twitter
    For Quick Alerts
    ALLOW NOTIFICATIONS  
    For Daily Alerts

    ಗೆಲುವಿನ ಬೆನ್ನತ್ತಿ ಬಂದ ರವಿ ಬಸ್ರೂರ್‌ಗೆ ಸಕ್ಸಸ್ ನೀಡಿದ ಐದು ಚಿತ್ರಗಳು

    |

    'ಕೆಜಿಎಫ್' ಚಿತ್ರದ ಮೂಲಕ ದೊಡ್ಡ ಖ್ಯಾತಿ ಗಳಿಸಿಕೊಂಡ ರವಿ ಬಸ್ರೂರ್ ಅವರ ಸಂಗೀತ ಜರ್ನಿ ಬಹಳ ಆಸಕ್ತಿಕರವಾಗಿದೆ. ರವಿ ಅವರದ್ದು ಸಂಗೀತ ಕುಟುಂಬವೂ ಅಲ್ಲ, ಸಂಗೀತ ಕಲಿತವರು ಅಲ್ಲ. ತಮ್ಮ ಅಣ್ಣ ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡ್ತಿದ್ದರು. ಓದಿನಲ್ಲಿ ಅಷ್ಟಾಗಿ ಸಕ್ರಿಯರಾಗದೇ ಇದ್ದ ರವಿ ಬಸ್ರೂರ್ ಸಹ ಆರ್ಕೆಸ್ಟ್ರಾ ಕಡೆ ಮುಖ ಮಾಡಿದರು. ಜೀವನದಲ್ಲಿ ಏನಾದರೂ ಮಾಡಬೇಕು ಎಂಬ ಹಸಿವಿನಿಂದ ಬೆಂಗಳೂರಿಗೆ ಬಂದರು.

    ಸಾಕಷ್ಟು ಕನಸುಗಳ ಜೊತೆ ಸಿಲಿಕಾನ್ ಸಿಟಿಗೆ ಬಂದ ರವಿ ಬಸ್ರೂರ್ ಎಲ್ಲ ರೀತಿಯ ಕಷ್ಟ, ನೋವುಗಳನ್ನು ಕಂಡಿದ್ದಾರೆ. ವರ್ಷಗಳ ಕಾಲ ಆರ್ಕೆಸ್ಟ್ರಾ, ಹೋಟೆಲ್ ಕಾರ್ಯಕ್ರಮ, ಸ್ಟೇಜ್ ಕಾರ್ಯಕ್ರಮ ಹೀಗೆ ಅವಕಾಶ ಸಿಕ್ಕ ಕಡೆಯೆಲ್ಲಾ ದುಡ್ಡು ನಿರೀಕ್ಷೆ ಮಾಡದೇ ಕೆಲಸ ಮಾಡಿದರು. ಹೀಗೆ, ಒಂದೊಳ್ಳೆ ಅವಕಾಶಕ್ಕಾಗಿ ನಿರಂತರ ಕಷ್ಟಪಟ್ಟು ಕೆಲಸ ಮಾಡಿದ ರವಿ ಬಸ್ರೂರ್ ಇಂದು ಇಡೀ ದೇಶ ಗುರುತಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಮುಂದೆ ಓದಿ...

    ಕೆಜಿಎಫ್ ಟೀಸರ್ ಸೂಪರ್: ಆದ್ರೂ ಆ ವಿಚಾರಕ್ಕೆ ಬೇಸರಗೊಂಡ ಅಭಿಮಾನಿಗಳು!ಕೆಜಿಎಫ್ ಟೀಸರ್ ಸೂಪರ್: ಆದ್ರೂ ಆ ವಿಚಾರಕ್ಕೆ ಬೇಸರಗೊಂಡ ಅಭಿಮಾನಿಗಳು!

