ಅನುರಾಧಾ ಭಟ್ ಹಿನ್ನೆಲೆ ಗಾಯಕಿಯಾಗಿದ್ದು ಹೇಗೆ?

'ಸ್ಟಡಿ' ಮುಗಿಸಿ ಬೆಂಗಳೂರಿಗೆ ಬಂದ ನಾನು ಒಂದೂವರೆ ವರ್ಷಗಳು ಕೆಲಸ ಮಾಡಿದೆ. ಆದರೆ ಸಂಗೀತದ ಕಡೆ ಅತೀವ ಒಲವಿದ್ದ ನನಗೆ, ಕೆಲಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಡೆಮೋ, ಟ್ರಾಕ್ಸ್, ಡಿವೋಷನಲ್ ಸಾಂಗ್ಸ್ ಹೀಗೆ ಬಂದ ಅವಕಾಶಗಳನ್ನು ಉಪಯೋಗಿಸಿಕೊಳ್ಳುತ್ತಾ ಕೋರಸ್ ಗಾಯಕಿಯಾಗಿ ಸ್ಟುಡಿಯೋ ಮೆಟ್ಟಿಲು ಹತ್ತತೊಡಗಿದೆ. ಅದೊಂದು ದಿನ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರ 'ನೆನಪಿರಲಿ' ಚಿತ್ರದ ಗೀತೆಗೆ ಹಮ್ಮಿಂಗ್, ಕೋರಸ್ ಹಾಗೂ ಟ್ರಾಕ್ ಹಾಡುವ ಅದೃಷ್ಟ ಒದಗಿಬಂತು.
2006ರಲ್ಲಿ ದಿಗಂತ್-ರಮ್ಯಾ ನಟನೆ, ಟಿಎನ್ ಸೀತಾರಾಮ್ ನಿರ್ದೇಶನ ಹಾಗೂ ಹಂಸಲೇಖ ಸಂಗೀತ ನಿರ್ದೇಶನದ 'ಮೀರಾ ಮಾಧವ ರಾಘವ' ಚಿತ್ರದ ಎರಡು ಚಿತ್ರಗೀತೆಗಳಿಗೆ ಹಾಡುವ ಮೂಲಕ 'ಹಿನ್ನೆಲೆ ಗಾಯಕಿ' ಎನಿಸಿಕೊಂಡೆ. ನಂತರ ಒಂದೊಂದೇ ಅವಕಾಶಗಳು ನನ್ನದಾಗುತ್ತಾ ಬಂದು ಇಂದು ಬಹಳಷ್ಟು ಗೀತೆಗಳಿಗೆ ಧ್ವನಿಯಾಗಿದ್ದೇನೆ, ಸಾಕಷ್ಟು ಅವಕಾಶಗಳಿಗೆ ಬರುತ್ತಿವೆ.
* ನಿಮ್ಮ ಹಾಡುಗಳಲ್ಲಿ ನಿಮಗಿಷ್ಟವಾದ ಹಾಡುಗಳು ಯಾವವು? ಹೆಸರಿಸಿ...
ನನಗೆ ನನ್ನಿಷ್ಟದ ಹಾಡುಗಳು ಅಂತ ಯಾವುದೂ ಇಲ್ಲ. ಯಾವುದನ್ನು ಕೇಳುಗರು ಇಷ್ಟಪಡುತ್ತಾರೋ ಅದೇ ನನಗಿಷ್ಟ. ಆದರೂ ಕೇಳಿದಾಗ ಹೇಳಲೇಬೇಕು ಎಂದಾದರೆ..ನನಗೆ ಪ್ರಸಿದ್ಧಿ ತಂದುಕೊಟ್ಟ ಮರಳಿ ಮರೆಯಾಗಿ.. ಹಾಡೂ ಸೇರಿದಂತೆ-
*ಮರಳಿ ಮರೆಯಾಗಿ.. (ಸವಾರಿ)
*ಅಂಬಿಕಾ.. ಚಳಿ ತಾಳೆನೂ ಅಂಬಿಕಾ... (ಕಠಾರಿವೀರ ಸುರಸುಂದರಾಂಗಿ)
*ಕದ್ದುಮುಚ್ಚಿ... (ಜಾನೂ)
*ಸಂಬಂಧ ಸನಿರಿಸ... (ಬ್ರೇಕಿಂಗ್ ನ್ಯೂಸ್)
*ನೀನಾಡದ ಮಾತು ನನ್ನಲ್ಲಿದೆ... (ಕೃಷ್ಣನ್ ಲವ್ ಸ್ಟೋರಿ)
*ಕನ್ನಡ ಚಿತ್ರಗೀತೆಗಳನ್ನು ಬಿಟ್ಟು ಬೇರೆ ಏನೇನು ಹಾಡಿದ್ದೀರಿ?
ಉತ್ತರಕ್ಕೆ ಮುಂದಿನ ಪುಟ ನೋಡಿ...


Click it and Unblock the Notifications











