KGF ಕಲಿಯನ್ನು ಅಖಾಡಕ್ಕಿಳಿಸಿದ 'ಮಾರ್ಟಿನ್' ಟೀಂ: ಧ್ರುವ ಆರ್ಭಟಕ್ಕೆ ಸ್ಪೀಕರ್ ಕಿತ್ತೋಗುತ್ತೆ!

ಎ. ಪಿ ಅರ್ಜುನ್- ಧ್ರುವ ಸರ್ಜಾ ಕಾಂಬಿನೇಷನ್‌ನಲ್ಲಿ ಬರ್ತಿರೋ ಮೋಸ್ಟ್ ಎಕ್ಸ್‌ಪೆಕ್ಟೆಡ್ ಆಕ್ಷನ್ ಎಂಟರ್‌ಟೈನರ್ 'ಮಾರ್ಟಿನ್'. ಪ್ಯಾನ್ ಇಂಡಿಯಾಲ್ ಲೆವೆಲ್‌ನಲ್ಲಿ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಆಗ್ತಿದೆ. ಸದ್ಯ ಚಿತ್ರದ ಟೀಸರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ.

ಉದಯ್ ಕೆ. ಮೆಹ್ತಾ ಅಂದಾಜು 60 ಕೋಟಿ ವೆಚ್ಚದಲ್ಲಿ 'ಮಾರ್ಟಿನ್' ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ ಹೇಳಲಾಗ್ತಿದೆ. ಚಿತ್ರದಲ್ಲಿ ನಾಯಕಿಯಾಗಿ ವೈಭವಿ ಶಾಂಡಿಲ್ಯ ಮಿಂಚಿದ್ದಾರೆ. ಬೆಂಗಳೂರು, ಹೈದರಾಬಾದ್, ಮಂಗಳೂರು, ಕಾಶ್ಮೀರ ಸೇರಿದಂತೆ ಹಲವೆಡೆ ಸಿನಿಮಾ ಚಿತ್ರೀಕರಣ ನಡೆದಿದೆ. ಆಕ್ಷನ್ ಪ್ರಿನ್ಸ್ ಖದರ್‌ ತಕ್ಕಂತೆ ಸಿನಿಮಾ ಮೂಡಿ ಬರ್ತಿದೆ. ಎ. ಪಿ ಅರ್ಜುನ್ ಸಿಕ್ಕಾಪಟ್ಟೆ ಮುತುವರ್ಜಿ ವಹಿಸಿ ಈ ಪ್ಯಾನ್ ಇಂಡಿಯಾ ಸಿನಿಮಾ ಕಟ್ಟಿಕೊಡುತ್ತಿದ್ಧಾರೆ. ಇದೀಗ ಈ ತಂಡಕ್ಕೆ KGF ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು ಸೇರಿಕೊಳ್ತಿದ್ದಾರೆ.

ಹೌದು 'ಮಾರ್ಟಿನ್' ಚಿತ್ರಕ್ಕೆ ರವಿಬಸ್ರೂರು ಹಿನ್ನೆಲೆ ಸಂಗೀತ ನೀಡಲಿದ್ದಾರೆ. ಈ ಚಿತ್ರದ ಹಾಡುಗಳಿಗೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಮಣಿಶರ್ಮಾ ಟ್ಯೂನ್ ಹಾಕುತ್ತಿದ್ದಾರೆ. ಆದರೆ ಹಿನ್ನೆಲೆ ಸಂಗೀತಕ್ಕಾಗಿ ರವಿ ಬಸ್ರೂರು ಜೊತೆಯಾಗುತ್ತಿದ್ದಾರೆ. ಒಂದು ಚಿತ್ರಕ್ಕೆ ಹಿನ್ನೆಲೆ ಸಂಗೀತ ಬಹಳ ಮುಖ್ಯ. ಅದರಲ್ಲೂ ಆಕ್ಷನ್ ಎಂಟರ್‌ಟೈನರ್ ಸಿನಿಮಾಗಳಿಗೆ ಬಿಜಿಎಂ ಪ್ಲಸ್ ಆಗುತ್ತದೆ. KGF ಸರಣಿ ಸಿನಿಮಾಗಳಲ್ಲಿ ರವಿಬಸ್ರೂರು ಹಿನ್ನೆಲೆ ಸಂಗೀತ ಮಾಡಿದ ಜಾದೂ ಗೊತ್ತೇಯಿದೆ. ಇದನ್ನು ನೋಡಿ ಬಾಲಿವುಡ್ ಮಂದಿ ಕೂಡ ರವಿ ಕೈಯಲ್ಲಿ ಬಿಜಿಎಂ ಮಾಡಿಸುತ್ತಿದ್ದಾರೆ.

KGF Ravi Basrur scores background music for Dhruva Sarjas Martin

ಪ್ರಶಾಂತ್ ನೀಲ್ ಸಿನಿಮಾಗಳಿಗೆಲ್ಲಾ ರವಿ ಬಸ್ರೂರು ಮ್ಯೂಸಿಕ್ ಮಾಡೋದು ಪಕ್ಕಾ ಆದಂತೆ ಕಾಣ್ತದೆ. ಸದ್ಯ 'ಸಲಾರ್', 'ಕಬ್ಜ', ಹಿಂದಿಯ 'ಭೋಲಾ', 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸೇರಿದಂತೆ ಹಲವು ಸಿನಿಮಾಗಳಿಗೆ ರವಿಬಸ್ರೂರು ಮ್ಯೂಸಿಕ್ ಮಾಡ್ತಿದ್ದಾರೆ. ಬ್ಯುಸಿ ಶೆಡ್ಯೂನ್ ನಡುವೆಯೂ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಫೆಬ್ರವರಿ 23ಕ್ಕೆ 'ಮಾರ್ಟಿನ್' ಟೀಸರ್ ರಿಲೀಸ್ ಮಾಡೋದಾಗಿ ತಂಡ ಘೋಷಿಸಿದೆ.

KGF Ravi Basrur scores background music for Dhruva Sarjas Martin

ಈಗಾಗಲೇ ಟೀಸರ್ ಕಟ್ ಮಾಡುವ ಕೆಲಸ ಶುರುವಾಗಿದೆ. ಅದಕ್ಕೆ ಬಿಜಿಎಂ ಬೇಕಾಗಿದ್ದು, ರವಿಬಸ್ರೂರು ಅವರನ್ನು ತಂಡ ಅಖಾಡಕ್ಕೆ ಇಳಿಸುತ್ತಿದೆ. ಧ್ರುವ ಆಕ್ಷನ್‌ಗೆ ಧಮಾಕಾಗೆ ರವಿ ಬಿಜಿಎಂ ಸಿಂಕ್ ಆದ್ರೆ, ಅಭಿಮಾನಿಗಳಿಗೆ ಹಬ್ಬವೇ ಸರಿ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ. ಧ್ರುವ ಪಾತ್ರಕ್ಕಾಗಿ ದೇಹ ದಂಡಿಸಿ ರಗಡ್ ಲುಕ್‌ನಲ್ಲಿ ಅಬ್ಬರಿಸಿದ್ದಾರೆ. ಈಗಾಗಲೇ ಪೋಸ್ಟರ್ಸ್ ಅಭಿಮಾನಿಗಳ ಮನಗೆದ್ದಿದೆ.

More from Filmibeat

English summary
KGF Ravi Basrur scores background music for Dhruva Sarja's Martin. A P Arjun Directed Martin Movie Teaser Releaing on February 23rd. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X