Don't Miss!
- News
7th Pay Commission; ಮುಂಬಡ್ತಿ, ಬಡ್ತಿ, ಭತ್ಯೆಯ ನಿಗದಿ ಮಾನದಂಡಗಳು
- Technology
ಆಪಲ್ ಗ್ರಾಹಕರಿಗೆ ಬಿಗ್ ಶಾಕ್; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮತ್ತೆ ಸಂಕಷ್ಟದಲ್ಲಿ 'ಕಾಂತಾರ': ರಿಷಬ್, ಹೊಂಬಾಳೆ, ಅಮೆಜಾನ್, ಪೃಥ್ವಿರಾಜ್ ಸುಕುಮಾರನ್‌ಗೆ ನೊಟೀಸ್
ಟ್ರೈಲರ್ ಬಿಡುಗಡೆ ಆದಾಗಿನಿಂದಲೂ ಸಿನಿಮಾದ 'ವರಾಹ ರೂಪಂ' ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಸಿನಿಮಾ ಬಿಡುಗಡೆ ಬಳಿಕವಂತೂ ಹಾಡು ಭಾರಿ ವೈರಲ್ ಆಗಿತ್ತು. ಆದರೆ 'ವರಾಹ ರೂಪಂ' ಹಾಡಿನ ಸಂಗೀತ ಮಲಯಾಳಂನ ಆಲ್ಬಂ ಹಾಡೊಂದರಿಂದ ಯಥಾವತ್ತು ತೆಗೆದುಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಕೇರಳದ ಸಂಗೀತ ತಂಡ ಥೈಕ್ಕುಡಂ ಬ್ರಿಡ್ಜ್ ನವರ 'ನವರಸಂ' ಹಾಡಿನ್ನು ನಕಲು ಮಾಡಿ 'ಕಾಂತಾರ'ದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ 'ವರಾಹ ರೂಂಪಂ' ಹಾಡು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಥೈಕ್ಕುಡಂ ಬ್ರಿಡ್ಜ್ ತಂಡವು 'ಕಾಂತಾರ'ದ ನಿರ್ಮಾಣ ಸಂಸ್ಥೆ ಹೊಂಬಾಳೆ ವಿರುದ್ಧ ಕೇರಳದ ಕೋಯಿಕ್ಕೊಡ್ ಹಾಗೂ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯಗಳಲ್ಲಿ ದಾವೆ ಹೂಡಿ, ಹಾಡನ್ನು ಬಳಸದಂತೆ ತಡೆಯಾಜ್ಞೆ ತಂದಿದ್ದರು.
ಕೇರಳದ
ನರ್ಸಿಂಗ್
ವಿದ್ಯಾರ್ಥಿನಿಗೆ
ಟಾಲಿವುಡ್
ನಟ
ಅಲ್ಲು
ಅರ್ಜುನ್
ನೆರವು!
ಆದರೆ ಕೆಲವು ದಿನಗಳ ಹಿಂದಷ್ಟೆ ಕೋಯಿಕ್ಕೊಡ್ ಜಿಲ್ಲಾ ನ್ಯಾಯಾಲಯದಲ್ಲಿ ವಾದ ಮಾಡಿದ 'ಕಾಂತಾರ' ಪರ ವಕೀಲರು ತಡೆಯಾಜ್ಞೆ ತೆರವುಗೊಳಿಸಲು ಸಫಲರಾಗಿದ್ದರು. ಈ ಗೆಲುವನ್ನು 'ಕಾಂತಾರ' ಚಿತ್ರತಂಡ ಸೇರಿದಂತೆ ಹಲವರು ಸಂಭ್ರಮಿಸಿದ್ದರು. ಆದರೆ ಆ ಸಂಭ್ರಮ ಹೆಚ್ಚು ಸಮಯ ಉಳಿದಿಲ್ಲ. ಈಗ ಕೇರಳ ಹೈಕೋರ್ಟ್ ಮತ್ತೆ 'ಕಾಂತಾರ' ಸಿನಿಮಾದ ವಿರುದ್ಧ ಆದೇಶ ನೀಡಿದೆ.

