ಪುಟ್ಟ ಅಭಿಮಾನಿಯೊಂದಿಗೆ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಮುದ್ದು ಮಾತುಕತೆ: ಗಿಫ್ಟ್ ನೀಡುವ ಭರವಸೆ

ನಟರು, ನಿರ್ದೇಶಕರು ಮತ್ತು ಸಂಗೀತ ನಿರ್ದೇಶಕರಿಗೆ ಅವರದ್ದೇ ಆದ ಫ್ಯಾನ್ ಬೇಸ್ ಇರುತ್ತದೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಆರ್ ರೆಹಮಾನ್ ಅವರಿಗೆ ಸ್ಟಾರ್ ನಟನಿಗಿಂತಲೂ ಹೆಚ್ಚಿನ ಅಭಿಮಾನಿಗಳಿದ್ದಾರೆ. ಅವರ ಮ್ಯೂಸಿಕ್ ಕಾನ್ಸರ್ಟ್‌ಗಳಿಗೆ ಸೇರುವ ಜನರಿಂದಲೇ ಇದು ತಿಳಿಯುತ್ತದೆ.

ಇತ್ತೀಚೆಗೆ ಎಆರ್ ರೆಹಮಾನ್ ಅವರು ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಕಥಾಕರ್ ಉತ್ಸವದಲ್ಲಿ ಭಾಗವಹಿಸಿದ್ದರು. ಈ ಈವೆಂಟ್‌ನಲ್ಲಿ, ಅವರಿಗೆ ತಮ್ಮದೆ ಹಾಡುಗಳ ಕೆಲವು ಸಾಲುಗಳನ್ನು ಹಾಡಲು ಕೇಳಲಾಯಿತು. ಆದರೆ ಇಲ್ಲಿ ಗಮನ ಸೆಳೆದಿದ್ದು ಮಾತ್ರ ರಹಮಾನ್ ಮತ್ತು ಒಬ್ಬ ಮುದ್ದು ಮುದ್ದಾದ ಪುಟ್ಟ ಅಭಿಮಾನಿ ನಡುವಿನ ಸಂವಾದ.

Kathakar Festival: Music director AR Rahman promises to gift keyboard to a cute kid

ಕ್ಯೂಟ್ ಬೇಬಿಯೊಂದಿಗೆ ಎಆರ್ ರೆಹಮಾನ್ ಮೋಜು ಮಸ್ತಿ

ಎಆರ್ ರೆಹಮಾನ್ ಇಶಾನ್ ಖಟ್ಟರ್ ನಟಿಸಿದ ಹಿಂದಿ ಚಿತ್ರ ಪಿಪ್ಪಾಗೆ ಸಂಗೀತ ಸಂಯೋಜಿಸಿದ್ದಾರೆ. ಇನ್ನು, ಗಾಯಕ ಮೋಹಿತ್ ಚೌಹಾಣ್ ಅವರೊಂದಿಗೆ ಪ್ಯಾನೆಲ್‌ಗೆ ಅತಿಥಿಯಾಗಿದ್ದ ಎಆರ್ ರೆಹಮಾನ್ ಅವರನ್ನು 'ಹಮ್ಮ ಹಮ್ಮಾ' ಹಾಡನ್ನು ಹಾಡುವಂತೆ ಮನವಿ ಮಾಡಲಾಗಿತ್ತು. ಪುಟ್ಟ ಅಭಿಮಾನಿಯ ಕೋರಿಕೆಯ ಮೇರೆಗೆ ಆ ಹಾಡನ್ನು ಹಾಡಿದ್ದರು. ಜೊತೆಗೆ ಕೋರಸ್ ಕೊಡಲು ರೆಹಮಾನ್ ಮೈಕ್ ಅನ್ನು ಬಾಲಕಿ ಕಡೆಗೆ ತಿರುಗಿಸಿದಾಗ, 'ಹಮ್ಮ' ಎಂದಷ್ಟೇ ಹೇಳಿ ಮೈಕ್ ಬೇಡ ಎನ್ನುತ್ತಾರೆ.

ನಂತರ ಇಬ್ಬರೂ ಸಂಗೀತದ ಬಗ್ಗೆ ಚರ್ಚಿಸಲು ಆರಂಭಿಸುತ್ತಾರೆ. ಇದಾದ ಬಳಿಕ ಎಆರ್ ರೆಹಮಾನ್ ಅವರು ತಮ್ಮ ಪುಟ್ಟ ಅಭಿಮಾನಿಗೆ ಕೀಬೋರ್ಡ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಕೀಬೋರ್ಡ್ ಮೂಲಕ ಆಕೆ ತನ್ನ ಆಸಕ್ತಿಯಾದ ಸಂಗೀತದ ಕಡೆ ಹೆಚ್ಚು ಕೆಲಸ ಮಾಡಬಹುದು. ಈ ಸಂವಾದದ ವೀಡಿಯೊವನ್ನು ಅಂತರ್ಜಾಲದಲ್ಲಿ ವೈರಲ್ ಆಗಿದೆ.

Kathakar Festival: Music director AR Rahman promises to gift keyboard to a cute kid

'ನಾನು ನಿಮಗೆ ಕೀಬೋರ್ಡ್ ನೀಡುತ್ತೇನೆ'

ಈ ಮುದ್ದಾದ ಮಾತುಕತೆ ಹೀಗಿದೆ. "ನೀವು ಹಾಡಿದಾಗ, ಸುಮಧುರ ಸಂಗೀತ ಬಂದಿತು, ಆದರೆ ನಾನು ಹಾಡಿದಾಗ ಅದು ಆಗಲಿಲ್ಲ" ಎಂದು ಬಾಲಕಿ ಹೇಳುತ್ತಾರೆ. ಆಗ ರೆಹಮಾನ್, "ಇಲ್ಲ, ಇಲ್ಲ, ನೋಡಿ. ನನಗೆ 56 ವರ್ಷ, ಅಲ್ವಾ..? ನೀವು ನನಗಿಂತ ಚೆನ್ನಾಗಿ ಹಾಡುತ್ತೀರಿ. ನಾನು ನನ್ನ ಬಹಳ ಸಮಯವನ್ನು ವ್ಯರ್ಥ ಮಾಡಿದ್ದೇನೆ" ಎಂದು ಹೇಳುವ ಮೂಲಕ ಅಭಿಮಾನಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ.

"ನೀವು ಪ್ರತಿದಿನ ಅಭ್ಯಾಸ ಮಾಡಬೇಕು. ನಾನು ನಿಮಗೆ ಕೀಬೋರ್ಡ್ ತರುತ್ತೇನೆ. ಮುಂದಿನ ವರ್ಷ, ನೀವು ಇಲ್ಲಿ ಹಾಡಬೇಕು" ಎಂದು ಹೇಳಿದ್ದಾರೆ. ಇದಕ್ಕೆ ಒಬ್ಬ ನೆಟ್ಟಿಗರು, "ಎಆರ್ ರೆಹಮಾನ್ ಸರ್ ಎಷ್ಟು ವಿನಮ್ರರು", "ಸೋ ಕ್ಯೂಟ್ ಅಂಡ್ ಅಡೋರಬಲ್", "ಮ್ಯಾನ್ ಆಫ್ ಸಿಂಪ್ಲಿಸಿಟಿ ARR" ಎಂದು ಕಾಮೆಂಟ್ ಮಾಡಿದ್ದಾರೆ.

More from Filmibeat

English summary
AR Rahman promises to gift keyboard to a young fan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X