Mano Murthy: ಮತ್ತೊಂದು ಮ್ಯೂಸಿಕಲ್ ಸಿನಿಮಾದೊಂದಿಗೆ ಮರಳಿದ ಮನೋಮೂರ್ತಿ

ಕನ್ನಡ ಚಿತ್ರರಂಗದಲ್ಲಿ ಹೊಸ ಚಿತ್ರಗಳಿಗೆ ಕೊರತೆ ಇಲ್ಲ. ಸಾಕಷ್ಟು ಮಂದಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟು ಹೊಸ ಪ್ರಯೋಗ ಮಾಡುತ್ತಾ ಇರುತ್ತಾರೆ. ವಾರಕ್ಕೆ ಮೂರು, ನಾಲ್ಕು ಚಿತ್ರಗಳಾದರೂ ಕೂಡ ಸೆಟ್ಟೇರುತ್ತವೆ. ಅದರಲ್ಲಿ ಒಂದು ಹೊಸಬರ ಮ್ಯೂಸಿಕಲ್ ಸಿನಿಮಾ 'ಸಂಭ್ರಮ'.

'ಸಂಭ್ರಮ' ಎನ್ನುವ ಟೈಟಲ್‌ನಲ್ಲಿ ಹೊಸಬರ ಸಿನಿಮಾ ಒಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಮ್ಯೂಸಿಕಲ್ ಜರ್ನಿಯನ್ನು ಆಧರಿಸಿ ಸಿನಿಮಾ. ಮ್ಯೂಸಿಕಲ್ ಜರ್ನಿಯೇ ಕಥೆ ಅಂದ್ಮೇಲೆ ಅಲ್ಲಿ ಸಂಗೀತ ನಿರ್ದೇಶಕ ಮುಖ್ಯ ಆಗುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಮೆಲೋಡಿ ಕಿಂಗ್ ಅಂತಲೇ ಹೆಸರುವಾಸಿ ಆಗಿರುವ ಮನೋಮೂರ್ತಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮನೋಮೂರ್ತಿ ಅವರ ಅದ್ಭುತ ಹಾಡುಗಳಿಗಾಗಿ ಸಂಗೀತ ಪ್ರಿಯರು ಕಾಯುತ್ತಿದ್ದಾರೆ. ಕೆಲ ಕಾಲ ಗ್ಯಾಪ್ ತೆಗೆದುಕೊಂಡಿದ್ದ ಅವರು ಈಗ ಮತ್ತೆ ಹಿಟ್ ಹಾಡುಗಳನ್ನು ನೀಡುವ ಸೂಚನೆ ನೀಡಿದ್ದಾರೆ.

'ಸಂಭ್ರಮ' ಚಿತ್ರದಲ್ಲಿ ಒಟ್ಟು 10 ಹತ್ತು ಹಾಡುಗಳಿವೆ. ಸಾಹಿತಿ ಜಯಂತ್ ಕಾಯ್ಕಿಣಿ ಮೂರು ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಚಿನ್ಮಯ್ ಭಾವಿಕೆರೆ, ಶ್ರೀ ಸಂಭ್ರಮ, ವೀರೇಂದ್ರ ಶೆಟ್ಟಿ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಈ ಚಿತ್ರದಲ್ಲಿ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

Kannada Music Director Mano Murthy Back With a Musical Film

ಇನ್ನು ಚಿತ್ರದ ಮತ್ತೊಂದು ವಿಶೇಷ ಅಂದರೆ, ಸಿಂಕ್ ಸೌಂಡ್ ಬಳಸಿ ಸಿನಿಮಾವನ್ನು ಶೂಟ್ ಮಾಡಲಾಗಿದೆ. ವಿನಯ್ ಕುಮಾರ್ ಎಸ್ ವಿಕೆ, ಮಂಜುನಾಥ್ ಹೆಗ್ಡೆ ಕ್ಯಾಮೆರಾ ವರ್ಕ್, ತೇಜಸ್ ರಾಜ್ ಸಂಕಲನ ಸಿನಿಮಾಕ್ಕಿದ್ದು, ರಾಮಕೃಷ್ಣ ನಿಗಾದೆ, ನಾಗರಾಜ್ ಗುಡಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದೇ ಯುಗಾದಿ ಹಬ್ಬಕ್ಕೆ ಚಿತ್ರದ ಮೊದಲ ಹಾಡು ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.

Kannada Music Director Mano Murthy Back With a Musical Film

ರಂಗಭೂಮಿ‌ ಕಲಾವಿದ ಶ್ರೀ ಸಂಭ್ರಮ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಹೊಸ ಪ್ರತಿಭೆಗಳಾದ ವೀರೇಂದ್ರ ಶೆಟ್ಟಿ, ಅಭಯ್ ವೀರ್, ರಿಧಿ ರಾಥೋರ್, ಕಿರಣ್ ಕುಮಾರ್, ಯಶವಂತ್, ರಾಘವೇಂದ್ರ , ಸ್ಪೂರ್ತಿ ಹಾಗೂ ಸವಿತಾ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ 'ಸಂಭ್ರಮ' ಸಿನಿಮಾದಲ್ಲಿ ಹೊಸಪೇಟೆ, ಗಂಗಾವತಿ, ಸಿಂಧನೂರು ಸುತ್ತಮುತ್ತ 47 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಸದ್ಯದಲ್ಲೇ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ.

More from Filmibeat

English summary
After Years kannada Music Director Mano Murthy Back With A Musical Film
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X