KGF 2 Gagana Nee Song : ಹೃದಯ ಮೀಟುವ ಹಾಡು ಬಿಡುಗಡೆಗೆ ಸಮಯ ನಿಗದಿ
'ಕೆಜಿಎಫ್ 2' ಸಿನಿಮಾದ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ. ಮುಂಬೈನಲ್ಲಿ ನಟ ಯಶ್ ಹಾಗೂ ಚಿತ್ರತಂಡ ಸಂದರ್ಶನ ನಂತರ ಸಂದರ್ಶನಗಳನ್ನು ನೀಡುತ್ತಿದೆ. ಇನ್ನೊಂದೆಡೆ ಸಾಮಾಜಿಕ ಜಾಲತಾಣದಲ್ಲಿಯೂ ಸಿನಿಮಾ ಪ್ರಚಾರ ಜೋರಾಗಿ ನಡೆಯುತ್ತಿದೆ.
'ಕೆಜಿಎಫ್ 2' ಸಿನಿಮಾದ ಟೀಸರ್, ಟ್ರೇಲರ್‌ಗಳು ಈಗಾಗಲೇ ದಾಖಲೆಗಳ ಮೇಲೆ ದಾಖಲೆ ಬರೆದಿದೆ. ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿದ್ದ 'ತೂಫಾನ್' ಹಾಡು ಸಹ ವೈರಲ್ ಆಗಿದೆ. ಈ ಎಲ್ಲ ಅಬ್ಬರದ ನಡುವೆ ರಾಕಿ ಭಾಯ್‌ನ ಭಾವುಕ ಮುಖ ಪರಿಚಯಿಸುವ ಕಾರ್ಯವನ್ನು 'ಕೆಜಿಎಫ್ 2' ತಂಡ ನಾಳೆ (ಏಪ್ರಿಲ್ 06)ರಂದು ಮಾಡಲಿದೆ.
ಏಪ್ರಿಲ್ 06 ರಂದು 'ಕೆಜಿಎಫ್ 2' ಸಿನಿಮಾದ ಹಾಡೊಂದು ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಲಿದೆ. ಆದರೆ ಈ ಹಾಡು ಈ ಹಿಂದಿನ ಹಾಡಿನಂತೆ ಅಬ್ಬರದಿಂದ ಕೂಡಿರುವುದಿಲ್ಲ ಬದಲಿಗೆ ಎಮೋಷನಲ್ ಹಾಡಾಗಿರಲಿದೆ.

ಲಿರಿಕಲ್ ಹಾಡು ಬಿಡುಗಡೆ ಮಾಡುವ ಬಗ್ಗೆ 'ಕೆಜಿಎಫ್' ತಂಡ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಂಚಿಕೊಂಡಿದ್ದು, ಹಾಡು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಕನ್ನಡದಲ್ಲಿ 'ಗಗನ ನೀ' ಎಂದು ಪ್ರಾರಂಭವಾಗುವ ಈ ಹಾಡು, ಹಿಂದಿಯಲ್ಲಿ 'ಫಲಕ್ ತು, ಗರಜ್ ತು' ಎಂದಿದೆ. ಹೀಗೆ ಒಂದೊಂದು ಭಾಷೆಯಲ್ಲಿ ಒಂದೊಂದು ರೀತಿಯಾಗಿ ಹಾಡು ಇರಲಿದೆ. ಹಾಡು ಬಿಡುಗಡೆ ಆಗಲಿದೆ ಎಂದು ಮಾಹಿತಿ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ಬಟ್ಟೆಯಿಂದ ಮಾಡಿದ ತೊಟ್ಟಿಲಿನ ಚಿತ್ರವಿದೆ.
ನಾಳೆ ಬಿಡುಗಡೆ ಆಗಲಿರುವ ಹಾಡು, ರಾಕಿ ಭಾಯ್‌ನ ತಾಯಿಯ ಕುರಿತಾಗಿ ಆಗಿರಲಿದೆ. ತಾಯಿ ತನ್ನ ಮಗುವನ್ನು ಕುರಿತಾಗಿ ಹಾಡು ಇದಾಗಿರಲಿದೆ. 'ಕೆಜಿಎಫ್: ಚಾಪ್ಟರ್ 1' ನಲ್ಲಿಯೂ ತಾಯಿ ಕುರಿತಾಗಿ ಇದ್ದ 'ಗರ್ಭಧಿ' ಹಾಡು ಭಾರಿ ಹಿಟ್ ಆಗಿತ್ತು. ಈಗ 'ಕೆಜಿಎಫ್ 2' ನಲ್ಲಿಯೂ ತಾಯಿ ಸೆಂಟಿಮೆಂಟ್ ಕುರಿತಾದ ಹಾಡನ್ನು ಇಟ್ಟಿದ್ದಾರೆ. 'ಕೆಜಿಎಫ್: ಚಾಪ್ಟರ್ 1' ಸಿನಿಮಾದಲ್ಲಿನ ತಾಯಿ ಸೆಂಟಿಮೆಂಟ್ ಅನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದರು. ರಾಕಿ ಭಾಯ್ ತಾಯಿಯ ಪಾತ್ರದಲ್ಲಿ ಅರ್ಚನಾ ಜೋಯಿಸ್ ನಟಿಸಿದ್ದರು. ಅವರ ನಟನೆಗೂ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು.
'ಕೆಜಿಎಫ್ 2' ಸಿನಿಮಾವು ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಯಶ್, ನಾಯಕಿ ರೀಮಾ ಸೇನ್ ಜೊತೆಗೆ ಬಾಲಿವುಡ್ ದಿಗ್ಗಜ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ರಾವ್ ರಮೇಶ್, ಅಚ್ಯುತ್ ಕುಮಾರ್ ಇನ್ನೂ ಹಲವರು ನಟಿಸಿದ್ದಾರೆ.
Recommended Video



Click it and Unblock the Notifications