    ಜೀವನ ಕೊಟ್ಟ 'ಉಗ್ರಂ'

    ಜೀವನ ಕೊಟ್ಟ 'ಉಗ್ರಂ'

    2014ರಲ್ಲಿ ತೆರೆಕಂಡ 'ಉಗ್ರಂ' ಸಿನಿಮಾ ಶ್ರೀಮುರಳಿಗೆ ಮಾತ್ರವಲ್ಲ, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ರವಿ ಬಸ್ರೂರ್ ಅವರಿಗೂ ಲೈಫ್ ಕೊಟ್ಟಿದೆ. ಉಗ್ರಂ ಸಿನಿಮಾ ಅಷ್ಟು ದೊಡ್ಡ ಹಿಟ್ ಆಗಲು ಕಾರಣ ಮೇಕಿಂಗ್ ಮತ್ತು ಹಿನ್ನೆಲೆ ಸಂಗೀತ. ಬಸ್ರೂರ್‌ಗೆ ಸಿಕ್ಕ ಚೊಚ್ಚಲ ಅವಕಾಶದಲ್ಲೇ ಸ್ಯಾಂಡಲ್‌ವುಡ್ ಗಮನ ಸೆಳೆದರು. ಅಲ್ಲಿಂದ ತಮ್ಮ ಹೆಸರ ಹಿಂದೆ ಉಗ್ರಂ ಎಂಬ ಪಟ್ಟ ಕಟ್ಟಿಕೊಂಡರು.

    'ಕರ್ವ' ಹಿನ್ನೆಲೆ ಸಂಗೀತ

    'ಕರ್ವ' ಹಿನ್ನೆಲೆ ಸಂಗೀತ

    ಉಗ್ರಂ ಆದ್ಮೇಲೆ ಕೆಲವು ಚಿತ್ರಗಳಿಗೆ ಸಂಗೀತ, ಹಿನ್ನೆಲೆ ಸಂಗೀತ ನೀಡಿದರೂ ಅಷ್ಟಾಗಿ ಸಕ್ಸಸ್ ಕಂಡಿಲ್ಲ. 2016ರಲ್ಲಿ ಬಂದ ಕರ್ವ ಚಿತ್ರಕ್ಕೆ ಹಿನ್ನೆಲೆ ಸಂಗೀತ ಮಾತ್ರ ನೀಡಿದರು. ಹಾರರ್ ಥ್ರಿಲ್ಲರ್ ಸಿನಿಮಾ ಆಗಿದ್ದ ಕರ್ವ ಗೆದ್ದಿತ್ತು. ಈ ಗೆಲುವಿನಲ್ಲಿ ರವಿ ಬಸ್ರೂರ್ ಹಿನ್ನೆಲೆ ಸಂಗೀತದ ಪಾತ್ರ ಮಹತ್ವದಾಗಿತ್ತು. ಚಿತ್ರಕ್ಕೆ ಅವಿನಾಶ್ ಸಂಗೀತ ನೀಡಿದ್ದರು.

    ಕೆಜಿಎಫ್ 2 ಟೀಸರ್ ಸಕ್ಸಸ್ ಹಿಂದಿದೆ ಮಾಸ್ಟರ್ ಪ್ಲಾನ್, ಆ ಕಾರಣದಿಂದಲೇ ಈ ದಾಖಲೆ ಆಗಿದ್ದು!ಕೆಜಿಎಫ್ 2 ಟೀಸರ್ ಸಕ್ಸಸ್ ಹಿಂದಿದೆ ಮಾಸ್ಟರ್ ಪ್ಲಾನ್, ಆ ಕಾರಣದಿಂದಲೇ ಈ ದಾಖಲೆ ಆಗಿದ್ದು!

    ದಿಕ್ಕು ಬದಲಿಸಿದ 'ಮಫ್ತಿ'

    ದಿಕ್ಕು ಬದಲಿಸಿದ 'ಮಫ್ತಿ'

    ರವಿ ಬಸ್ರೂರ್ ಎಂಬ ಸಂಗೀತ ನಿರ್ದೇಶಕ ಇದ್ದಾನೆ ಎಂದು ಮತ್ತೊಮ್ಮೆ ಇಂಡಸ್ಟ್ರಿ ಹುಡುಕಿ ನೋಡುವಂತಾಗಿದ್ದು ಮಫ್ತಿ ಚಿತ್ರದಲ್ಲಿ. ನರ್ತನ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಶ್ರೀಮುರಳಿ, ಶಿವರಾಜ್ ಕುಮಾರ್ ನಟಿಸಿದ್ದರು. ಸಿನಿಮಾದಲ್ಲಿ ಎರಡೇ ಹಾಡಿದ್ದರೂ ಎರಡೂ ಸೂಪರ್ ಹಿಟ್ ಆಗಿತ್ತು. ಹಿನ್ನೆಲೆ ಸಂಗೀತ ಅಷ್ಟೇ ದೊಡ್ಡ ಸದ್ದು ಮಾಡಿತ್ತು.