ತಡೆ ನೀಡಿದ ಕೇರಳ ಹೈಕೋರ್ಟ್
ಕೋಯಿಕ್ಕೊಡ್ ನ್ಯಾಯಾಲಯದಲ್ಲಿ ಹಿನ್ನೆಲೆ ಉಂಟಾದ ಬೆನ್ನಲ್ಲೆ ಥೈಕ್ಕುಡಂ ಬ್ರಿಡ್ಜ್ ಸಂಗೀತ ತಂಡ ಹೈಕೋರ್ಟ್‌ಗೆ ಅಪೀಲು ಹೋಗಿದ್ದು, ಅಲ್ಲಿ ಕೋಯಿಕ್ಕೊಡ್ ನೀಡಿದ್ದ ಆದೇಶಕ್ಕೆ ತಡೆ ನೀಡಲಾಗಿದೆ. ಅಲ್ಲದೆ ಸಿನಿಮಾದ ನಿರ್ಮಾಣ ಸಂಸ್ಥೆ ಹೊಂಬಾಳೆ, ನಟ-ನಿರ್ದೇಶಕ ರಿಷಬ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ನಿರ್ಮಾಪಕ ವಿಜಯ್ ಕಿರಗಂದೂರು, ಒಟಿಟಿ ಸಂಸ್ಥೆ ಅಮೆಜಾನ್, ಸಂಗೀತ ಸಂಸ್ಥೆ ಸ್ಪಾಟಿಫೈ, ಕೇರಳದಲ್ಲಿ 'ಕಾಂತಾರ' ವಿತರಣೆ ಮಾಡಿರುವ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಇನ್ನೂ ಕೆಲವರಿಗೆ ನೊಟೀಸ್ ಜಾರಿ ಮಾಡಿದೆ.

'ವರಾಹ ರೂಪಂ' ಹಾಡು ಬಳಸದಂತೆ ಆದೇಶ
ಕೋಯಿಕ್ಕೊಡ್ ಹಾಗೂ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯ ಮೊದಲಿಗೆ 'ವರಾಹ ರೂಪಂ' ಹಾಡು ಬಳಸದಂತೆ ಆದೇಶ ಹೊರಡಿಸಿತ್ತು. ಆದರೆ ಕೆಲವು ದಿನಗಳ ಹಿಂದಷ್ಟೆ ಕೋಯಿಕ್ಕೊಡ್ ಜಿಲ್ಲಾ ನ್ಯಾಯಾಲಯವು ತಡೆಯಾಜ್ಞೆ ತೆರವುಗೊಳಿಸಿತ್ತು. ಆದರೆ ಈಗ ಕೋಯಿಕ್ಕೊಡ್ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಕೇರಳ ಹೈಕೋರ್ಟ್ ರದ್ದು ಮಾಡಿದೆ. ಆ ಮೂಲಕ 'ಕಾಂತಾರ'ಗೆ ಧಕ್ಕಿದ್ದ ಸಣ್ಣ ಮುನ್ನಡೆ ಸಹ ಇಲ್ಲದಂತಾಗಿದೆ.

ಪಾಲಕ್ಕಾಡ್ ನ್ಯಾಯಾಲಯದಲ್ಲಿ ವಿಚಾರಣೆ
ಇನ್ನು ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯದಲ್ಲಿಯೂ ಇದೇ ವಿಷಯವಾಗಿ ಪ್ರಕರಣ ಚಾಲ್ತಿಯಲ್ಲಿದೆ. ಅಲ್ಲಿ ಮಾತೃಭೂಮಿ ಪಬ್ಲಿಕೇಶನ್ಸ್ ಆಂಡ್ ಪ್ರಿಂಟರ್ಸ್ ಸಂಸ್ಥೆಯು 'ಕಾಂತಾರ'ದ ವಿರುದ್ಧ ದೂರು ದಾಖಲಿಸಿದೆ. ಥೈಕ್ಕುಡಂ ಬ್ರಿಡ್ಸ್‌ನ 'ನವರಸಂ' ಹಾಡಿನ ಹಕ್ಕು ಈ ಸಂಸ್ಥೆಯ ಬಳಿ ಇದೆ. ಆದರೆ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯದಲ್ಲಿ ಯಾವುದೇ ಹೊಸ ಆದೇಶ ಹೊರಬಿದ್ದಿಲ್ಲ. ಅಲ್ಲಿ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದೆ.

'ವರಾಹ ರೂಪಂ' ಹೊಸ ಸಂಗೀತದೊಂದಿದೆ
ಕೋಯಿಕ್ಕೊಡ್ ಹಾಗೂ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯಗಳು 'ವರಾಹ ರೂಪಂ' ಹಾಡು ಬಳಸದಂತೆ ತಡೆಯಾಜ್ಞೆ ನೀಡಿದ ಬಳಿಕ 'ವರಾಹ ರೂಪಂ'ನ ಸಂಗೀತವನ್ನು ಬದಲಾಯಿಸಲಾಗಿದೆ. ಅಮೆಜಾನ್ ಒಟಿಟಿಯಲ್ಲಿ 'ವರಾಹ ರೂಪಂ' ಸಿನಿಮಾದ ಹೊಸ ಸಂಗೀತವನ್ನು ಅಳವಡಿಸಿ ಸಿನಿಮಾ ಪ್ರಸಾರ ಮಾಡಲಾಗುತ್ತಿದೆ. ಸ್ಪೋಟಿಫೈನಲ್ಲಿಯೂ ಸಹ ಹೊಸ ಹಾಡನ್ನೇ ಪ್ರಸಾರ ಮಾಡಲಾಗುತ್ತಿದೆ.