ಶಮಿತಾ ಮಲ್ನಾಡ್ 'ಮಧುರಾ ಪಿಸು ಮಾತಿಗೆ'

ಅವರ ಸಂಗೀತ ನಿರ್ದೇಶನದಲ್ಲಿ ನಾನು ಹಾಡಿದ ಭಕ್ತಿಗೀತೆಗಳ ಮೂಲಕ ನನ್ನ ಎರಡನೇ ಕ್ಯಾಸೆಟ್ ಮಾರುಕಟ್ಟೆ ತಲುಪಿತು. ಜನರ ಬಾಯಲ್ಲಿ ನಾನು ಹಾಡಿದ ಹಾಡುಗಳು ಈ ಎರಡು ಧ್ವನಿಮುದ್ರಿಕೆಗಳ ಮೂಲಕ ನಲಿದಾಡತೊಡಗಿದ್ದವು. ನನಗೆ ಜನಪ್ರಿಯತೆ ತಾನಾಗಿಯೇ ದೊರಕತೊಡಗಿತ್ತು.
* ಸಿನಿಮಾ ಹಾಡು ಹಾಡುವ ಅವಕಾಶ ದೊರಕಿದ್ದು ಹೇಗೆ? 'ಜರ್ನಿ' ವಿವರಿಸಿ...
ಗುರುಕಿರಣ್ ಸಂಗೀತ ನಿರ್ದೇಶನದಲ್ಲಿ ರಾಧಿಕಾ-ವಿಜಯರಾಘವೇಂದ್ರ ಜೋಡಿಯ 'ನಿನಗಾಗಿ' ಚಿತ್ರದ ಹಾಡುಗಳು ಸಿದ್ಧವಾಗತೊಡಗಿದ್ದವು. ಸಂಗೀತ ನಿರ್ದೇಶಕ ಗುರುಕಿರಣ್ ಅವರು 'ನಿನಗಾಗಿ' ಚಿತ್ರದ 'ಶುಕ್ರಿಯಾ ಶುಕ್ರಿಯಾ...' ಹಾಡನ್ನು ನನ್ನಿಂದ ಹಾಡಿಸಿದರು. ಅದೇ ನಾನು ಸಿನಿಮಾಗೆ ಹಾಡಿದ ಮೊದಲು ಹಾಡು. ಚಿತ್ರಗೀತೆಗಳ ಹಿನ್ನೆಲೆ ಗಾಯನಕ್ಕೆ ನಾಂದಿ ಹಾಡಿದ ಹಾಡು.
ಅಲ್ಲಿಂದ ಮುಂದೆ 'ಕರಿಯಾ' ಚಿತ್ರದಲ್ಲಿ 'ನನ್ನಲಿ ನಾನಿಲ್ಲ...' ಗೀತೆ ಹಾಡಿದೆ. ನಂತರ, 'ಮಧುರಾ ಪಿಸು ಮಾತಿಗೆ...' ಎಂಬ ಹಾಡನ್ನು 'ಬಿರುಗಾಳಿ' ಚಿತ್ರಕ್ಕಾಗಿ ಹಾಡಿದೆ. ಆ ಹಾಡಿಗೆ ಶ್ರೇಷ್ಟ ಹಿನ್ನೆಲೆ ಗಾಯಕಿ 'ಸೌತ್ ಇಂಡಿಯಾ ಫಿಲಂ ಫೇರ್ ಪ್ರಶಸ್ತಿ', ಹಾಗೂ ಸುವರ್ಣ ಅವಾರ್ಡ್ ಬಂತು. ಅಲ್ಲಿಂದ ಮುಂದೆ ಒಂದಾದ ಮೇಲೆ ಇನ್ನೊಂದರಂತೆ ಸಾಕಷ್ಟು ಹಾಡುಗಳನ್ನು ಹಾಡುತ್ತಾ ಬಂದಿದ್ದೇನೆ. ಸುಮಾರು 500 ಕ್ಕೂ ಮೀರಿ ಕನ್ನಡದ ಚಿತ್ರಗಳಿಗೆ ಧ್ವನಿಯಾಗಿದ್ದೇನೆ. ಸುಮಾರು '5000' ದಷ್ಟು ಸಿನಿಮಾ ಹಾಗೂ ಸಿನಿಮೇತರ ಗೀತೆಗಳಿಗೆ ಧ್ವನಿಯಾದ ಖುಷಿ ನನಗಿದೆ.
ಗುರುಕಿರಣ್, ಹಂಸಲೇಖ, ವಿ ಹರಿಕೃಷ್ಣ, ಮನೋಮೂರ್ತಿ, ರಾಜೇಶ್ ಕೃಷ್ಣನ್, ಸಾಧು ಕೋಕಿಲ, ಕೆ ಕಲ್ಯಾಣ್, ವಿ ಮನೋಹರ್, ಆರ್ ಪಿ ಪಟ್ನಾಯಕ್, ಅರ್ಜುನ್ ಜನ್ಯಾ, ಸಂದೀಪ್ ಚೌಟ, ಯುವನ್ ಶಂಕರ್ ರಾಜಾ ಹಾಗು ಎಲ್ ಎನ್ ಶಾಸ್ತ್ರಿ ಮುಂತಾದ ಸಂಗೀತ ನಿರ್ದೇಶಕರ ಹಾಡುಗಳನ್ನು ಹಾಡಿದ್ದೇನೆ. ಮುಂದಿನ ಪುಟ ನೋಡಿ...


Click it and Unblock the Notifications











