twitter
    For Quick Alerts
    ALLOW NOTIFICATIONS  
    For Daily Alerts

    'ಸೋರುತಿಹುದು ಮನೆಯ ಮಾಳಿಗಿ’ ಎಂದ ರ್‍ಯಾಪರ್ ಆಲ್ ಓಕೆ

    By ಫಿಲ್ಮಿಬೀಟ್ ಕನ್ನಡ
    |

    ಕನ್ನಡದ ರ್ಯಾಪ್ ಲೋಕದಲ್ಲಿ ಕೆಲವು ಪ್ರತಿಭಾವಂತ ರ್‍ಯಾಪರ್ ಗಳಿದ್ದಾರೆ. ಅವರಲ್ಲಿ ಆಲ್‌ ಓಕೆ ಪ್ರಮುಖರು. ಕೆಲವು ಒಳ್ಳೆಯ ರ್‍ಯಾಪ್ ಹಾಡುಗಳನ್ನು ಕನ್ನಡಕ್ಕೆ ನೀಡಿರುವ ಆಲ್‌ ಓಕೆ ಇದೀಗ ಹೊಸದೊಂದು ಹಾಡಿನೊಂದಿಗೆ ಬಂದಿದ್ದಾರೆ.

    ರ್‍ಯಾಪ್ ಹಾಡುಗಳ ಮೂಲಕ ಸಂದೇಶ ನೀಡುವ ಪ್ರಯತ್ನದಲ್ಲಿ ನಿರತರಾಗಿರುವ ಆಲ್ ಓಕೆ, ಇದೀಗ ಸಂತ ಶಿಶುನಾಳ ಶರೀಫರ 'ಸೋರುತಿಹುದು ಮನೆಯ ಮಾಳಿಗಿ' ಹಾಡನ್ನು ರ್‍ಯಾಪ್ ಸಂಗೀತಕ್ಕೆ ಒಗ್ಗಿಸಿದ್ದಾರೆ.

    ಕನ್ನಡದ ರ್‍ಯಾಪರ್ ಆಲೋಕ್ ಬಾಬು ಊರೂಫ್ ಆಲ್ ಓಕೆ ಕುಲಕೋಟಿ ಕನ್ನಡಿಗರು ಸಂಗೀತ ಪ್ರಿಯರು ಆಸ್ವಾದಿಸುವ ಮತ್ತೊಂದು ಗಾಯನವನ್ನು ಉಣಬಡಿಸಿದ್ದಾರೆ. ತಮ್ಮದೇ ರ್‍ಯಾಪ್, ಹಿಪಾಪ್ ಸ್ಟೈಲ್ ಹಾಡುಗಳನ್ನು ಮಾಡ್ತಾ ಸಂಗೀತಯಾನದಲ್ಲಿ ಫಂಟರ್ ಆಗಿರುವ ಆಲ್ ಓಕೆ ಈಗ ಶರೀಫ್ ಅಜ್ಜರ 'ಸೋರುತಿವುದು ಮನೆಯ ಮಾಳಿಗಿ' ಜನಪದ ಹಾಡಿಗೆ ರ್‍ಯಾಪ್ ಸ್ಪರ್ಶ ಕೊಟ್ಟು ಅದ್ಭುತವಾಗಿ ಹಾಡನ್ನು ರೂಪಿಸಿದ್ದಾರೆ.

    Kannada Rapper All Oks New Kannada Rap Song Released

    ಕನ್ನಡದ ಮಟ್ಟಿಗೆ ಹೊಸತನ, ವಿಶೇಷತನದಿಂದ ಕೂಡಿರುವ 'ಸೋರುತಿವುದು ಮನೆಯ ಮಾಳಿಗಿ' ಆಲ್ಬಂ ಹಾಡಿನಲ್ಲಿ ಅಜ್ಞಾನದ ಕುರಿತು ಪ್ರತಿಯೊಬ್ಬರಿಗೂ ಪ್ರೇರಣೆ ತುಂಬುವಂತಹ ಸಾಹಿತ್ಯವಿದೆ. ಈ ಹಾಡಿಗೆ ಆಲ್ ಓಕೆ ಸಾಹಿತ್ಯ, ಸಂಗೀತ, ನಿರ್ಮಾಣ-ನಟನೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಬ್ಲಾಕ್ ಅಂಡ್ ವೈಟ್ ಥೀಮ್ ನಲ್ಲಿ ಮೂರು ಶೇಡ್ ನಲ್ಲಿ ಕಾಣಿಸಿಕೊಂಡಿರುವ ಆಲ್ ಓಕೆ ಕಾಸ್ಟ್ಯೂಮ್ ಸ್ಟೈಲ್, ಲೋಕೇಷನ್, ಮೇಕಿಂಗ್ ಎಲ್ಲವೂ ಅದ್ಧೂರಿಯಾಗಿ ಮೂಡಿ ಬಂದಿದೆ.

    ಸಂತ ಶಿಶುನಾಳ ಶರೀಫರ ಹಾಡಿನಿಂದ ಸ್ಫೂರ್ತಿ ಪಡೆದು ತಯಾರಿಸುವ ಹಾಡಿಗೆ ರಾಜಾ ರಾಮ್ ರಾಜೇಂದ್ರನ್ ನಿರ್ದೇಶನ ಹಾಗೂ ಛಾಯಾಗ್ರಾಹಣ, ಜೋಲ್ಸನ್ ಪಣಿಕರ್ ಸಂಕಲನ ಹಾಗೂ ಗ್ರಾಫಿಕ್ ಜವಾಬ್ದಾರಿ ನಿರ್ವಹಿಸಿದ್ದಾರೆ. ಕಳೆದ 19 ವರ್ಷಗಳಿಂದ ಕನ್ನಡ ರ್ಯಾಪ್ ದುನಿಯಾದಲ್ಲಿ ತಮ್ಮದೇ ಸ್ಟೈಲ್ ಕ್ರಿಯೇಟ್ ಮಾಡಿರುವ ಆಲ್ ಓಕೆ ಈಗ ಜನಪದ ಸಾಹಿತ್ಯದ ಉಳಿವಿಗಾಗಿ ಹೊಸ ಪ್ರಯೋಗ ಮಾಡಿದ್ದು, ಈ ವಿಭಿನ್ನತೆ ಹಾಡು ಪ್ರತಿಯೊಬ್ಬರಿಗೂ ಇಷ್ಟವಾಗುವುದರಲ್ಲಿ ಯಾವುದೇ ಸಂದೇಹ ಬೇಡ.

    Kannada Rapper All Oks New Kannada Rap Song Released

    ಭಿನ್ನ ವೇಷದಲ್ಲಿ ಆಲ್ ಓಕೆ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಯೂಟ್ಯೂಬ್‌ನಲ್ಲಿ 6 ಲಕ್ಷಕ್ಕೂ ಹೆಚ್ಚು ವೀವ್ಸ್‌ ಅನ್ನು ಕಡಿಮೆ ಅವಧಿಯಲ್ಲೇ ಗಳಿಸಿದೆ. ಈ ಹಿಂದೆಯೂ ಹಲವು ಒಳ್ಳೆಯ ಕನ್ನಡ ರ್‍ಯಾಪ್ ಗಳನ್ನು ಆಲ್ ಓಕೆ ನೀಡಿದ್ದಾರೆ.

    English summary
    Kannada rapper all Ok's new Kannada rap song Soruthihudu Maneya Maligi released. All Ok is one of the best Kannada rapper.
    Saturday, June 18, 2022, 16:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X