    ಕಮರ್ಷಿಯಲ್ ಹಿಟ್ ಕೊಟ್ಟ ಅಂಜನಿಪುತ್ರ

    ಕಮರ್ಷಿಯಲ್ ಹಿಟ್ ಕೊಟ್ಟ ಅಂಜನಿಪುತ್ರ

    ಉಗ್ರಂ, ಕರ್ವ, ಮಫ್ತಿ ಅಂತಹ ರಾ ಸ್ಟೈಲ್ ಚಿತ್ರಗಳಿ ಸಂಗೀತ ನೀಡಿ ಸಕ್ಸಸ್ ಕಂಡಿದ್ದ ರವಿ ಬಸ್ರೂರ್ ಕಮರ್ಷಿಯಲ್ ಆಗಿಯೂ ಹಾಡುಗಳನ್ನು ಕೊಡ್ತೇನೆ ಎಂದು ತೋರಿಸಿದ ಚಿತ್ರ ಅಂಜನಿಪುತ್ರ. ಪುನೀತ್ ರಾಜ್ ಕುಮಾರ್ ನಟಿಸಿದ್ದ ಈ ಚಿತ್ರ ಔಟ್ ಅಂಡ್ ಔಟ್ ಕಮರ್ಷಿಯಲ್ ಮತ್ತು ರೆಗ್ಯೂಲರ್ ಸಿನಿಮಾ ಆಗಿತ್ತು. ಅಪ್ಪು ಅಭಿಮಾನಿಗಳಿಗೆ ಇಷ್ಟ ಆಗುವಂತಹ ಹಾಡುಗಳು ಬೇಕಿತ್ತು. ಈ ಸವಾಲಿನಲ್ಲೂ ರವಿ ಬಸ್ರೂರ್ ಗೆಲುವು ಕಂಡರು.

    ಕೆಜಿಎಫ್ ಸರಣಿ

    ಕೆಜಿಎಫ್ ಸರಣಿ

    ಉಗ್ರಂ ಆದ್ಮೇಲೆ ಕೆಜಿಎಫ್ ಆರಂಭಿಸಿದ ಪ್ರಶಾಂತ್ ನೀಲ್ ಮತ್ತೆ ರವಿ ಬಸ್ರೂರ್ ಅವರನ್ನೇ ಆಯ್ಕೆ ಮಾಡಿಕೊಂಡರು. ಇತಿಹಾಸ ಸೃಷ್ಟಿಸಿದರು. ದೇಶ ತಿರುಗಿ ನೋಡುವಂತೆ ಸಿನಿಮಾ ಮಾಡಿದರು. ಇದರಲ್ಲಿ ಬಸ್ರೂರ್ ಅವರ ಹಿನ್ನೆಲೆ ಸಂಗೀತ ಹಾಗೂ ಹಾಡುಗಳ ಪಾತ್ರವೂ ದೊಡ್ಡದಿದೆ. ಈಗ ಚಾಪ್ಟರ್ 2 ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ.

    ದೊಡ್ಡ ದೊಡ್ಡ ಚಿತ್ರಗಳು ಕೈಯಲ್ಲಿವೆ

    ದೊಡ್ಡ ದೊಡ್ಡ ಚಿತ್ರಗಳು ಕೈಯಲ್ಲಿವೆ

    ಕರ್ನಾಟಕದ ಆಚೆಯೂ ಸದ್ದು ಮಾಡುತ್ತಿರುವ ರವಿ ಬಸ್ರೂರ್ ಈಗ ಪ್ರಶಾಂತ್-ಪ್ರಭಾಸ್ ಮುಂದಿನ ಸಿನಿಮಾ ಸಲಾರ್‌ಗೆ ಸಂಗೀತ ನಿರ್ದೇಶನ ಮಾಡ್ತಿದ್ದಾರೆ. ಉಪೇಂದ್ರ ನಟನೆಯ ಕಬ್ಜ, ಮಲಯಾಳಂ ಚಿತ್ರ, ತೆಲುಗಿನ ಮಾರ್ಷಲ್ ಚಿತ್ರ ಸೇರಿದಂತೆ ಹಲವು ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡ್ತಿದ್ದಾರೆ.

    English summary
    Kannada famous Music director Ravi basrur;s top movies list. and all about Ravi basrur film journey.
    Saturday, January 9, 2021, 13:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X