Kannada Rajyotsav:ಕನ್ನಡ ಪ್ರೇಮ ಉಕ್ಕಿಸುವ ಎಸ್‌ಪಿಬಿ ಅವರ ಈ ಹಾಡುಗಳನ್ನು ಆಲಿಸುತ್ತಾ ಕನ್ನಡ ರಾಜ್ಯೋತ್ಸವ ಆಚರಿಸೋಣ
ನಾಡಿನೆಲ್ಲೆಡೆ ಕನ್ನಡಿಗರ ಹಬ್ಬ ಕನ್ನಡ ರಾಜ್ಯೋತ್ಸವ ಆಚರಣೆ ಸಂಭ್ರಮದಿಂದ ನಡೆಯುತ್ತಿದೆ. ಈ ತಿಂಗಳು ಪೂರ್ತಿ ಎಲ್ಲಿ ನೋಡಿದರೂ ಕೆಂಪು ಹಳದಿ ಬಾವುಟಗಳೇ ರಾರಾಜಿಸಲಿದ್ದು, ಕನ್ನಡನಾಡು ಅರಿಶಿಣ ಕುಂಕುಮದಲ್ಲಿ ಮುಳುಗೇಳಲಿದೆ. ಈ ಕನ್ನಡ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡುವುದು ಕನ್ನಡ ನಾಡು ನುಡಿಯ ಬಗ್ಗೆ ಚಂದನವನದಿಂದ ಬಂದ ಅಪ್ಪಟ ಮಣ್ಣಿನ ಹಾಡುಗಳು.
ಕನ್ನಡ ಪ್ರೇಮವನ್ನು ವರ್ಣರಂಜಿತವಾಗಿ ಕಟ್ಟಿಕೊಡುವಲ್ಲಿ ಸಿನಿಮಾರಂಗದ ಕೊಡುಗೆಯೂ ಸಾಕಷ್ಟಿದೆ. ಕನ್ನಡ ಸಂಸ್ಕೃತಿ ಮತ್ತು ಕಲೆಯ ಕುರಿತಾದ ಅನೇಕ ಚಲನಚಿತ್ರ ಗೀತೆಗಳು ಕನ್ನಡಿಗರಲ್ಲಿ ಭಾಷೆ, ನಾಡಿನ ಮೇಲಿನಿ ಪ್ರೇಮವನ್ನು ಇಮ್ಮಡಿಗೊಳೊಸಲಿವೆ. ಅಂತಹುಗಳಲ್ಲಿ ದಿವಂಗತ ಖ್ಯಾತ ಗಾಯಕ ಎಸ್‌ಬಿ ಬಾಲಸುಬ್ರಹ್ಮಣ್ಯಂ ಅವರ ಕಂಠದಲ್ಲಿ ಮೂಡಿಬಂದ ಹತ್ತು ಹಾಡುಗಳ ಪಟ್ಟಿ ಇಲ್ಲಿದೆ. ಇವಿಗಳನ್ನು ಆಲಿಸುತ್ತಾ ಕನ್ನಡ ರಾಜ್ಯೋತ್ಸವವನ್ನು ಆಚರಿಸೋಣ.

ಎಸ್ ಪಿ ಬಾಲಸುಬ್ರಮಣ್ಯಂ ಹಾಡಿದ ಕನ್ನಡ ರಾಜ್ಯೋತ್ಸವ ಹಾಡುಗಳು
ಒಂದು ಸಿನಿಮಾ ಕಥೆ: ಕನ್ನಡದ ಹೊನ್ನುಡಿ ದೇವಿಯನು
ಒಂದೂ ಸಿನಿಮಾ ಕಥೆ ಫಣಿ ರಾಮ ಚಂದ್ರ ನಿರ್ದೇಶನದ ಕನ್ನಡ ಚಲನಚಿತ್ರ. ಚಿತ್ರದ ತಾರಾಬಳಗದಲ್ಲಿ ಅನಂತ್ ನಾಗ್, ಹೆಚ್ ವಿ ಪ್ರಕಾಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ರಾಜನ್ ನಾಗೇಂದ್ರ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವನ್ನು ಕೃಷ್ಣ ಅವರು ಅಜ್ಞಾತ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಬಿಡುಗಡೆ ದಿನಾಂಕ ಒಂದು ಸಿನಿಮಾ ಕಥೆ ಚಿತ್ರ 1992 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದ 'ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ' ಹಾಡಿನಲ್ಲಿ ಕನ್ನಡದ ಕುಲತಿಲಕರಾದ ಸಾಹಿತಿಗಳನ್ನು ನೆನಪಿಸಿಕೊಳ್ಳಲಾಗಿದೆ.
