»   » 'ಕಿರಿಕ್ ಪಾರ್ಟಿ' ಸಂಗೀತ ನಿರ್ದೇಶಕನ ಕೈನಲ್ಲಿರುವ ಸಿನಿಮಾಗಳ ಸಂಖ್ಯೆ ಕೇಳಿ!

'ಕಿರಿಕ್ ಪಾರ್ಟಿ' ಸಂಗೀತ ನಿರ್ದೇಶಕನ ಕೈನಲ್ಲಿರುವ ಸಿನಿಮಾಗಳ ಸಂಖ್ಯೆ ಕೇಳಿ!

Posted By:
Subscribe to Filmibeat Kannada

ಕನ್ನಡದ ಯುವ ಮತ್ತು ಪ್ರತಿಭಾವಂತ ಸಂಗೀತ ನಿರ್ದೇಶಕರಲ್ಲಿ ಅಜನೀಶ್ ಲೋಕನಾಥ್ ಕೂಡ ಒಬ್ಬರು. ತಮ್ಮ ವಿಭಿನ್ನ ಪ್ರಯತ್ನಗಳ ಮೂಲಕ ದಿನೇ ದಿನೇ ಎತ್ತರಕ್ಕೆ ಬೆಳೆಯುತ್ತಿರುವ ಅಜನೀಶ್ ಈಗ ಸಿಕ್ಕಾಪಟ್ಟೆ ಬಿಜಿ ಇದ್ದಾರೆ. 'ಕಿರಿಕ್ ಪಾರ್ಟಿ' ನಂತರ ಅಜನೀಶ್ ಖಾತೆಯ ಸಿನಿಮಾಗಳ ಕೂಡ ಸಂಖ್ಯೆ ಹೆಚ್ಚಾಗಿದೆ.

'ಉಳಿದವರು ಕಂಡತೆ', 'ಇಷ್ಟಕಾಮ್ಯ', 'ರಂಗಿತರಂಗ' (ಹಿನ್ನಲೆ ಸಂಗೀತ), 'ಅಕಿರ', 'ಶ್ರೀ ಕಂಠ' ಸೇರಿದಂತೆ ಅನೇಕ ಸಿನಿಮಾಗಳಿಗೆ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದ ಅಜನೀಶ್ ಲೋಕನಾಥ್ ಡಿಮ್ಯಾಂಡ್ ಈಗ ಜಾಸ್ತಿ ಆಗಿದೆ. ಒಂದು ಕಡೆ ಕನ್ನಡ ಇನ್ನೊಂದು ಕಡೆ ತಮಿಳು ಮತ್ತು ತೆಲುಗಿನಲ್ಲಿಯೂ ಅಜನೀಶ್ ಸೌಂಡ್ ಮಾಡುತ್ತಿದ್ದಾರೆ. ಸದ್ಯ ಅಜನೀಶ್ ಲೋಕನಾಥ್ ಅವರ ಮುಂದಿನ ಸಿನಿಮಾ ಲಿಸ್ಟ್ ಸಖತ್ ದೊಡ್ಡದಾಗಿದೆ. ಮುಂದೆ ಓದಿ...

'ರಾಜರಥ'

ಸದ್ಯ ಬಿಡುಗಡೆಗೆ ಸಿದ್ಧವಾಗಿರುವ 'ರಾಜರಥ' ಸಿನಿಮಾಗೆ ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ನೀಡಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನ ಮಾಡಿರುವ 'ರಾಜರಥ' ಚಿತ್ರದಲ್ಲಿ ನಿರೂಪ್ ಭಂಡಾರಿ, ಅವಾಂತಿಕಾ ಶೆಟ್ಟಿ, ರವಿಶಂಕರ್ ನಟಿಸಿದ್ದಾರೆ.

