For Quick Alerts
  ALLOW NOTIFICATIONS  
  For Daily Alerts

  'ವರಾಹ ರೂಪಂ' ಹಾಡು ವಿವಾದ: ಹೊಂಬಾಳೆ ಅರ್ಜಿ ರದ್ದು ಮಾಡಿದ ಕೇರಳ ಹೈಕೋರ್ಟ್

  |

  ಕೇರಳದ ತೈಕ್ಕುಡ್ಡಂ ಬ್ರಿಡ್ಜ್ ತಂಡ ಮಾಡಿದ್ದ 'ನವರಸಂ' ಆಲ್ಬಂನಲ್ಲಿನ ಸಂಗೀತವನ್ನು 'ಕಾಂತಾರ' ಸಿನಿಮಾದ 'ವರಾಹ ರೂಪಂ' ಹಾಡಿಗೆ ಬಳಸಿಕೊಳ್ಳಲಾಗಿದೆ ಎಂದು ತೈಕ್ಕುಡ್ಡಂ ಬ್ರಿಡ್ಜ್ ತಂಡ ಆರೋಪಿಸಿತ್ತು. ಈ ಬಗ್ಗೆ ಕೇರಳದ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಸಹ ಹೂಡಿತ್ತು. ಅದರಂತೆ, 'ವರಾಹ ರೂಪಂ' ಹಾಡನ್ನು ಬಳಸದಿರುವಂತೆ ನ್ಯಾಯಾಲಯವು ಆದೇಶ ಹೊರಡಿಸಿತ್ತು.

  ಇದೀಗ 'ಕಾಂತಾರ' ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡಿದ್ದು, ಸಿನಿಮಾದಿಂದ 'ವರಾಹ ರೂಪಂ' ಹಾಡನ್ನು ತೆಗೆಯಲಾಗಿದೆ. ಆದರೆ ಕೇರಳದ ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಹೊಂಬಾಳೆ ಫಿಲಮ್ಸ್ ಸಂಸ್ಥೆಯು ಕೇರಳ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು ಆದರೆ ಅರ್ಜಿಯನ್ನು ನ್ಯಾಯಾಲಯವು ತಳ್ಳಿ ಹಾಕಿದೆ.

  'ಕಾಂತಾರ' ವಿರುದ್ಧ ಹೇಳಿಕೆ: ನಟ ಚೇತನ್ ಎಫ್‌ಐಆರ್ ರದ್ದಿಗೆ ಕೋರ್ಟ್ ನಕಾರ'ಕಾಂತಾರ' ವಿರುದ್ಧ ಹೇಳಿಕೆ: ನಟ ಚೇತನ್ ಎಫ್‌ಐಆರ್ ರದ್ದಿಗೆ ಕೋರ್ಟ್ ನಕಾರ

  ಅಧೀನ ನ್ಯಾಯಾಲಯಗಳು ನೀಡಿದ ಪ್ರತಿ ಆದೇಶದ ಪರಾಮರ್ಶೆ ಮಾಡುವುದು ಸೂಕ್ತವಲ್ಲ ಎಂದು ಕೇರಳ ಹೈಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿ ಹೊಂಬಾಳೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತ ಅರ್ಜಿಯನ್ನು ತಳ್ಳಿ ಹಾಕಿದೆ.

  ''ಅಧೀನ ನ್ಯಾಯಾಲಯಗಳು ಹೊರಡಿಸಿದ ಪ್ರತಿ ಮಧ್ಯಂತರ ಆದೇಶಗಳನ್ನು ಪರಾಮರ್ಶಿಸುವುದು, ಮೇಲಾದೇಶ ವಹಿಸುವುದು ಸೂಕ್ತವಲ್ಲ. ಹಾಗೆ ಮಾಡಿದಲ್ಲಿ, ಅಧೀನ ನ್ಯಾಯಾಲಯಗಳ ಕಾರ್ಯವ್ಯಾಪ್ತಿಯನ್ನು ಕಿರಿದಾಗಿಸಿದ ಹಾಗಾಗುತ್ತದೆ. ಅಧೀನ ನ್ಯಾಯಾಲಯಗಳು ನಿಷ್ಕ್ರಿಯವಾಗುತ್ತವೆ. ಅಲ್ಲದೆ ಈ ನ್ಯಾಯಾಲಯವು ಅಂತಹ ದಾವೆಗಳಿಂದ ತುಂಬಿ ಹೋಗುತ್ತದೆ'' ಎಂದು ಕೇರಳ ಹೈಕೋರ್ಟ್ ಹೇಳಿದೆ.

