For Quick Alerts
  ALLOW NOTIFICATIONS  
  For Daily Alerts

  ಹೊಸ 'ಫಂಕಿ ಪ್ರೇಮಗೀತೆ' ಬಿಡುಗಡೆ ಮಾಡಿದ ಚಂದನ್ ಶೆಟ್ಟಿ

  |

  ಸಾಮಾನ್ಯವಾಗಿ ಪಾರ್ಟಿ ಹಾಡುಗಳನ್ನು ಮಾಡಿ ಬಿಡುಗಡೆ ಮಾಡುತ್ತಿದ್ದ ಚಂದನ್ ಶೆಟ್ಟಿ ಈ ಬಾರಿ ಪ್ರೇಮಗೀತೆಯೊಂದನ್ನು ಮಾಡಿ ಬಿಡುಗಡೆ ಮಾಡಿದ್ದಾರೆ.

  'ಸಲಿಗೆ' ಹೆಸರಿನ ಸಿಂಗಲ್ ಆಲ್ಬಂ ಅನ್ನು ಚಂದನ್ ಶೆಟ್ಟಿ ಮೇ 28 ರಂದು ಬಿಡುಗಡೆ ಮಾಡಿದ್ದು, ಪ್ರೇಮಿಯೊಬ್ಬ ಪ್ರೀತಿಯಿಂದಾಗಿ ಆದ ಬದಲಾವಣೆಗಳನ್ನು ಹೇಳಿಕೊಳ್ಳುವ ಮಾದರಿಯಲ್ಲಿ ಈ ಹಾಡಿದೆ.

  ಹಾಡನ್ನು ಕೆನಡಾದಲ್ಲಿ ಚಿತ್ರೀಕರಿಸಲಾಗಿದೆ. ಹೆಚ್ಚೇನೂ ಖರ್ಚಿಲ್ಲದೆ ತಮ್ಮ ಹಾಡನ್ನು ತಾವೇ ಶೂಟ್ ಮಾಡಿ ತಾವೇ ನರ್ತಿಸಿದ್ದಾರೆ ಚಂದನ್ ಶೆಟ್ಟಿ. ಈ ಹಾಡನ್ನು ಎರಡು ವರ್ಷಗಳ ಹಿಂದೆ ಶೂಟ್ ಮಾಡಿದ್ದರಂತೆ ಚಂದನ್. ಈಗ ಬಿಡುಗಡೆ ಮಾಡುತ್ತಿದ್ದಾರೆ.

  'ತುಸು ಬದಲಾವಣೆ ಬೇಕು ಎನಿಸಿತು ಜೊತೆಗೆ ನನ್ನ ಪ್ರೇಕ್ಷಕರಿಗೆ ಒಂದು ಮಾದರಿ ಸರ್ಪ್ರೈಸ್ ಕೊಡುವ ಎಂದೆನಿಸಿ ಈ ರೀತಿಯ ಹಾಡು ಮಾಡಿದೆ. ಹಾಡು ತಯಾರಾಗಿ ಬಹಳ ಸಮಯ ಆಗಿದ್ದರೂ ಬಿಡುಗಡೆಗೆ ಸೂಕ್ತ ಸಮಯಕ್ಕೆ ಕಾಯುತ್ತಿದ್ದೆ. ಈಗ ಹಾಡನ್ನು ಬಿಡುಗಡೆ ಮಾಡುತ್ತಿದ್ದೇನೆ' ಎಂದಿದ್ದಾರೆ ಚಂದನ್ ಶೆಟ್ಟಿ.

  ತಾನೇ ನರ್ತಿಸಿ, ತಾನೇ ಶೂಟ್ ಮಾಡಿರುವ ಚಂದನ್

  ತಾನೇ ನರ್ತಿಸಿ, ತಾನೇ ಶೂಟ್ ಮಾಡಿರುವ ಚಂದನ್

  'ನಾನೇ ನಿರ್ದೇಶಿಸಿ, ನಾನೇ ನೃತ್ಯ ನಿರ್ದೇಶನ ಮಾಡಿ, ನಾನೇ ಎಡಿಟ್ ಮಾಡಿರುವ ಹಾಡು ಇದೆ. 360 ಡಿಗ್ರಿ ಕ್ಯಾಮೆರಾ ಬಳಸಿ ನನ್ನ ನೃತ್ಯವನ್ನು ನಾನೇ ಚಿತ್ರೀಕರಿಸಿಕೊಂಡಿದ್ದೇನೆ. ಹಾಡನ್ನು ಟೊರೆಂಟೊ, ಮಾಂಟ್ರಿಯಲ್, ನಯಾಗರ ಫಾಲ್ಸ್ ಇನ್ನೂ ಕೆಲವು ಸುಂದರ ಸ್ಥಳಗಳಲ್ಲಿ ಚಿತ್ರೀಕರಿಸಿದ್ದೇನೆ' ಎಂದಿದ್ದಾರೆ ಚಂದನ್ ಶೆಟ್ಟಿ.

