ಅಮೆರಿಕದ ಮ್ಯೂಸಿಕ್ ವೀಡಿಯೋದಲ್ಲಿ ಕನ್ನಡತಿ: : ಇತಿ ಆಚಾರ್ಯ ಗ್ಲಾಮರ್ ಲುಕ್

By ಫಿಲ್ಮಿಬೀಟ್ ಡೆಸ್ಕ್

ಮಾಡಲ್ ಕಮ್ ನಟಿ ಇತಿ ಆಚಾರ್ಯ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ನಟಿ ಕನ್ನಡದ 'ಕವಚ' ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾ ಬಳಿಕ ಈಗ ಅಮೆರಿಕದ ಮ್ಯೂಸಿಕ್ ಆಲ್ಬಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಮೆರಿಕದ ರಾಪರ್ ಹಾಗೂ ಮ್ಯೂಸಿಕ್ ಕಂಪೋಸರ್ ಮೆರ್ಲಿನ್ ಬಾಬಾಜಿ ಮ್ಯೂಸಿಕ್ ವಿಡಿಯೋದಲ್ಲಿ ಇತಿ ಆಚಾರ್ಯ ನಟಿಸಿದ್ದಾರೆ. ಈ ಮೂಲಕ ಸಂಗೀತ ಪ್ರಿಯರ ಗಮನ ಸೆಳೆಯುತ್ತಿದ್ದಾರೆ.

ಮೆರ್ಲಿನ್ ಬಾಬಾಜಿ ಅಮೆರಿಕದ ಗಾಯಕ ಹಾಗೂ ಸಂಗೀತ ನಿರ್ದೇಶಕ. ಕಳೆದ ವರ್ಷ ಮೆರ್ಲಿನ್ ಬಾಬಾಜಿಯ 'ವೈಬ್ಸ್' ಸಾಂಗ್ ರಿಲೀಸ್ ಆಗಿತ್ತು. ಈ ಹಾಡು ವಿಶ್ವದಾದ್ಯಂತ ಫೇಮಸ್ ಆಗಿತ್ತು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿರೋ ಮೆರ್ಲಿನ್ ಬಾಬಾಜಿ ಮತ್ತೊಂದು ವಿಡಿಯೋ ಸಾಂಗ್ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಮತ್ತೆ ಸಂಚಲನ ಸೃಷ್ಟಿಸುವುದಕ್ಕೆ ಮುಂದಾಗಿದ್ದಾರೆ.

Kavacha Movie Actress Iti Acharya Acted in Merlin Babaji American Music video

ಇದೇ ಹಾಡಿಗಾಗಿ ಮೆರ್ಲಿನ್ ಬಾಬಾಜಿ ನಟಿ ಹಾಗೂ ಮಾಡೆಲ್ ಇತಿ ಆಚಾರ್ಯ ಜೊತೆ ಕೈ ಜೋಡಿಸಿದ್ದಾರೆ. " ಮೆರ್ಲಿನ್ ಬಾಬಾಜಿ ಕಳೆದ ಒಂದು ವರ್ಷದಿಂದ ನನಗೆ ಪರಿಚಿತರು. ಅವರ ಸಂಗೀತದ ದೊಡ್ಡ ಅಭಿಮಾನಿ ನಾನು. 'ಲವ್ ಹರ್ ಟೂ ಮಚ್' ಸಾಂಗ್ ಕೇಳಿದ ಮೇಲೆ ತುಂಬಾ ಇಷ್ಟವಾಯ್ತು. ನಾನು ಈ ಹಾಡಿನಲ್ಲಿ ನಟಿಸುವೆ ಎಂದು ಹೇಳಿದೆ" ಎಂದು ಇತಿ ಆಚಾರ್ಯ ಹರ್ಷ ವ್ಯಕ್ತಪಡಿಸಿದ್ದಾರೆ.

ಅಂದ್ಹಾಗೆ, ಇತಿ ಆಚಾರ್ಯ ಸಹೋದರ ಅಭಿ ಆಚಾರ್ಯ ಕೂಡ ಅಮೆರಿಕದಲ್ಲಿ ಸಂಗೀತ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದಾರೆ. ಹೀಗಾಗಿ ಸಂಗೀತ ನಿರ್ದೇಶಕರು ಹಾಗೂ ಗಾಯಕರೊಂದಿಗೆ ಸಂಪರ್ಕ ಸಾಧಿಸಲು ಸಹಾಯವಾಗಿದೆ ಎನ್ನುತ್ತಾರೆ ಇತಿ ಆಚಾರ್ಯ.

ಇನ್ನು ಇತಿ ಆಚಾರ್ಯ ಕೂಡ 2016ರ ಮಿಸ್ ಸೌತ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದಾರೆ. ಅಲ್ಲದೆ ಆರ್ ವಿ ಎಸ್ ಪಿ ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡ ಸೇರಿದಂತೆ, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಇತಿ ಆಚಾರ್ಯ ಕೆಲಸ ಮಾಡುತ್ತಿದ್ದಾರೆ.

Kavacha Movie Actress Iti Acharya Acted in Merlin Babaji American Music video

ಇದೀಗ ಅಮೆರಿಕದ ಗಾಯಕ ಹಾಗೂ ಸಂಗೀತ ನಿರ್ದೇಶಕ ಮೆರ್ಲಿನ್ ಬಾಬಾಜಿ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.

ಇನ್ನು ಮೆರ್ಲಿನ್ ಬಾಬಾಜಿಯ ಹಾಡುಗಳು ಕಳೆದೊಂದು ವರ್ಷದಿಂದ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿವೆ. 'ವೈಬ್ಸ್, 'ರನ್ ದಿ ಸಿಟಿ', 'ಬೆಟರ್ ಡೇಸ್' ಅಂತಹ ಹಾಡುಗಳು ಯುವಕರಿಗೆ ಇಷ್ಟ ಆಗುತ್ತಿವೆ. ಒಂದು ವರ್ಷದಿಂದ ಮೆರ್ಲಿನ್ ಬಾಬಾಜಿ ಅಮರಿಕದ ಸಂಗೀತ ಪ್ರಿಯರ ಮನಗೆದ್ದಿದ್ದಾರೆ

More from Filmibeat

English summary
Kavacha Movie Actress Iti Acharya Acted in Merlin Babaji American Music video. Iti Acharya and Merlin Babaji both are close friends, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X