'ಕೆಜಿಎಫ್' ತಾಯಿಯ ಹಾಡು ಟ್ರೆಂಡ್ : ಎರಡನೇ ಹಾಡಿನ ವಿಶೇಷ

Recommended Video

KGF Kannada Movie: ಕೆಜಿಎಫ್' ತಾಯಿಯ ಹಾಡು ಟ್ರೆಂಡ್ : ಎರಡನೇ ಹಾಡಿನ ವಿಶೇಷ | FILMIBEAT KANNADA

'ಸಲಾಮ್ ರಾಕಿ ಭಾಯ್..' ಎಂಬ ಮಾಸ್ ಹಾಡು ಎಲ್ಲರನ್ನು ಕುಣಿಸುತ್ತಿದೆ. ಈ ಹಾಡಿನ ಬಳಿಕ 'ಕೆಜಿಎಫ್' ಸಿನಿಮಾ ಎರಡನೇ ಹಾಡು ಬಿಡುಗಡೆಯಾಗಿದೆ. 'ಕೆಜಿಎಫ್' ತಾಯಿಯ ಹಾಡು ಕೇಳುಗರ ಮನ ಮುಟ್ಟಿದೆ.

ನಿನ್ನೆ ಸಂಜೆ 7.30ಕ್ಕೆ 'ಕೆಜಿಎಫ್' ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. 'ಗರ್ಭದಿ..' ಎಂಬ ಈ ಹಾಡು ಸದ್ಯ ಯೂಟ್ಯೂಬ್ ನಲ್ಲಿ 5 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದಿದೆ. ಈ ಹಾಡು ಯೂಟ್ಯೂಬ್ ನಲ್ಲಿ 5 ಟಾಪ್ ಟ್ರೆಂಡಿಂಗ್ ವಿಡಿಯೋ ಆಗಿದೆ. ಮುಖ್ಯವಾಗಿ ಈ ಹಾಡಿನ ಸಾಹಿತ್ಯಕ್ಕೆ ದೊಡ್ಡ ಮೆಚ್ಚುಗೆ ವ್ಯಕ್ತವಾಗಿದೆ.

kgf movie 2nd song released

''ಗರ್ಭದಿ ನನ್ನಿರಿಸಿ... ಊರಲಿ ನಡೆಯುತ್ತಿರೇ.. ತೇರಲಿ ಕುಳಿತಂತೆ ಅಮ್ಮ..'

''ಗುಮ್ಮ ಬಂದೆನಿಸಿ... ಹೆದರಿ ನಿಂತಾಗ ನಿನ್ನ ಸೆರಗೇ ಕಾವಲು ಅಮ್ಮ..''

ಎಂಬ ಈ ಸಾಲುಗಳು ಹಾಡಿನ ಶಕ್ತಿಯನ್ನು ಹೆಚ್ಚಿಸಿವೆ. ಕಿನ್ನಲ್ ರಾಜ್ ಹಾಗೂ ರವಿ ಬಸ್ರೂರ್ ಸಾಹಿತ್ಯ ಬರೆದಿದ್ದಾರೆ. ಅನನ್ಯ ಭಟ್ ಹಾಡಿಗೆ ಧ್ವನಿಯಾಗಿದ್ದಾರೆ. ರವಿ ಬಸ್ರೂರ್ ಸಂಗೀತ ಮ್ಯಾಜಿಕ್ ಮಾಡಿದೆ.

ಅಂದಹಾಗೆ, 'ಕೆಜಿಎಫ್' ಸಿನಿಮಾದ ಹಾಡುಗಳ ಸಿನಿಮಾದ ಮೇಲಿನ ನಿರೀಕ್ಷೆಯನ್ನ ಆಕಾಶದ ಎತ್ತರಕ್ಕೆ ಏರಿಸಿವೆ. ಈ ಮಹಾ ಸಿನಿಮಾ ಇನ್ನ 11 ದಿನಗಳಲ್ಲಿ ಬಿಡುಗಡೆಯಾಗುತ್ತಿದೆ.

More from Filmibeat

English summary
Rocking star Yash starrer 'KGF' movie 2nd song released. music direction by ravi basrur.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X