twitter
    For Quick Alerts
    ALLOW NOTIFICATIONS  
    For Daily Alerts

    ಈ 10 ಹಾಡುಗಳನ್ನು ಕೇಳದೆ ಕನ್ನಡ ರಾಜ್ಯೋತ್ಸವ ಪೂರ್ತಿ ಆಗಲ್ಲ

    |

    ಕನ್ನಡ ಭಾಷೆ, ನೆಲ-ಜಲ, ನಾಡು-ನುಡಿ ಕುರಿತು ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಹಲವು ಹಾಡುಗಳು ಬಂದಿದೆ. ಆದರೆ ಕೆಲವು ಹಾಡುಗಳನ್ನ ಮಾತ್ರ ಪದೇ ಪದೇ ಕೇಳಬೇಕು ಎನಿಸುತ್ತೆ.

    ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಂತೂ ಒಂದೊಂದು ಹಾಡುಗಳನ್ನ ಎಷ್ಟೆಷ್ಟು ಬಾರಿ ಕೇಳ್ತಿವಿ ಎನ್ನುವುದರ ಬಗ್ಗೆ ಲೆಕ್ಕವೇ ಇರಲ್ಲ. ಕೇಳಿದ್ದ ಹಾಡನ್ನೆ ಮತ್ತೆ ಮತ್ತೆ ಟ್ಯೂನ್ ಮಾಡ್ತೀವಿ.

    ಕನ್ನಡ ರಾಜ್ಯೋತ್ಸವ ಸೀಸನ್ ಬಂತಂದ್ರೆ, ಕರ್ನಾಟಕದ ಯಾವುದೇ ಮೂಲೆಯಲ್ಲೂ ಕೇಳಿದ್ರೆ ಈ ಹತ್ತು ಕನ್ನಡ ಹಾಡುಗಳಂತೂ ಸದ್ದು ಮಾಡ್ತಾನೆ ಇರುತ್ತೆ. ಹಾಗಿದ್ರೆ, ಕನ್ನಡ ಕುರಿತು ಹಾಡುಗಳು ಅಂದಾಗ ಥಟ್ ನೆನಪಾಗುವ ಟಾಪ್ 10 ಹಾಡುಗಳು ಯಾವುದು? ಮುಂದೆ ಓದಿ...

    ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು....

    ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು....

    'ಆಕಸ್ಮಿಕ' ಚಿತ್ರದ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು....' ಹಾಡು ಒಂಥರಾ ಕರ್ನಾಟಕದ ಎರಡನೇ ನಾಡಗೀತೆ ಎನ್ನಬಹುದು. ಕನ್ನಡದ ಹೆಮ್ಮೆ ಎನಿಸಿಕೊಂಡಿರುವ ಈ ಹಾಡು ಈ ಪಟ್ಟಿಯಲ್ಲಿ ಮೊದಲು ನಿಲ್ಲುತ್ತೆ. ಹಂಸಲೇಖ ಸಾಹಿತ್ಯ ಮತ್ತು ಸಂಗೀತ ನೀಡಿರುವ ಈ ಹಾಡನ್ನ ಸ್ವತಃ ರಾಜ್ ಕುಮಾರ್ ಹಾಡಿದ್ದಾರೆ.

    'ಹುಟ್ಟಿದರೆ ಕನ್ನಡ ನಾಡಿನಲ್ಲಿಹುಟ್ಟಬೇಕು' ಹಾಡು ಹುಟ್ಟಿದ ರೋಚಕ ಕಥೆ'ಹುಟ್ಟಿದರೆ ಕನ್ನಡ ನಾಡಿನಲ್ಲಿಹುಟ್ಟಬೇಕು' ಹಾಡು ಹುಟ್ಟಿದ ರೋಚಕ ಕಥೆ

    ಕನ್ನಡವೇ ನಮ್ಮಮ್ಮ....

    ಕನ್ನಡವೇ ನಮ್ಮಮ್ಮ....

    ಡಾ ವಿಷ್ಣುವರ್ಧನ್ ನಟಿಸಿದ್ದ 'ಮೋಜುಗಾರ ಸೊಗಸುಗಾರ' ಚಿತ್ರದಲ್ಲಿ ಬರುವ 'ಕನ್ನಡವೇ ನಮ್ಮಮ್ಮ ಅವಳಿಗೆ ಕೈಮುಗಿಯಮ್ಮ....' ಹಾಡನ್ನು ಕೇಳಲು ಯಾವ ಕನ್ನಡಿಗರು ಮರೆಯಲ್ಲ. ಈ ಹಾಡಿಗೆ ಹಂಸಲೇಖ ಅವರೇ ಸಾಹಿತ್ಯ ರಚಿಸಿ ಸಂಗೀತ ನೀಡಿದ್ದಾರೆ. ವಿಷ್ಣುವರ್ಧನ್ ಸ್ವತಃ ಹಾಡಿದ್ದಾರೆ.

