»   » 'ಕಟಕ'ದ 'ಕುರುಡರ ಊರಿಗೆ ತಲುಪಿತೆ ದಡವು' ಹಾಡು ರಿಲೀಸ್ ಆಯ್ತು

'ಕಟಕ'ದ 'ಕುರುಡರ ಊರಿಗೆ ತಲುಪಿತೆ ದಡವು' ಹಾಡು ರಿಲೀಸ್ ಆಯ್ತು

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಪ್ರಯೋಗಾತ್ಮಕ ಚಿತ್ರಗಳ ಜೊತೆಗೆ ಸತ್ಯ ಘಟನೆ ಆಧಾರಿತ ಚಿತ್ರಗಳ ಸಂಖ್ಯೆಯು ಹೆಚ್ಚಿದೆ. ಈಗ ಆ ಸಾಲಿಗೆ 'ಕಟಕ' ಎಂಬ ಹೊಸ ಚಿತ್ರ ಸೇರ್ಪಡೆ ಆಗಿದೆ.

'ಕಟಕ' ಚಿತ್ರವು ಸಂಗೀತ ನಿರ್ದೇಶಕ ರವಿ ಬಸ್ರೂರ್ ಮತ್ತು ತಂಡದ ಪರಿಶ್ರಮದಿಂದ ನಿರ್ಮಾಣ ಆಗುತ್ತಿದೆ. ಈ ಚಿತ್ರಕ್ಕೆ ಎನ್‌.ಎಸ್.ರಾಜಕುಮಾರ್ ರವರು ಬಂಡವಾಳ ಹೂಡಿದ್ದಾರೆ. ಈಗ ಈ ಚಿತ್ರದ 'ಕುರುಡರ ಊರಿಗೆ ತಲುಪಿತೆ ದಡವು' ಹಾಡು ಬಿಡುಗಡೆ ಆಗಿದೆ. ಅಲ್ಲದೇ ಈ ಚಿತ್ರದ ಹಾಡುಗಳ ಸಂಯೋಜನೆಗೆ ಅರ್ಜುನ್ ಜನ್ಯ ರವರು ಸಾಥ್ ಕೊಟ್ಟಿದ್ದಾರೆ. 'Mr & Mrs ರಾಮಾಚಾರಿ ಚಿತ್ರದಲ್ಲಿ ದತ್ತು ಪಾತ್ರದಲ್ಲಿ ಅಭಿನಯಿಸಿದ್ದ ಅಶೋಕ್ ಶರ್ಮಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

'Kataka' film 'Kurudara urige Talupite Dadavu' song released

'ಕುರುಡರ ಊರಿಗೆ ತಲುಪಿತೆ ದಡವು' ಹಾಡನ್ನು ಅನುರಾಧಾ ಭಟ್, ಸುಪ್ರಿಯಾ ಲೋಹಿತ್, ಮಾನಸ ಹೊಳ್ಳ ಮತ್ತು ಅನನ್ಯ ಭಟ್ ಹಾಡಿದ್ದಾರೆ. 'ಯಾಕೇ ಕಣ್ಣು ಹೀಗೆ.. ಹನಿಯು ತುಂಬಿತೋ ಕಾಣೆನೇ. ಯಾಕೇ ಮನವು ಕಳವಳದಲ್ಲಿ... ಮುಳುಗಿತೋ ಕಾಣನೇ' ಎಂದು ಆರಂಭವಾಗುವ ಈ ಹಾಡು ಅತೀ ಭಾವನಾತ್ಮವಾಗಿದ್ದು ಕೇಳಲು ಇಂಪಾಗಿದೆ. ಈ ಸುಮಧುರ ಹಾಡನ್ನು ನೋಡಿ ಆನಂದಿಸುವ ಆಸೆ ನಿಮಗೂ ಇದ್ದಲ್ಲಿ ಈ ಕೆಳಗಿನ ಯೂಟ್ಯೂಬ್ ವಿಡಿಯೋ ನೋಡಿ.

English summary
Kannada Movie 'Kataka's 'Kurudara urige Talupite Dadavu' song released. This movie directs by Ravi Basrur.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada