'ಕಾಂತಾರ' ಮತ್ತೊಂದು ದಾಖಲೆ: ಸಿನಿರಸಿಕರು ತೋರಿದ ಪ್ರೀತಿಗೆ ಸಪ್ತಮಿ ಗೌಡ ಧನ್ಯವಾದ

ಕಳೆದ ವರ್ಷ ಭಾರತದ ಮೋಸ್ಟ್ ಸೆಲೆಬ್ರೆಟೆಡ್ ಸಿನಿಮಾಗಳಲ್ಲಿ 'ಕಾಂತಾರ' ಕೂಡ ಒಂದು. ಸಿನಿಮಾ ಬಂದೋಗಿ 6 ತಿಂಗಳು ಕಳೆದ್ರು ಹವಾ ಮಾತ್ರ ಇನ್ನು ಕಮ್ಮಿ ಆಗಿಲ್ಲ. ಇವತ್ತಿಗೂ ಒಂದಲ್ಲ ಒಂದು ಕಾರಣಕ್ಕೆ ರಿಷಬ್ ಶೆಟ್ಟಿ ಮಾಸ್ಟರ್ ಪೀಸ್ ಸದ್ದು ಮಾಡುತ್ತಲೇ ಇದೆ. ಇದೀಗ ಚಿತ್ರದ 2 ಸಾಂಗ್ಸ್ ಯೂಟ್ಯೂಬ್‌ನಲ್ಲಿ 10 ಕೋಟಿ ವೀವ್ಸ್ ಸಾಧಿಸಿ ದಾಖಲೆ ಬರೆದಿದೆ.

'ಕಾಂತಾರ' ಸಿನಿಮಾ ಸಕ್ಸಸ್‌ನಲ್ಲಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್‌ಗೂ ಕ್ರೆಡಿಟ್ ಸಿಗಲೇಬೇಕು. ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಸೂಪರ್. ವಿಜಯ ಪ್ರಕಾಶ್ ಗಾಯನದಲ್ಲಿ ಮೂಡಿ ಬಂದ 'ಸಿಂಗಾರ ಸಿರಿಯೇ' ಮೆಲೋಡಿ ಸಾಂಗ್ ಸಿನಿರಸಿಕರ ಹಾಟ್ ಫೇವರಿಟ್ ಅನ್ನಿಸಿಕೊಂಡಿದೆ. ಈ ಹಾಡನ್ನು ರಿಪೀಟ್ ಮೋಡ್‌ನಲ್ಲಿ ಸಂಗೀತ ಪ್ರೇಮಿಗಳು ಕೇಳುತ್ತಲೇ ಇದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ಮತ್ತೊಂದು ಪ್ಲಸ್ ಪಾಯಿಂಟ್.

Kantara Movie Songs Singara Siriye and Varaha Roopam crosses 100M Views in Youtube

ಚಿತ್ರದ 'ವರಾಹ ರೂಪಂ' ಸಾಂಗ್ ಅಂತೂ ಸೆನ್ಸೇಷನ್ ಕ್ರಿಯೇಟ್ ಮಾಡಿಬಿಡ್ತು. ನಾನಾ ಕಾರಣಕ್ಕೆ ಸಾಂಗ್ ಸುದ್ದಿಯಾಗಿದ್ದು ಸುಳ್ಳಲ್ಲ. ಕೇರಳದ ಜನಪ್ರಿಯ ಸಂಗೀತ ಬ್ಯಾಂಡ್ 'ಥೈಕ್ಕುಡಂ ಬ್ರಿಡ್ಜ್' ಕನ್ನಡದ 'ವರಾಹ ರೂಪಂ' ಹಾಡಿನ ಟ್ಯೂನ್ ಕದ್ದಿದ್ದಾರೆ ಎಂದು ಆರೋಪಿಸಿತ್ತು. ನಾವು ಮಾಡಿರುವ 'ನವರಸಂ' ಸಾಂಗ್‌ ಟ್ಯೂನ್ ಕದ್ದಿದ್ದಾರೆ ಎಂದು ಕೋರ್ಟ್ ಮೆಟ್ಟಿಲನ್ನು ಏರಿದ್ದರು. ವಾದ ಪ್ರತಿವಾದ ನಡೆದು ಕೊನೆಗೆಗೂ ಜಯ ಸಿಕ್ಕಿತ್ತು. ಕನ್ನಡ ಸಿನಿರಸಿಕರು 'ಕಾಂತಾರ' ಚಿತ್ರತಂಡದ ಜೊತೆ ನಿಂತರು.