    ಕರುನಾಡ ತಾಯಿ ಸದಾ ಚಿನ್ಮಯಿ

    ಕರುನಾಡ ತಾಯಿ ಸದಾ ಚಿನ್ಮಯಿ

    ರವಿಚಂದ್ರನ್ ಅಭಿನಯಿಸಿರುವ 'ನಾನು ನನ್ನ ಹೆಂಡ್ತಿ' ಚಿತ್ರದಲ್ಲಿ ಬರುವ ''ಕರುನಾಡ ತಾಯಿ ಸದಾ ಚಿನ್ಮಯಿ....' ಹಾಡನ್ನ ಒಮ್ಮೆ ಕೇಳದ ಕನ್ನಡ ರಾಜ್ಯೋತ್ಸವ ದಿನ ಮುಗಿಯದು. ಶಂಕರ್ ಗುರು ಸಂಗೀತ, ಹಂಸಲೇಖ ಸಾಹಿತ್ಯ ಹಾಗೂ ಎಸ್ ಪಿ ಬಿ ಧ್ವನಿ ಈ ಹಾಡಿಗೆ ಗೌರವ ಹೆಚ್ಚಿಸಿತ್ತು.

    ಈ ಕನ್ನಡ ಹೆಣ್ಣನು ಮರಿಬೇಡ...

    ಈ ಕನ್ನಡ ಹೆಣ್ಣನು ಮರಿಬೇಡ...

    ರೆಬೆಲ್ ಸ್ಟಾರ್ ಅಂಬರೀಶ್ ನಟಿಸಿರುವ 'ಸೋಲಿಲ್ಲದ ಸರದಾರ' ಚಿತ್ರದಲ್ಲಿ ಬರುವ ''ಈ ಕನ್ನಡ ಹೆಣ್ಣನು ಮರಿಬೇಡ....'' ಹಾಡನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಕರ್ನಾಟಕ ಸಂಸ್ಕ್ರತಿಯ ಇತಿಹಾಸದ ಕುರಿತು ಈ ಹಾಡು ಒಮ್ಮೆ ಕೇಳಿದ್ರೆ ರೋಮಾಂಚನವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಎಸ್ ಪಿ ಬಾಲಸುಬ್ರಮಣ್ಯಂ ಈ ಹಾಡು ಹಾಡಿದ್ದು, ಹಂಸಲೇಖ ಸಾಹಿತ್ಯ ರಚಿಸಿ ಸಂಗೀತ ನೀಡಿದ್ದಾರೆ.

    ಕರುನಾಡೆ.....

    ಕರುನಾಡೆ.....

    ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿರುವ 'ಮಲ್ಲ' ಚಿತ್ರದಲ್ಲಿ ಬರುವ 'ಕರುನಾಡೆ...' ಹಾಡು ಕೇಳುವುದನ್ನ ಕೂಡ ಕನ್ನಡಿಗರ ಮರೆಯಲ್ಲ. ಸ್ವತಃ ರವಿಚಂದ್ರನ್ ಸಾಹಿತ್ಯ ಬರೆದು, ಸಂಗೀತ ನೀಡಿದ್ದರು.

    ಕೇಳಿಸದೆ ಕಲ್ಲು ಕಲ್ಲಿನಲಿ...

    ಕೇಳಿಸದೆ ಕಲ್ಲು ಕಲ್ಲಿನಲಿ...

    ಸುನಿಲ್ ಮತ್ತು ಮಾಲಾಶ್ರೀ ನಟನೆಯ 'ಬೆಳ್ಳಿ ಕಾಲುಂಗರ' ಚಿತ್ರದಲ್ಲಿ ಬರುವ 'ಕೇಳಿಸದೆ ಕಲ್ಲು ಕಲ್ಲಿನಲಿ....' ಹಾಡು ಕನ್ನಡಿಗರ ನೆಚ್ಚಿನ ಗೀತೆ. ಹಂಸಲೇಖ ಸಂಗೀತದ ಈ ಹಾಡನ್ನ ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಚಿತ್ರಾ ಹಾಡಿದ್ದಾರೆ.

    ಕರ್ನಾಟಕದ ಇತಿಹಾಸದಲ್ಲಿ....

    ಕರ್ನಾಟಕದ ಇತಿಹಾಸದಲ್ಲಿ....

