For Quick Alerts
  ALLOW NOTIFICATIONS  
  For Daily Alerts

  ಕುಡುಕರ ಪಾಲಿನ ಸುಪ್ರಭಾತವಾದ ಭಟ್ಟರ ಹಾಡು

  By Rajendra
  |
  <ul id="pagination-digg"><li class="next"><a href="/music/sudeep-appreciates-khali-quarter-song-by-yograj-bhat-074902.html">Next »</a></li></ul>

  Yograj Bhat
  ಈ ಹಾಡು ಈ ಪಾಟಿ ಹಿಟ್ ಆಗುತ್ತದೆ ಎಂದು ಸ್ವತಃ ಯೋಗರಾಜ್ ಭಟ್ ಸಹ ಊಹಿಸಿರಲಿಲ್ಲವೇನೋ? ಅವರು ಹಾಸ್ಯನಟ ಶರಣ್ ಮುಖ್ಯಭೂಮಿಕೆಯಲ್ಲಿರುವ 'ವಿ' ಸಿಂಬಲ್ ಚಿತ್ರಕ್ಕೆ ಹೆಣೆದ ಹಾಡೊಂದು ಈಗ ಕುಡುಕರ ಪಾಲಿನ ಸುಪ್ರಭಾತವಾಗಿದೆ.

  ಈ ಹಾಡಿನ ಬಗ್ಗೆ ಕನ್ನಡ ಚಿತ್ರರಂಗದ ಸ್ಟಾರ್ ನಟರೆಲ್ಲಾ ಮುಕ್ತಕಂಠದಿಂದ ಹಾಡಿ ಹೊಗಳಿದ್ದಾರೆ. ಮಧುರ ಕಂಠದ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಅವರ ಕಂಠಸಿರಿಯಲ್ಲಿ ಈ ಹಾಡು ಕಿಕ್ಕೇರಿಸುವಂತೆ ಮೂಡಿಬಂದಿದೆ. ಹಾಡಿನ ವಿಡಿಯೋಗೆ ಇಲ್ಲಿ ಕ್ಲಿಕ್ಕಿಸಿ.

  ಯುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಂಗೀತ, ಯೋಗರಾಜ್ ಭಟ್ ಅವರ ಸಾಹಿತ್ಯ ಕೇಳಲು ಎರಡು ಕಿವಿ ಸಾಲದು ಎಂಬಂತಿದೆ. ಮುರಳಿ ನೃತ್ಯ ನಿರ್ದೇಶನದಲ್ಲಿ ಈ ಹಾಡಿಗೆ ಶರಣ್ ಹಾಗೂ ಸಾಧುಕೋಕಿಲ ಹೆಜ್ಜೆ ಹಾಕಿದ್ದಾರೆ.

  ಮೈಸೂರು ಲ್ಯಾಂಪ್ಸ್ ನಲ್ಲಿ ಬಾರೊಂದರ ಸೆಟ್ ನಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಿತು. ಸಂಪೂರ್ಣ ಹಾಸ್ಯಮಯ ಚಿತ್ರವನ್ನು ನಂದಕಿಶೋರ್ ನಿರ್ದೇಶಿಸಿದ್ದಾರೆ.

  ಎಸ್.ಆರ್.ಎಸ್ ಮಿಡಿಯಾ ವಿಷನ್ ಎಂಬ ಲಾಂಛನದಲ್ಲಿ ಆನಂದ್ ಆಡಿಯೋ ಮೋಹನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶ್ರೀನಾಥ್ ಕಥೆ, ಚಿತ್ರಕಥೆ ಹೆಣೆದಿದ್ದಾರೆ. ಪ್ರಶಾಂತ್ ಸಂಭಾಷಣೆ ಬರೆದಿದ್ದಾರೆ. ಹಾಡಿನ ಸಾಹಿತ್ಯಕ್ಕಾಗಿ ಮುಂದೆ ಓದಿ...

  <ul id="pagination-digg"><li class="next"><a href="/music/sudeep-appreciates-khali-quarter-song-by-yograj-bhat-074902.html">Next »</a></li></ul>
  English summary
  A song from Kannad film Victory "Khaali quatru botlli hange life u..." becomes Suprabhata for drunkards. Here is the funky lyrics penned by Yogaraj Bhat, crooned by Vijay Prakash and composed by Arjun Janya. &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X