆಡಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗೆ ರವಿಚಂದ್ರನ್ ಅವರನ್ನು ರಫ್ ಆಂಡ್ ಟಫ್ ಪಾತ್ರದಲ್ಲಿ ನೋಡಲು ಫ್ಯಾನ್ಸ್ ಕಾತುರರಾಗಿದ್ದಾರೆ.

kannada movie ravi bopanna Heronu ivane villanu ivane lyrical video out

ಇನ್ನೂ ರವಿ ಬೋಪಣ್ಣ ಸಿನಿಮಾದಲ್ಲಿ ರವಿಚಂದ್ರನ್ ಜೊತೆಗೆ ಕಿಚ್ಚಾ ಸುದೀಪ್ ಕೂಡ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಚಿತ್ರತಂಡವೇ ಈ ಹಿಂದೆ ಸುದೀಪ್ ಅವರ ಲುಕ್ ರಿವೀಲ್ ಮಾಡಿತ್ತು. ಇದರಲ್ಲಿ ಸುದೀಪ್ ಲಾಯರ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಸ್ನೇಹಿತರ ಜುಗಲ್ ಬಂದಿ ಕೂಡ ಇರಲಿದೆ ಎಂದು ಹೇಳಲಾಗುತ್ತಿದೆ. ಸುದೀಪ್ ಮತ್ತು ರವಿಚಂದ್ರನ್ ಸಂಬಂಧ ನೋಡುಗರಿಗೆ ತುಂಬಾ ಹಿಡಿಸಲಿದೆಯಂತೆ. ಇದು ಸಿನಿಮಾದ ಮತ್ತೊಂದು ಪ್ಲಸ್ ಪಾಯಿಂಟ್.

ಇನ್ನುಳಿದಂತೆ ಸಿನಿಮಾದಲ್ಲಿ ದೊಡ್ಡ ದೊಡ್ಡ ತಾರಾಗಣವೇ ಇದ್ದು, ಕಾವ್ಯ ಶೆಟ್ಟಿ ರವಿಚಂದ್ರನ್‌ಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ರಮ್ಯ ಕೃಷ್ಣ, ಜೈ ಜಗದೀಶ್, ರವಿಶಂಕರ್ ಗೌಡ, ಮೋಹನ್ ಶಂಕರ್ ಸೇರಿದಂತೆ ಹಲವರು ಸಿನಿಮಾದಲ್ಲಿ ಬಣ್ಣ ಹೆಚ್ಚಿದ್ದಾರೆ. ಅಜಿತ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸೀತಾರಾಮ್ ಕ್ಯಾಮರ್ ಕೈಚಳಕ ತೋರಿದ್ದಾರೆ. ರವಿಚಂದ್ರನ್ ಅವರ ತಂದೆ ವೀರಸ್ವಾಮಿ ಸ್ಥಾಪಿಸಿರುವ ಈಶ್ವರಿ ಕಂಬೈನ್ಸ್ ನಲ್ಲಿ ಸಿನಿಮಾ ಮೂಡಿಬರುತ್ತಿದ್ದು, ಈಶ್ವರಿ ಕಂಬೈನ್ಸ್ 50 ವರ್ಷ ಪೂರೈಸಿರೋ ಸಂಭ್ರಮದಲ್ಲಿದೆ.

More from Filmibeat

English summary
Kannada movie ravi bopanna "Heronu ivane villanu ivane" lyrical video out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X