'ನವರಸಂ' ಹಾಡಿನ ಮೂಡ್ ಹಾಗೂ ಆ ರಾಕ್‌ಬ್ಯಾಂಡ್ ಸ್ಟೈಲ್‌ನಿಂದ ನಾವು ಇನ್‌ಸ್ಪೈರ್ ಆಗಿದ್ದೀವಿ, ಆದರೆ ಟ್ಯೂನ್ ಕದ್ದಿಲ್ಲ ಎಂದು ಅಜನೀಶ್ ವಾದಿಸಿದ್ದರು. ಕೊನೆಗೂ ತಂಡಕ್ಕೆ ಜಯ ಸಿಕ್ಕಿತ್ತು. ಸಾಯಿ ವಿಘ್ನೇಶ್ ದನಿಯಲ್ಲಿ ಮೂಡಿ ಬಂದಿದ್ದ ಈ ಹಾಡಿಗೆ ಶಶಿರಾಜ್ ಕಾವೂರ್ ಸಾಹಿತ್ಯ ಬರೆದಿದ್ದಾರೆ. ಇದೀಗ ಈ ಎರಡು ಹಾಡುಗಳು ಯೂಟ್ಯೂಬ್‌ನಲ್ಲಿ ಓಟ ಮುಂದುವರೆಸಿವೆ. ಈಗಾಗಲೇ 100 ಮಿಲಿಯನ್ ಅಂದ್ರೆ 10 ಕೋಟಿಗೂ ಅಧಿಕ ವೀವ್ಸ್ ಸಿಕ್ಕಿದೆ.

Kantara Movie Songs Singara Siriye and Varaha Roopam crosses 100M Views in Youtube

ನಟಿ ಸಪ್ತಮಿ ಗೌಡ ಟ್ವೀಟ್ ಮಾಡಿ "ಸಿಂಗಾರ ಸಿರಿಯೇ ಹಾಗೂ ವರಾಹ ರೂಪಂ ಎರಡು ಹಾಡುಗಳು 100 ಮಿಲಿಯನ್ ಗಡಿ ಗಾಟಿವೆ. ಇದು ನಿಜಕ್ಕೂ ಕನಸು. ಇದನ್ನು ಎಂದೂ ಊಹಿಸಿರಲಿಲ್ಲ. ಈ ಹಾಡುಗಳ ಮೇಲೆ ನೀವು ತೋರಿದ ಪ್ರೀತಿಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ. ಗಾಯಕ ವಿಜಯ ಪ್ರಕಾಶ್ 2 ದಿನಗಳ ಹಿಂದೆಯೇ 'ಸಿಂಗಾರ ಸಿರಿಯೇ' ಸಾಂಗ್ 100 ಮಿಲಿಯನ್ ತಲುಪಿದೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ 'ಕಾಂತಾರ' ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿತ್ತು. ಬರೀ ಕನ್ನಡದಲ್ಲಿ ರಿಲೀಸ್ ಆಗಿದ್ದ ಸಿನಿಮಾ ನೋಡ ನೋಡುತ್ತಲೇ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬದಲಾಗಿತ್ತು. 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ವಿಶ್ವದಾದ್ಯಂತ ಸದ್ದು ಮಾಡಿತ್ತು. ಕರಾವಳಿಯ ಆಚರಣೆ, ಸಂಸ್ಕೃತಿ, ದೈವಾರಾಧನೆಯನ್ನು ಸೊಗಸಾಗಿ ತೆರೆಗೆ ತಂದು ಚಿತ್ರತಂಡ ಗೆದ್ದಿತ್ತು. ಇದೀಗ ಸಿನಿಮಾ ಪ್ರೀಕ್ವೆಲ್ ಕೆಲಸಗಳು ಶುರುವಾಗಿದೆ. ಮುಂದಿನ ವರ್ಷವೇ 'ಕಾಂತಾರ'- 2 ರಿಲೀಸ್ ಆಗಲಿದೆ.

Kantara Movie Songs Singara Siriye and Varaha Roopam crosses 100M Views in Youtube

ಕನ್ನಡ ಸೇರಿದಂತೆ ಒಟ್ಟು 7 ಭಾಷೆಗಳಲ್ಲಿ 'ಕಾಂತಾರ' ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಇಂಗ್ಲೀಷ್ ಭಾಷೆಗೂ ಡಬ್ ಆಗಿ ಓಟಿಟಿಗೆ ಬಂದಿದೆ. ಇದೀಗ ಚಿತ್ರವನ್ನು ಇಟಲಿ ಹಾಗೂ ಸ್ಪಾನಿಷ್ ಭಾಷೆಗಳಿಗೆ ಡಬ್ ಮಾಡುವ ಕೆಲಸ ನಡೀತಿದೆ. ಶೀಘ್ರದಲ್ಲೇ ಯೂರೋಪ್‌ ದೇಶಗಳಲ್ಲಿ ಕನ್ನಡದ 'ಕಾಂತಾರ' ಸಿನಿಮಾ ರಿಲೀಸ್ ಆಗಲಿದೆ.

More from Filmibeat

English summary
Kantara Movie Songs Singara Siriye and Varaha Roopam crosses 100M Views in Youtube. Actress Sapthami Gowda thanks the audiences for overwhelming response towards songs. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X