ರವಿ ಬಸ್ರೂರು ಕನಸಿನ ಸ್ಟುಡಿಯೋಕ್ಕೆ ಬಂದ ಕೆಜಿಎಫ್ 2, ಸಲಾರ್
ಯಶ್ ನಟನೆ ಕೆಜಿಎಫ್ 2 , ಪ್ರಭಾಸ್ ನಟನೆಯ 'ಸಲಾರ್'ಸಿನಿಮಾಗಳೆರಡೂ ದೇಶದ ಬಹುನಿರೀಕ್ಷಿತ ಸಿನಿಮಾಗಳಾಗಿವೆ ಗುರುತಿಸಿಕೊಂಡಿವೆ.
Recommended Video
ಈ ಎರಡೂ ಸಿನಿಮಾಕ್ಕೆ ಹಿನ್ನೆಲೆ ಸಂಗೀತ ಹೊಸೆಯುವ ಕಾರ್ಯ ಈಗಷ್ಟೆ ಶುರುವಾಗಿದೆ. ಸಂಗೀತ ನಿರ್ದೇಶಕರಾದ ರವಿ ಬಸ್ರೂರು ಅವರು ತಮ್ಮ ಊರು ಬಸ್ರೂರಿನಲ್ಲಿ ಪ್ರಾರಂಭಿಸಿರುವ ಸಂಗೀತ ಸ್ಟುಡಿಯೋದಲ್ಲಿ ಹಿನ್ನೆಲೆ ಸಂಗೀತ ನೀಡುವ ಕಾರ್ಯ ಮಾಡಲಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಪ್ರಶಾಂತ್ ನೀಲ್, 'ಕೇವಲ ರವಿ ಬಸ್ರೂರು ಸ್ಟುಡಿಯೋದಲ್ಲಿ ಮಾತ್ರವೇ 'ಕೆಜಿಎಫ್ 2', 'ಸಲಾರ್' ಸಿನಿಮಾಗಳು ಭೇಟಿಯಾಗುತ್ತವೆ. ಎರಡೂ ಸಿನಿಮಾದ ಹಿನ್ನೆಲೆ ಸಂಗೀತ ಕಾರ್ಯ ಚಾಲ್ತಿಯಲ್ಲಿದೆ ಎಂದಿದ್ದಾರೆ. ರವಿ ಜೊತೆಗೆ ನಿಂತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ತಮ್ಮ ಊರು ಬಸ್ರೂರಿನಲ್ಲಿ ಸುಸಜ್ಜಿತ ಸ್ಟುಡಿಯೋ ನಿರ್ಮಾಣ ಮಾಡಿದ್ದಾರೆ. ಸ್ಟುಡಿಯೋಕ್ಕೆ ರವಿ ಬಸ್ರೂರು ಮ್ಯೂಸಿಕ್ ಆಂಡ್ ಮೂವೀಸ್ ಎಂದು ಹೆಸರಿಟ್ಟಿದ್ದಾರೆ. ವಿಶೇಷವೆಂದರೆ ಈ ಸ್ಟುಡಿಯೋವನ್ನು ಪ್ರಶಾಂತ್ ನೀಲ್ ಅವರೇ ಉದ್ಘಾಟಿಸಿದ್ದರು. ಇದೀಗ ಕೆಜಿಎಫ್ 2, ಸಲಾರ್ ಎರಡೂ ಭಾರಿ ಬಿಗ್ ಬಜೆಟ್ ಸಿನಿಮಾಗಳಿಗೆ ಸಂಗೀತ ನೀಡುವ ಕಾರ್ಯ ಅದೇ ಸ್ಟುಡಿಯೋದಲ್ಲಿ ನಡೆಯುತ್ತಿದೆ.
ಯಶ್ ಅಭಿನಯದ 'ಕೆಜಿಎಫ್ 2' ಸಿನಿಮಾವು ಜುಲೈ 16 ರಂದು ಬಿಡುಗಡೆ ಆಗಲಿದೆ. ಇನ್ನು ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಚಿತ್ರೀಕರಣವೂ ಬಹುತೇಕ ಪೂರ್ಣವಾಗಿದೆ ಎನ್ನಲಾಗಿದೆ. ಬಿಡುಗಡೆ ದಿನಾಂಕ ಇನ್ನೂ ಪ್ರಕಟವಾಗಿಲ್ಲ.


Click it and Unblock the Notifications