    ವಿಷ್ಣುವರ್ಧನ್ ಮತ್ತು ರಮ್ಯಾಕೃಷ್ಣ ನಟಿಸಿರುವ 'ಕೃಷ್ಣ-ರುಕ್ಮಿಣಿ' ಚಿತ್ರದಲ್ಲಿ ಬರುವ ''ಕರ್ನಾಟಕದ ಇತಿಹಾಸದಲಿ....'' ಹಾಡು ಟಾಪ್ ಹತ್ತರ ಪಟ್ಟಿಯಲ್ಲಿ ಬರುತ್ತೆ. ಕೆವಿ ಮಹಾದೇವನ್ ಈ ಹಾಡಿಗೆ ಸಂಗೀತ ನೀಡಿದ್ದಾರೆ.

    ಕನ್ನಡದ ಮಾತು ಚೆನ್ನ...

    ಕನ್ನಡದ ಮಾತು ಚೆನ್ನ...

    ಶಿವರಾಜ್ ಕುಮಾರ್ ನಟಿಸಿದ್ದ 'ಸಮರ' ಸಿನಿಮಾದಲ್ಲಿ ಈ ಹಾಡು ಬರುತ್ತೆ. 'ಕನ್ನಡದ ಮಾತು ಚೆನ್ನ...ಕನ್ನಡದ ನೆಲ ಚೆನ್ನ...' ಎಂಬ ಈ ಹಾಡನ್ನ ಡಾ ರಾಜ್ ಕುಮಾರ್ ಹಾಡಿರುವುದು ವಿಶೇಷ.

    ಕನ್ನಡ ನಾಡಿನ ಜೀವನದಿ

    ಕನ್ನಡ ನಾಡಿನ ಜೀವನದಿ

    ಡಾ ವಿಷ್ಣುವರ್ಧನ್ ಮತ್ತು ಖುಷ್ಬೂ ನಟಿಸಿದ್ದ 'ಜೀವನದಿ' ಸಿನಿಮಾದಲ್ಲಿ ಬರುವ 'ಕನ್ನಡ ನಾಡಿನ ಜೀವನದಿ.....' ಹಾಡನ್ನ ಮರೆಯುವಂತಿಲ್ಲ. ಆರ್ ಎನ್ ರಾಜಗೋಪಾಲ್ ಸಾಹಿತ್ಯ ಮತ್ತು ಎಸ್ ಪಿ ಬಾಲಸುಬ್ರಮಣ್ಯಂ ಗಾಯನ ಅದ್ಭುತ

    ಹೇ ರುಕ್ಕಮ್ಮ....

    ಹೇ ರುಕ್ಕಮ್ಮ....

    ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿರುವ 'ಸಿಪಾಯಿ' ಸಿನಿಮಾದಲ್ಲಿ ಬರುವ ' ಹೇ ರುಕ್ಕಮ್ಮಾ......' ಹಾಡು ಕೂಡ ಕನ್ನಡ ಕುರಿತಾಗಿಯೇ ಇದೆ. ಕನ್ನಡ ಜನ ಹೇಗೆ, ಕನ್ನಡ ಸಂಸ್ಕೃತಿ ಹೇಗೆ ಎಂದು ಹೇಳಿರುವ ಹಾಡಿದು.

    ಇನ್ನು ಹಲವು ಹಾಡುಗಳನ್ನ ಮರೆಯುವಂತಿಲ್ಲ....

    ಇನ್ನು ಹಲವು ಹಾಡುಗಳನ್ನ ಮರೆಯುವಂತಿಲ್ಲ....

    ಸಿಂಹಾದ್ರಿಯ ಸಿಂಹ ಸಿನಿಮಾದ 'ಕಲ್ಲಾದರೆ ನಾನು....', ಒಂದು ಸಿನಿಮಾ ಕಥೆ ಚಿತ್ರದ 'ಕನ್ನಡ ಹೊನ್ನುಡಿ ದೇವಿಯನು....' ಹಾಡು, ಎಕೆ 47 ಚಿತ್ರದ 'ನಾನು ಕನ್ನಡದ ಕಂದ' ಹಾಡು, ಅಪ್ಪಾಜಿ ಚಿತ್ರದ 'ಏನೇ ಕನ್ನಡತಿ...' ಹಾಡು, ಪುಟ್ನಂಜ ಚಿತ್ರದ 'ನಮ್ಮಮ್ಮ ನಮ್ಮಮ್ಮ' ಹಾಡು ಹೀಗೆ ಹೇಳುತ್ತಾ ಹೋದರೆ ನೂರಾರು ಸಂಖ್ಯೆಯ ಕನ್ನಡದ ವೈಭವ ಹೆಚ್ಚಿಸಿರುವ ಹಾಡುಗಳಿದೆ.

    English summary
    November 1.....we are celebrating Kannada Rajyotsava. this top ten kannada songs rise the josh of Rajyotsava.
    Thursday, October 31, 2019, 19:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X