For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರಕ್ಕೆ ರವಿಬಸ್ರೂರು ಮ್ಯೂಸಿಕ್!

  |

  'KGF' ಸರಣಿ ಸಿನಿಮಾಗಳಿಗೆ ಕಿಕ್ಕೇರಿಸೋ ಮ್ಯೂಸಿಕ್ ಕಂಪೋಸ್ ಮಾಡಿ ಗೆದ್ದ ಸಂಗೀತ ನಿರ್ದೇಶಕ ರವಿಬಸ್ರೂರು ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲೂ ಕೆಲಸ ಮಾಡ್ತಿದ್ದಾರೆ. ಪ್ಯಾನ್‌ ಇಂಡಿಯಾ ಸಿನಿಮಾ ಮಾಡುವವರೆಲ್ಲಾ ರವಿ ಬಸ್ರೂರು ಮ್ಯೂಸಿಕ್ ಬೇಕು ಎಂದು ಕೇಳುವಂತಾಗಿದೆ. ಅಕ್ಕ ಪಕ್ಕ ಇಂಡಸ್ಟ್ರಿಯವರು ಕರೆದು ಅವಕಾಶ ಕೊಡ್ತಿದ್ದಾರೆ. ಪೋಸ್ಟರ್‌ಗಳಲ್ಲಿ ಕುಂದಾಪುರದ ಪ್ರತಿಭೆಯ ಹೆಸರನ್ನು ದೊಡ್ಡ ಅಕ್ಷರಗಳಲ್ಲಿ ಹಾಕ್ತಿದ್ದಾರೆ.

  ಪ್ರಶಾಂತ್ ನೀಲ್ ನಿರ್ದೇಶನದ 'KGF' ಸಿನಿಮಾ ಸಕ್ಸಸ್‌ನಲ್ಲಿ ರವಿಬಸ್ರೂರು ಪಾಲು ದೊಡ್ಡದ್ದಿದೆ. ಚಿತ್ರಕ್ಕೆ ಆ ಖದರ್ ತಂದಿದ್ದೆ ಇವರ ಮ್ಯೂಸಿಕ್. ಕನ್ನಡ ಸಿನಿರಸಿಕರು ಮಾತ್ರವಲ್ಲ ಪರಭಾಷಾ ಫಿಲ್ಮ್ ಮೇಕರ್ಸ್, ಆಡಿಯನ್ಸ್ ಚಿತ್ರದ ಸಾಂಗ್ಸ್ ಮತ್ತು ಬಿಜಿಎಂಗೆ ಕಳೆದು ಹೋಗಿದ್ದರು. ಇವತ್ತಿಗೂ ಆ ಬಿಜಿಎಂ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಇದೀಗ 'ಸಲಾರ್', 'ಕಬ್ಜ' ಹೀಗೆ ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ರವಿ ಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಕೂಡ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ರೀರೆಕಾರ್ಡಿಂಗ್‌ ಕೆಲಸ ಒಪ್ಪಿಸಿದ್ದಾರೆ.

  ಅಫ್ಘಾನ್ ಬಿಕ್ಕಟ್ಟು ಕುರಿತು ಚಿತ್ರ: ಬಾಲಿವುಡ್‌ನಲ್ಲಿ ರವಿ ಬಸ್ರೂರ್ ಹವಾಅಫ್ಘಾನ್ ಬಿಕ್ಕಟ್ಟು ಕುರಿತು ಚಿತ್ರ: ಬಾಲಿವುಡ್‌ನಲ್ಲಿ ರವಿ ಬಸ್ರೂರ್ ಹವಾ