ಜೀವನದಿ: ಕನ್ನಡ ನಾಡಿನ ಜೀವನದಿ
ಜೀವನದಿ ಡಿ.ರಾಜೇಂದ್ರ ಬಾಬು ನಿರ್ದೇಶನದ ಕನ್ನಡ ಚಲನಚಿತ್ರ. ಚಿತ್ರದ ತಾರಾಬಳಗದಲ್ಲಿ ವಿಷ್ಣುವರ್ಧನ್, ಖುಷ್ಬೂ ಸುಂದರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕೋಟಿ ಸಂಗೀತ ಸಂಯೋಜಿಸಿದ್ದಾರೆ. ಅಜ್ಞಾತ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ಧನರಾಜ್ ಪಿ ನಿರ್ಮಿಸಿದ್ದಾರೆ. ಸಿನಿಮಾದ ಕನ್ನಡ ನಾಡಿನ ಜೀವನದಿ ಈ ಕಾವೇರಿ ಹಾಡು ಇಂದಿಗೂ ಜನಮಾನಸದಲ್ಲಿ ನೆಲೆಸಿದೆ.
ತಿರುಗು ಬಾಣ: ಇದೇ ನಾಡು ಇದೇ ಭಾಷೆ ಎಂದೆಂದು ನನ್ನದಾಗಿರಲಿ
ತಿರುಗು ಬಾಣ ಸಿನಿಮಾದ ಇದೇ ನಾಡು ಇದೇ ಭಾಷೆ ಎಂದೆಂದು ನನ್ನದಾಗಿರಲಿ ಹಾಡು ಕನ್ನಡಿಗರ ನೆಚ್ಚಿನ ಹಾಡುಗಳಲ್ಲಿ ಒಂದು. ಎಸ್‌ಪಿಬಿ ಕಂಠದಲ್ಲಿ ಮೂಡಿಬಂದ ಈ ಹಾಡು ಕನ್ನಡಿಗರ ಹೆಮ್ಮೆ. ಎಸ್ ಆರ್ ದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಮತ್ತು ಆರತಿ ಮುಖ್ಯ ಭೂಮಿಕೆಯಲ್ಲಿದ್ದರೆ, ಹೇಮಾ ಚೌದರಿ, ಮಾಸ್ಟರ್ ಅರ್ಜುನ್, ಜಯಮಾಲಾ, ವಜ್ರಮುನಿ, ದಿನೇಶ್, ರಾಜಾನಂದ್, ರತ್ನಾಕರ್, ಬಿ ಹನುಮಂತಾಚಾರ್, ಕೆ ವಿ ಮಂಜಯ್ಯ, ಲಕ್ಷ್ಮಣ್, ಇಂದಿರಾ, ಮಲ್ಲಿಕಾ, ಲಲಿತಮ್ಮ, ಶಾಂತಮ್ಮ ಮುಂತಾದವರು ಕಾಣಿಸಿಕೊಂಡಿದ್ದರು.
ಸಿಪಾಯಿ: ಹೇ ರುಕ್ಕಮ್ಮ ನಮ್ಮ ಊರೇ ಊರಮ್ಮ
ಹಂಸಲೇಖ ಅವರ ಸಂಗೀತ ಮತ್ತು ಸಾಹಿತ್ಯದಲ್ಲಿ ಮೂಡಿಬಂದ ಸಿಪಾಯಿ ಸಿನಿಮಾದ ಹೇ ರುಕ್ಕಮ್ಮ ಹಾಡು ನಮ್ಮ ನಾಡು ನುಡಿ, ಊರಿನ ಬಗ್ಗೆ ನಮ್ಮಲ್ಲಿ ಪ್ರೇಮವನ್ನು ಇಮ್ಮಡಿಗೊಳಿಸಲಿದೆ. ಸಿಪಾಯಿ ರೋಮ್ಯಾನ್ಸ್ ಕಮ್ ಆಕ್ಷನ್ ಚಿತ್ರ. 1996 ರಲ್ಲಿ ಬಿಡುಗಡೆಯಾದ ಸಿನಿಮಾದಲ್ಲಿ ವಿ. ರವಿಚಂದ್ರನ್, ಸೌಂದರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ತೆಲುಗು ಸ್ಟಾರ್ ಚಿರಂಜೀವಿ ಕಾಣಿಸಿಕೊಂಡಿದ್ದರು.