  ಆದರೆ 'ವರಾಹ ರೂಪಂ' ಹಾಡನ್ನು ಬಳಸದಂತೆ ಕೇರಳದ ಪಾಲಕ್ಕಾಡ್ ಹಾಗೂ ಕೋಳಿಕ್ಕೊಡ್ ನ್ಯಾಯಾಲಯ ಹೊರಡಿಸಿರುವ ಆದೇಶದ ಮೇಲೆ ಇಬ್ಬರು ವ್ಯಕ್ತಿಗಳು ಸಲ್ಲಿಸಿರುವ ಮೇಲ್ಮನವಿಯನ್ನು ಗಣನೆಗೆ ತೆಗೆದುಕೊಳ್ಳುವುದಾಗಿ ಹಾಗೂ ವಿಚಾರಣೆ ನಡೆಸುವುದಾಗಿಯೂ ಕೇರಳ ಹೈಕೋರ್ಟ್ ಇದೇ ಸಂದರ್ಭದಲ್ಲಿ ಹೇಳಿದೆ.

  ಕೋಳಿಕ್ಕೊಡ್ ನ್ಯಾಯಾಲಯದಲ್ಲಿ 'ಥೈಕ್ಕುಡ್ಡಂ ಬ್ರಿಡ್ಜ್' ಸಂಸ್ಥೆಯು 'ವರಾಯ ರೂಪಂ' ಹಾಡಿನ ವಿರುದ್ಧ ದಾವೆ ಹೂಡಿತ್ತು. ಇನ್ನು ಪಾಲಕ್ಕಾಡ್ ನ್ಯಾಯಾಲಯದಲ್ಲಿ ಮಾತೃಭೂಮಿ ಪ್ರಿಂಟಿಂಗ್ ಆಂಡ್ ಪಬ್ಲಿಷಿಂಗ್ ಸಂಸ್ಥೆಯು ದಾವೆ ಹೂಡಿತ್ತು. ಈ ಸಂಸ್ಥೆಯ ಬಳಿ 'ನವರಸಂ' ಹಾಡಿನ ಹಕ್ಕುಗಳಿವೆ. 'ವರಾಹ ರೂಪಂ' ಹಾಡು ಇದೇ 'ನವರಸಂ' ಹಾಡಿನ ಕದ್ದ ರೂಪ ಎನ್ನಲಾಗುತ್ತಿದೆ.

  ಇದೀಗ 'ಕಾಂತಾರ' ಸಿನಿಮಾ ಅಮೆಜಾನ್ ಪ್ರೈಂಗೆ ಬಿಡುಗಡೆ ಆಗಿದ್ದು, 'ವರಾಹ ರೂಪಂ' ಹಾಡಿನ ಸಂಗೀತವನ್ನು ಬದಲಾಯಿಸಲಾಗಿದೆ. ಆಕ್ಷೇಪಣೆಗೆ ಒಳಗಾಗಿದ್ದ 'ನವರಸಂ' ಸಂಗೀತವನ್ನು ತೆಗೆದು ಬೇರೊಂದು ಸಂಗೀತವನ್ನು ಹಾಡಿಗೆ ಬಳಸಲಾಗಿದೆ. ಆದರೆ ಇದನ್ನು ವೀಕ್ಷಕರು ಇಷ್ಟಪಟ್ಟಿಲ್ಲ. ಮೂಲ 'ವರಾಹ ರೂಪಂ' ಹಾಡನ್ನು ಮತ್ತೆ ತನ್ನಿ ಎಂಬ ಒತ್ತಾಯ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ.

  English summary
  Kerala high court dismisses Plea of Kantara movie production company Hombale about injunction on Varaharoopam song.
  Thursday, November 24, 2022, 14:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X