  ರವಿಬಸ್ರೂರು ಹೆಸರು ಈಗ ಭಾರತೀಯ ಚಿತ್ರರಂಗದಲ್ಲಿ ಮಾರ್ದನಿಸುತ್ತಿದೆ. ಪರ ಭಾಷಾ ಪ್ರೇಕ್ಷಕರಿಗೂ ಕೂಡ ಇವರ ಹೆಸರು ಚಿರಪರಿಚಿತ ಅನ್ನುವಂತಾಗಿದೆ. ಒಂದ್ಕಾಲದಲ್ಲಿ ನಮ್ಮ ಸಿನಿಮಾ ನೋಡಿ ಪರಭಾಷಿಕರು ಮೆಚ್ಚಿಕೊಳ್ಳಬೇಕು. ಕರೆದು ಅವಕಾಶ ಕೊಡಬೇಕು ಎನ್ನುವ ಕನಸು ಕಂಡಿದ್ದರು. ಅದು ಈಗ ನಿಜವಾಗಿದೆ. 'ಶಾಸನ ಸಭ' ಅನ್ನುವ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರಕ್ಕೆ ರವಿಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಸಿನಿಮಾ ಪೋಸ್ಟರ್‌ನಲ್ಲಿ ನಿರ್ದೇಶಕರ ಹೆಸರಿಗಿಂತ ನಮ್ಮ ಕನ್ನಡಿಗನ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಹಾಕಿದ್ದಾರೆ.

  ಇಂದ್ರಸೇನಾ, ಐಶ್ವರ್ಯ ರಾಜ್ 'ಶಾಸನ ಸಭ' ಚಿತ್ರದ ಲೀಡ್‌ ರೋಲ್‌ಗಳಲ್ಲಿ ನಟಿಸ್ತಿದ್ದಾರೆ. ಡಾ. ರಾಜೇಂದ್ರ ಪ್ರಸಾದ್, ಸೋನಿಯಾ ಅಗರ್‌ವಾಲ್, ಪೃಥ್ವಿರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸ್ತಿದ್ದು, ತೆಲುಗಿನಲ್ಲಿ ನಿರ್ಮಾಣವಾಗ್ತಿರುವ ಸಿನಿಮಾ ಬೇರೆ ಭಾಷೆಗಳಿಗೂ ಡಬ್ ಆಗಿ ರಿಲೀಸ್ ಆಗ್ತಿದೆ. ವೇಣು ಮಡಿಕಂಠಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಸದ್ಯ ಈ ಪೊಲಿಟಿಕಲ್ ಥ್ರಿಲ್ಲರ್ ಚಿತ್ರದ ರೀರೆಕಾರ್ಡಿಂಗ್ ಕೆಲಸ ಭರದಿಂದ ಸಾಗುತ್ತಿದೆ.

  KGF composer ravi basrur working for another pan india movie

  ಸಲ್ಮಾನ್ ಖಾನ್ ನಟನೆಯ 'ಅಂತಿಮ್' ಚಿತ್ರಕ್ಕೂ ರವಿ ಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡಿ ಸೈ ಅನ್ನಿಸಿಕೊಂಡಿದ್ದರು. ಮಲಯಾಳಂ ಸಿನಿಮಾಗಳಿಗೂ ಕೆಲಸ ಮಾಡ್ತಿದ್ದಾರೆ. ಕುಂದಾಪುರದ ಹುಟ್ಟೂರು ಬಸ್ರೂರಿನಲ್ಲೂ ಸ್ಟುಡಿಯೋ ನಿರ್ಮಿಸಿರುವ ರವಿ ತಮ್ಮ ಸಿನಿಮಾಗಳ ಬಹುತೇಕ ಕೆಲಸಗಳನ್ನು ಅಲ್ಲಿಂದಲೇ ಮಾಡುತ್ತಾರೆ. 'ಸಲಾರ್‌'ಗಿಂತ ಮೊದಲು ರವಿ ಬಸ್ರೂರು ಸಂಗೀತ ನಿರ್ದೇಶನದ 'ಶಾಸನ ಸಭ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಲಿದೆ.

  English summary
  KGF composer ravi basrur working for another pan india movie. Know More.
  Thursday, September 22, 2022, 15:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X