Don't Miss!
- News ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ನಾಯಕನೇ ಇಲ್ಲ: ಪ್ರಧಾನಿ ಮೋದಿ!
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ವಾತಂತ್ರ್ಯ ದಿನಾಚರಣೆ ವಿಶೇಷ: ಕೇಳಲೇಬೇಕಾದ ಐದು ಕನ್ನಡ ಗೀತೆಗಳು
ಸ್ವಾತಂತ್ರ್ಯ ದಿನಾಚರಣೆಯಂದು ತ್ರಿವರ್ಣ ಧ್ವಜ ಹಾರುವುದನ್ನು ನೋಡುವುದೇ ಒಂದು ಖುಷಿ. ಆ ಸನ್ನಿವೇಶಕ್ಕೆ ತಕ್ಕಂತೆ ಕೆಲವು ದೇಶಭಕ್ತಿ ಗೀತೆಗಳನ್ನು ಕೇಳಿದ್ರೆ ಅದರ ಸಂಭ್ರಮನೇ ಬೇರೆ.
ದೇಶಭಕ್ತಿ ಸಾರುವ ಕನ್ನಡ ಗೀತೆಗಳು ಅಂದಾಕ್ಷಣ ಫಟ್ ಅಂತ ನಾಲ್ಕೈದು ಹಾಡುಗಳು ನೆನಪಾಗುತ್ತದೆ. ಈ ಹಾಡುಗಳನ್ನು ಕೇಳಿದ್ರೆ ಅದೇನೋ ಒಂಥರಾ ರೋಮಾಂಚನ. ಮೈ ಜುಂ ಅನ್ನುತ್ತೆ. ಸ್ವಾತಂತ್ರ್ಯಕ್ಕಾಗಿ ನಡೆದ ಬಲಿದಾನಗಳು, ಹೋರಾಟಗಳು, ಯುದ್ಧಗಳು ಹಾಗೆ ಕಣ್ಣ ಮುಂದೆ ಬಂದು ಹೋಗುತ್ತೆ. ಸಮಯ ಸಿಕ್ಕಾಗ ಈ ಗೀತೆಗಳನ್ನು ಕೇಳುವುದು ಮರೆಯಬೇಡಿ. ಯಾವುದು ಆ ಹಾಡುಗಳು? ಮುಂದೆ ಓದಿ....
ಸ್ವಾತಂತ್ರ್ಯ ದಿನಾಚರಣೆಯಂದು ಈ ಆರು ಸ್ಟಾರ್ಸ್ಗೆ ಮತ್ತೊಂದು ಸಂಭ್ರಮ
ಭಾರತಾಂಬೆ ನಿನ್ನ ಜನ್ಮ ದಿನ
ಸಾಹಸಸಿಂಹ ವಿಷ್ಣುವರ್ಧನ್ ನಟಿಸಿರುವ ವೀರಪ್ಪ ನಾಯಕ ಚಿತ್ರದಲ್ಲಿ ಬರುವ 'ಭಾರತಾಂಬೆ ನಿನ್ನ ಜನ್ಮ ದಿನ' ಹಾಡು ಮೊದಲು ನೆನಪಾಗುತ್ತೆ. ಈ ಸಿನಿಮಾನೇ ದೇಶಪ್ರೇಮದ ಸುತ್ತ ನಡೆಯುತ್ತೆ. ಅದರಲ್ಲೂ ಈ ಗೀತೆಗೆ ಕೇಳುವಾಗ ಮೈಯೆಲ್ಲ ರೋಮಾಂಚನವಾಗುತ್ತೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ.
ಹಿಂದೂಸ್ತಾನ ಗೊತ್ತೇನೋ?
ವಿಜಯಶಾಂತಿ, ಅಂಬರೀಶ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ವಂದೇ ಮಾತರಂ ಸಿನಿಮಾದ 'ಹಿಂದೂಸ್ತಾನ ಗೊತ್ತೇನೋ.....ಧರ್ಮ ಕಾಯೋ ಹಿಮಾಲಯ....' ಹಾಡು ಭಾರತೀಯರಲ್ಲಿರುವ ದೇಶಭಕ್ತಿಯನ್ನು ಬಡಿದೆಬ್ಬಿಸುತ್ತೆ.
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿರುವ ಹಗಲವೇಷ ಸಿನಿಮಾದಲ್ಲಿ ಬರುವ ''ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ.....'' ಹಾಡು ದೇಶಭಕ್ತರ ನೆಚ್ಚಿನ ಗೀತೆಗಳಲ್ಲಿ ಒಂದು. ಡಾ ರಾಜ್ ಕುಮಾರ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಬರಗೂರು ರಾಮಚಂದ್ರಪ್ಪ ಸಾಹಿತ್ಯ ರಚಿಸಿದ್ದಾರೆ.
ನಾನು ಕನ್ನಡದ ಕಂದ
ಶಿವರಾಜ್ ಕುಮಾರ್ ಅಭಿನಯದ ಮತ್ತೊಂದು ಗೀತೆ 'ನಾನು ಕನ್ನಡದ ಕಂದ....'. ಎಕೆ 47 ಚಿತ್ರದ ಈ ಹಾಡು ದೇಶಭಕ್ತಿಯ ಪ್ರತೀಕ ಮೂಡಿಬಂದಿದೆ. ಕೆ.ಜೆ.ಜೇಸುದಾಸ್ ಈ ಹಾಡನ್ನು ಹಾಡಿದ್ದಾರೆ.
ಸೈನಿಕ ಸಿನಿಮಾದ ಜೈ ಹಿಂದ್
ಸಿಪಿ ಯೋಗೇಶ್ವರ್ ನಟನೆಯ ಸೈನಿಕ ಸಿನಿಮಾದ 'ಜೈ ಹಿಂದ್....' ಹಾಡು ನೆನಪಾಗುತ್ತೆ. ಈ ಹಾಡು ಕೇಳುವುದರ ಜೊತೆ ದೃಶ್ಯ ನೋಡಿದ್ರೆ ಇನ್ನು ಚೆನ್ನಾಗಿರುತ್ತದೆ. ದೇಶಭಕ್ತಿ, ದೇಶದ ಸಂಸ್ಕೃತಿ, ದೇಶದ ಚರಿತ್ರೆ ಹೇಳುವ ಇನ್ನು ಹಲವು ಹಾಡುಗಳಿವೆ. ಆದರೆ, ಫಟ್ ಅಂತ ನೆನಪಾಗುವ ಹಿಟ್ ಗೀತೆಗಳನ್ನು ಮಾತ್ರ ಇಲ್ಲಿ ಪಟ್ಟಿ ಮಾಡಲಾಗಿದೆ. ನಿಮಗೆ ನೆನಪಾಗುವ ಇತರೆ ಹಾಡುಗಳನ್ನು ಕಾಮೆಂಟ್ ಮೂಲಕ ತಿಳಿಸಿ.