ಕ್ಲಿಕ್ ಆಯ್ತಾ 'ಕೆಜಿಎಫ್' ಮೂರನೇ ಹಾಡು, ಹೇಗಿದೆ ಪ್ರತಿಕ್ರಿಯೆ ?
'ಕೆಜಿಎಫ್' ಸಿನಿಮಾ ಬಿಡುಗಡೆಗೆ ಕೇವಲ 8 ದಿನ ಬಾಕಿ ಇದೆ. ಹೀಗಿರುವಾಗಲೇ ಸಿನಿಮಾದ ಒಂದೊಂದೆ ಹಾಡುಗಳು ರಿಲೀಸ್ ಆಗಿ ಸಿನಿಮಾದ ಹವಾವನ್ನು ಹೆಚ್ಚು ಮಾಡುತ್ತಿದೆ.
ಸಿನಿಮಾದ ಮೂರನೇ ಹಾಡು ನಿನ್ನೆ ಸಂಜೆ ಬಿಡುಗಡೆಯಾಗಿದೆ. 'ಸಲಾಮ್ ರಾಕಿ ಭಾಯ್...' ಹಾಗೂ 'ಗರ್ಭದಿ...' ಎನ್ನುವ ಹಾಡಿನ ನಂತರ 'ಸಿಡಿಲ ಬರವ..' ಎಂಬ ಹಾಡು ಅಭಿಮಾನಿಗಳ ಮುಂದೆ ಬಂದಿದೆ.

ಹಾಡು ಕೇಳಿದರೆ ರೋಮಾಂಚನ ಉಂಟಾಗುತ್ತದೆ. ಈ ಹಾಡಿಗೂ ದೊಡ್ಡ ರೆಸ್ಪಾನ್ಸ್ ಸಿಕ್ಕಿದೆ. ಯೂಟ್ಯೂಬ್ ನಲ್ಲಿ ಈ ಹಾಡು ಈಗ 13 ಟ್ರೆಂಡಿಂಗ್ ವಿಡಿಯೋ ಆಗಿದೆ. 4 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡು ಈ ಹಾಡು ಮುನ್ನುಗುತ್ತಿದೆ.
'ಕೆಜಿಎಫ್' ಸಿನಿಮಾದ ಈ ಸಿಡಿಲಿನ ಹಾಡನ್ನು ಸಂತೋಷ್ ವೆಂಕಿ, ಸಚಿನ್ ಬಸ್ರೂರ್, ಅನನ್ಯ ಭಟ್ ಸೇರಿದಂತೆ ಕೆಲವರು ಹಾಡಿದ್ದಾರೆ. ರವಿ ಬ್ರಸೂರ್ ಸಾಹಿತ್ಯ ಹಾಗೂ ಸಂಗೀತ ನೀಡಿದ್ದಾರೆ.
ಹಾಡಿಗೆ ಯೂಟ್ಯೂಬ್ ನಲ್ಲಿ ಬಂದಿರುವ ಬಹುತೇಕ ಕಮೆಂಟ್ಸ್ ಗಳು ಪಾಸಿಟಿವ್ ಆಗಿದೆ. ಈ ಹಾಡುಗಳ ನಂತರ ಹಿಂದಿ ಭಾಷೆಯ 'ಕೆಜಿಎಫ್'ನ ಹೊಸ ಹಾಡು ಇಂದು ಬಿಡುಗಡೆಯಾಗುತ್ತಿದೆ.
English summary
Rocking star Yash starrer 'KGF' movie 3rd song released. music direction by ravi basrur.


Click it and Unblock the Notifications