'ಅವನೇ ಶ್ರೀಮನ್ನಾರಾಯಣ'

ರಕ್ಷಿತ್ ಶೆಟ್ಟಿ ನಟನೆಯ ಹೊಸ ಸಿನಿಮಾ 'ಅವನೇ ಶ್ರೀಮನ್ನಾರಾಯಣ' ಸಿನಿಮಾಗೆ ಸಹ ಅಜನೀಶ್ ಸಂಗೀತ ನೀಡಿಲಿದ್ದಾರೆ. 'ಕಿರಿಕ್ ಪಾರ್ಟಿ' ನಂತರ ಮತ್ತೆ ರಕ್ಷಿತ್, ಅಜನೀಶ್ ಒಂದಾಗಿದ್ದು, ಈ ಚಿತ್ರದ ಹಾಡುಗಳ ಮೇಲೆ ನಿರೀಕ್ಷೆ ಹೆಚ್ಚಿದೆ.

'ಜಾನಿ ಜಾನಿ ಎಸ್ ಪಪ್ಪ'

ದುನಿಯಾ ವಿಜಯ್ ಅವರ 'ಜಾನಿ ಜಾನಿ ಎಸ್ ಪಪ್ಪ' ಚಿತ್ರದಲ್ಲಿಯೂ ಅಜನೀಶ್ ಸಂಗೀತ ಇರಲಿದೆ. ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ ಆಗಿದ್ದು, ಪ್ರೀತಂ ಗುಬ್ಬಿ ನಿರ್ದೇಶನ ಮಾಡಿದ್ದಾರೆ.

'ಬೆಲ್ ಬಾಟಂ'

ಇತ್ತೀಚಿಗಷ್ಟೆ ಮುಹೂರ್ತ ಆದ 'ಬೆಲ್ ಬಾಟಂ' ಸಿನಿಮಾಗೆ ಸಹ ಅಜನೀಶ್ ಆಯ್ಕೆ ಆಗಿದ್ದಾರೆ. ಜಯತೀರ್ಥ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ.

ಕೆ. ಮಂಜು ಪುತ್ರನ ಚಿತ್ರ

ಖ್ಯಾತ ನಿರ್ಮಾಪಕ ಕೆ.ಮಂಜು ಅವರ ಮಗನ ಮೊದಲ ಸಿನಿಮಾಗೆ ಸಹ ಅಜನೀಶ್ ಲೋಕನಾಥ್ ಸಂಗೀತ ನೀಡಲಿದ್ದಾರೆ.

ಕನ್ನಡದ ಈ ಸಂಗೀತ ಯುವ ನಿರ್ದೇಶಕರಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್!

ತಮಿಳು ಸಿನಿಮಾ

ತಮಿಳಿನಲ್ಲಿ 'ನಿಮಿರ್' ಎಂಬ ಚಿತ್ರಕ್ಕೆ ಅಜನೀಶ್ ಸಂಗೀತ ಕೊಟ್ಟಿದ್ದು ಈ ಹಾಡುಗಳು ಈಗ ಕಾಲಿವುಡ್ ನಲ್ಲಿ ದೊಡ್ಡ ಜನಪ್ರಿಯತೆಯನ್ನು ಗಳಿಸುತ್ತಿದೆ.

ಟಾಲಿವುಡ್ 'ಕಿರಕ್ ಪಾರ್ಟಿ'

'ಕಿರಿಕ್ ಪಾರ್ಟಿ' ಸಿನಿಮಾದ ತೆಲುಗು ರಿಮೇಕ್ 'ಕಿರಕ್ ಪಾರ್ಟಿ' ಚಿತ್ರಕ್ಕೆ ಸಹ ಅಜನೀಶ್ ಮ್ಯೂಸಿಕ್ ಮಾಡಿದ್ದರು. ಈ ಮೂಲಕ ಟಾಲಿವುಡ್ ನಲ್ಲಿ ಕೂಡ ಅಜನೀಶ್ ತಮ್ಮ ಟ್ಯಾಲೆಂಟ್ ತೋರಿಸಿದ್ದಾರೆ.

English summary
Kannada music director Ajaneesh Loknath in demand. He have 6 movies in his hand.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada