KGF 2 Toofan lyrical video : ಟ್ರೇಲರ್ ನಿರೀಕ್ಷೆ ಮಾಡುತ್ತಿದ್ದ ಅಭಿಮಾನಿಗಳಿಗೆ ಶಾಕ್ ಕೊಟ್ಟ ಚಿತ್ರತಂಡ

'ಕೆಜಿಎಫ್ 2' ಸಿನಿಮಾ ಬಿಡುಗಡೆ ದಿನೇ-ದಿನೇ ಹತ್ತಿರವಾಗುತ್ತಿದೆ. ಚಿತ್ರತಂಡವು ಪ್ರಚಾರ ಕಾರ್ಯವನ್ನು ನಿಧಾನಕ್ಕೆ ಪ್ರಾರಂಭ ಮಾಡಿದೆ.

ಕೆಲವು ದಿನಗಳ ಹಿಂದಷ್ಟೆ ಪೋಲ್ ಒಂದನ್ನು ನೀಡಿದ್ದ 'ಕೆಜಿಎಫ್ 2' ನಿರ್ಮಾಣ ಸಂಸ್ಥೆ ಹೊಂಬಾಳೆ, 'ಕೆಜಿಎಫ್ 2' ಸಿನಿಮಾದ ಟ್ರೇಲರ್ ಬೇಕಾ? ಹಾಡು ಬೇಕಾ? ಅಥವಾ ಸರ್ಪೈಸ್‌ ಬೇಕಾ? ಎಂದು ಕೇಳಿದ್ದರು. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಆಯ್ಕೆ ಮಾಡಿದ್ದು ಟ್ರೇಲರ್ ಅನ್ನು.

ಹೊಂಬಾಳೆ ಫಿಲಮ್ಸ್ ಸಹ ಶೀಘ್ರದಲ್ಲಿಯೇ ತಾವು ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿತ್ತು. ಅಂತೆಯೇ ಅಭಿಮಾನಿಗಳು ಸಹ ಸಿನಿಮಾದ ಟ್ರೇಲರ್‌ಗಾಗಿ ಕಾತರದಿಂದ ಕಾಯುತ್ತಿದ್ದರು. ಆದರೆ ಚಿತ್ರತಂಡ ಟ್ರೇಲರ್ ಬದಲಿಗೆ ಹಾಡು ಬಿಡುಗಡೆ ಮಾಡುತ್ತಿದೆ.

KGF 2 Movie Lyrical Video Releasing On March 21

'ಕೆಜಿಎಫ್ 2' ಸಿನಿಮಾದ 'ತೂಫಾನ್' ಹಾಡಿನ ಲಿರಿಕಲ್ ವಿಡಿಯೋ ಮಾರ್ಚ್ 21 ರ ಸೋಮವಾರ ಬಿಡುಗಡೆ ಆಗಲಿದೆ ಎಂದು ಹೊಂಬಾಳೆ ಫಿಲಮ್ಸ್ ಅಧಿಕೃತವಾಗಿ ಪ್ರಕಟಿಸಿದೆ. 'ತೂಫಾನ್' ಹಾಡು ಮಾರ್ಚ್ 21 ರಂದು 11:07 ನಿಮಿಷಕ್ಕೆ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಲಿದೆ.

ಹಾಡು ಬಿಡುಗಡೆ ಆಗುವ ಬಗ್ಗೆ ಪೋಸ್ಟರ್ ಒಂದನ್ನು ಸಂಸ್ಥೆಯು ಬಿಡುಗಡೆ ಮಾಡಿದ್ದು, 'ಕೆಜಿಎಫ್: ಚಾಪ್ಟರ್ 1' ಚಿತ್ರೀಕರಿಸಲಾಗಿದ್ದ ಕೆಜಿಎಫ್‌ನ ಸೈನೈಡ್ ಗುಡ್ಡದಲ್ಲಿ ಕೆಲವು ಮಕ್ಕಳು ಹಣೆಗೆ ಬಿಳಿ ಬಟ್ಟೆ ಕಟ್ಟಿಕೊಂಡು ಠೀವಿಯಿಂದ ನಿಂತಿರುವ ಚಿತ್ರವನ್ನು ನೀಡಲಾಗಿದೆ.

'ಕೆಜಿಎಫ್ 2' ಸಿನಿಮಾದ ಟೀಸರ್ ಅನ್ನು 2021 ಜನವರಿ 07 ರಂದು ಬಿಡುಗಡೆ ಮಾಡಲಾಗಿತ್ತು. ಅದಾದ ಬಳಿಕ ಆಗೊಮ್ಮೆ ಈಗೊಮ್ಮೆ ಕೆಲವು ನಟರ ಲುಕ್‌ ಪೋಸ್ಟರ್ ಬಿಡುಗಡೆ ಮಾಡಿದ್ದರ ಹೊರತಾಗಿ ಇನ್ನಾವ ಮೇಜರ್ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಲಾಗಿರಲಿಲ್ಲ. ಹಾಗಾಗಿಯೇ ಈಗ ಬಿಡುಗಡೆ ಆಗುತ್ತಿರುವ ಲಿರಿಕಲ್ ವಿಡಿಯೋ ಭಾರಿ ನಿರೀಕ್ಷೆಯನ್ನು ಅಭಿಮಾನಿಗಳನ್ನು ಮೂಡಿಸಿದೆ.

'ಕೆಜಿಎಫ್ 2' ಸಿನಿಮಾ ಏಪ್ರಿಲ್ 14 ರಂದು ತೆರೆಗೆ ಬರಲಿದೆ. ಸಿನಿಮಾದಲ್ಲಿ ಯಶ್ ಜೊತೆಗೆ ಬಾಲಿವುಡ್‌ನ ಸಂಜಯ್ ದತ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ರವೀನಾ ಟಂಡನ್ ಇದ್ದಾರೆ. ಜೊತೆಗೆ ಪ್ರಕಾಶ್ ರೈ, ತೆಲುಗಿನ ರಾವ್ ರಮೇಶ್ ಸೇರಿದಂತೆ ಇನ್ನೂ ಹಲವರು ಸಿನಿಮಾದಲ್ಲಿದ್ದಾರೆ.

More from Filmibeat

English summary
KGF 2 movie Toofan song's lyrical video releasing on March 21. KGF 2 movie will hit the theaters on April 14.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X