  ಇದು ನನಗೆ ಹೊಸ ಮಾದರಿ ಹಾಡು: ಚಂದನ್

  ಇದು ನನಗೆ ಹೊಸ ಮಾದರಿ ಹಾಡು: ಚಂದನ್

  'ಇದು ನನಗೆ ಹಾಗೂ ನನ್ನ ಹಾಡಿನ ಪ್ರೇಕ್ಷಕರಿಗೆ ಹೊಸ ಮಾದರಿಯ ಎನಿಸುತ್ತದೆ. ಈ ಮಾದರಿಯ ಹಾಡನ್ನು ನಾನು ಇದೇ ಮೊದಲ ಬಾರಿಗೆ ಮಾಡುತ್ತಿದ್ದೇನೆ. ಈ ಮಾದರಿಯ ಹಾಡುಗಳನ್ನು ಕೇಳುವುದು ಈಗ ಟ್ರೆಂಡ್ ಆಗಿದೆ. ಹಾಡು ಫಂಕಿ ಮಾದರಿಯ ಹಾಡಾಗಿದೆ. ಅಂತರಾಷ್ಟ್ರೀಯ ಗಾಯಕರು ಸಹ ಫಂಕಿ ಮಾದರಿಯ ಹಾಡುಗಳತ್ತ ಮತ್ತೆ ವಾಲುತ್ತಿದ್ದಾರೆ' ಎಂದಿದ್ದಾರೆ ಚಂದನ್ ಶೆಟ್ಟಿ.

  ವಿವಾದಕ್ಕೆ ಕಾರಣವಾಗಿದ್ದ ಹಾಡು

  ವಿವಾದಕ್ಕೆ ಕಾರಣವಾಗಿದ್ದ ಹಾಡು

  ಈ ಹಿಂದೆ 'ಹಾಳಾಗೋದೆ', '3 ಪೆಗ್', 'ಚಾಕಲೇಟ್ ಗರ್ಲ್', 'ಟಕೀಲಾ', 'ಫೈರ್', 'ಪಾರ್ಟಿ ಫ್ರೀಕ್' ಹಾಡುಗಳನ್ನು ಚಂದನ್ ಶೆಟ್ಟಿ ಬಿಡುಗಡೆ ಮಾಡಿದ್ದರು. ಇವೆಲ್ಲವೂ ಹಿಟ್ ಆಗಿದ್ದವು. ಜೊತೆಗೆ ಧ್ರುವ ಸರ್ಜಾ ನಟನೆಯ 'ಪೊಗರು' ಸಿನಿಮಾಕ್ಕೆ ಸಂಗೀತ ಸಹ ನೀಡಿದ್ದರು. ಚಂದನ್ ಶೆಟ್ಟಿ ಈ ಹಿಂದೆ ಬಿಡುಗಡೆ ಮಾಡಿದ್ದ 'ಕೋಲುಮಂಡೆ' ಹಾಡು ವಿವಾದಕ್ಕೆ ಕಾರಣವಾಗಿತ್ತು.

  ನಟನಾಗಿ ಬರುತ್ತಿದ್ದಾರೆ ಚಂದನ್ ಶೆಟ್ಟಿ

  ನಟನಾಗಿ ಬರುತ್ತಿದ್ದಾರೆ ಚಂದನ್ ಶೆಟ್ಟಿ

  ಸಂಗೀತದ ಜೊತೆಗೆ ಚಂದನ್ ಶೆಟ್ಟಿ ನಟನೆ ಸಹ ಮಾಡುತ್ತಿದ್ದಾರೆ. ಕಳೆದ ವರ್ಷವೇ ಕೆಲವಾರು ಕತೆ ಕೇಳಿದ್ದ ಚಂದನ್ ಶೆಟ್ಟಿ 2021 ಕ್ಕೆ ನಟನಾಗಿ ಬರಲಿದ್ದೇನೆ ಎಂದಿದ್ದರು. ಇದರ ಜೊತೆಗೆ ಯುನೈಟೆಡ್ ಆಡಿಯೋ ಸಂಸ್ಥೆ ಮೂಲಕ ಯುವ ಸಂಗೀತಗಾರರಿಗೆ ತರಬೇತಿ ನೀಡುವ ಕಾರ್ಯ ಮಾಡುತ್ತಿದ್ದಾರೆ. ಜೊತೆಗೆ ಧ್ರುವ ಸರ್ಜಾ ನಟನೆಯ ಮುಂದಿನ ಸಿನಿಮಾಕ್ಕೆ ಸಂಗೀತ ಸಹ ನೀಡುತ್ತಿದ್ದಾರೆ.

  English summary
  Kannada Rapper Chandan Shetty to release his latest song Salige on May 28 named 'Salige'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X