ನಾನು ನನ್ನ ಹೆಂಡ್ತಿ: ಕರುನಾಡ ತಾಯಿ ಸದಾ ಚಿನ್ಮಯಿ
ಇದು ಡಿ. ರಾಜೇಂದ್ರ ಬಾಬು ನಿರ್ದೇಶನದ ರೋಮ್ಯಾಂಟಿಕ್ ಎಂಟರ್ಟೈನರ್ ನಾನು ನನ್ನ ಹೆಂಡ್ತಿ ಸಿನಿಮಾದ ಕರುನಾಡ ತಾಯಿ ಸದಾ ಚಿನ್ಮಯಿ ಹಾಡು ಕನ್ನಡ ತಾಯಿಗೆ ನಮನ ಸಲ್ಲಿಸುವಂತಹದ್ದು. ಚಿತ್ರದಲ್ಲಿ ವಿ. ರವಿಚಂದ್ರನ್ ಮತ್ತು ಊರ್ವಶಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಶ್ರೀ ಈಶ್ವರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಎನ್.ವೀರಸ್ವಾಮಿ ಈ ಚಿತ್ರವನ್ನು ನಿರ್ಮಿಸಿದರೆ, ಶಂಕರ್ ಗಣೇಶ್ ಸಂಗೀತ ಸಂಯೋಜಿಸಿದ್ದಾರೆ.
ಕೃಷ್ಣ ರುಕ್ಮಿಣಿ: ಕರ್ನಾಟಕದ ಇತಿಹಾಸದಲ್ಲಿ ಬಂಗಾರದ ಯುಗದ ಕಥೆಯನ್ನು
ಭಾರ್ಗವ ನಿರ್ದೇಶನದ ಕನ್ನಡ ಚಲನಚಿತ್ರ. ಚಿತ್ರದ ತಾರಾಬಳಗದಲ್ಲಿ ವಿಷ್ಣುವರ್ಧನ್, ರಮ್ಯಾಕೃಷ್ಣ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕೆ ವಿ ಮಹದೇವನ್ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾದ ಕರ್ನಾಟಕದ ಇತಿಹಾಸದಲ್ಲಿ ಬಂಗಾರದ ಯುಗದ ಕಥೆಯನ್ನು ಹಾಡಿನಲ್ಲಿ ಹಂಪಿಯ ವೈಭವವನ್ನು ತೋರಿಸಲಾಗಿದೆ. ಸಿನಿಮಾದ ಅಜ್ಞಾತ ಬ್ಯಾನರ್ ಅಡಿಯಲ್ಲಿ ಅಜ್ಞಾತರು ಚಿತ್ರವನ್ನು ನಿರ್ಮಿಸಿದ್ದಾರೆ.
ಸೋಲಿಲ್ಲದ ಸರದಾರ: ಕನ್ನಡ...ರೋಮಾಮಚನವೀ ಕನ್ನಡ.. ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ
ಸೋಲಿಲ್ಲದ ಸರದಾರ ಸಿನಿಮಾದ ಕನ್ನಡ...ರೋಮಾಮಚನವೀ ಕನ್ನಡ.. ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ, ಈ ಮಣ್ಣಿನ ಹೆಣ್ಣುನು ಜರಿಬೇರ ಹಾಡು ಸಕತ್ ಫೇಮಸ್. ಬುದ್ದಿವಾದ ಹೇಳುವಂತಿರುವ ಈ ಹಾಡಿನಲ್ಲಿ ಅಂಬರೀಶ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಂಬರೀಶ್, ಮಾಲಾಶ್ರೀ ಮತ್ತು ಭವ್ಯ ಮುಖ್ಯ ಭೂಮಿಕೆಯಲ್ಲಿದ್ದಾರೆ. ವಿಜಯ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಕೆ. ಪ್ರಭಾಕರ್ ನಿರ್ಮಿಸಿರುವ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದಾರೆ.
ಸಿಂಹಾದ್ರಿಯ ಸಿಂಹ: ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಸಿಂಹಾದ್ರಿಯ ಸಿಂಹ ಸಿನಿಮಾದ ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ ಹಾಡು ಕನ್ನಡ ನಾಡಿನ ಬಗ್ಗೆ ಇರುವ ಪ್ರೀತಿ ಸಾರುತ್ತದೆ. ಹಾಡಿನ ಸಾಹಿತ್ಯ ಬರೆದವರು ಎಸ್. ನಾರಾಯಣ್ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕಲ್ಲಾದರೆ ನಾನು ಹಾಡಿಗೆ ಸಂಗೀತ ಕೊಟ್ಟವರು ದೇವಾ. ಸಿನಿಮಾದಲ್ಲಿ ವಿಷ್ಣುವರ್ಧನ್, ಮೀನಾ, ಭಾನುಪ್ರಿಯಾ, ಅಭಿನೀತ್, ಉಮಾಶ್ರೀ, ಅಭಿಜಿತ್ ಸೇರಿ ದೊಡ್ಡ ತಾರಾಬಳಗವಿದೆ.


Click it and Unblock the Notifications











