Don't Miss!
- Sports
IND vs NZ 3rd T20: ಅಹಮದಾಬಾದ್ ಪಿಚ್ ಬಗ್ಗೆ ಆಸಕ್ತಿಕರ ಮಾಹಿತಿ ನೀಡಿದ ಕ್ಯುರೇಟರ್: ಹೇಗಿರಲಿದೆ ಪಿಚ್?
- News
7th Pay Commission; ವೇತನ ಶ್ರೇಣಿ, ಹೊಸ ವೇತನ ರಚನೆ ಮಾನದಂಡಗಳು
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಐಟಂ ಸಾಂಗ್ ಇಲ್ಲದೇ ಬಾಲಿವುಡ್ ಸಿನಿಮಾಗಳು ಗೆಲ್ಲಲ್ವಾ? 'ಬಿಜ್ಲಿ' ಆಗಿ ಕಿಯಾರ ಅದ್ವಾನಿ ಬಿಂದಾಸ್ ಸ್ಟೆಪ್ಸ್!
ಕತೆಗೆ ಬೇಕೋ ಬೇಡ್ವೋ ಕಮರ್ಷಿಯಲ್ ಸಿನಿಮಾಗಳಲ್ಲಿ ಐಟಂ ಸಾಂಗ್ ಇರಲೇಬೇಕು ಎನ್ನುವ ಅಲಿಖಿತ ನಿಮಯವೊಂದು ಚಿತ್ರರಂಗದಲ್ಲಿದೆ. ಬಾಲಿವುಡ್ ಸ್ಟಾರ್ ನಟಿಯರೇ ಬಿಂದಾಸ್ ನಂಬರ್‌ಗೆ ಹೆಜ್ಜೆ ಹಾಕಿ ಹುಬ್ಬೇರಿಸಿದ್ದಾರೆ. ಇದೀಗ ನಟಿ ಕಿಯಾರ ಅದ್ವಾನಿ ಕೂಡ ಐಟಂ ಸಾಂಗ್‌ಗೆ ಕುಣಿದಿದ್ದಾರೆ.
ಒಂದು ಕಾಲದಲ್ಲಿ ಕ್ಯಾಬರೆ ಸಾಂಗ್ಸ್ ಇರುತ್ತಿತ್ತು. ಅಂತಹ ಸಾಂಗ್‌ಗಳಿಗೆ ಹೆಜ್ಜೆ ಹಾಕುವ ನಟಿಯರು ಇರುತ್ತಿದ್ದರು. ಆದರೆ ನಿಧಾನವಾಗಿ ಬಾಲಿವುಡ್ ಸ್ಟಾರ್ ನಟಿಯರೇ ಬಿಂದಾಸ್ ಆಗಿ ಕುಣಿಯೋಕೆ ಸೈ ಎಂದರು. 2 ದಿನ ಶೂಟಿಂಗ್‌ಗೆ ಲಕ್ಷ ಲಕ್ಷ ಸಂಭಾವನೆ ಬರುತ್ತೆ ಎನ್ನುವುದಾದರೆ ಯಾಕೆ ಬೇಡ ಎಂದು ಸಾಲು ಸಾಲಾಗಿ ನಟಿಯರು ಸ್ಪೆಷಲ್ ನಂಬರ್‌ಗೆ ಕುಣಿಯಲು ಸಿದ್ದರಾದರು. ಐಶ್ವರ್ಯ ರೈ ಆದಿಯಾಗಿ ಕರೀನಾ ಕಪೂರ್, ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ ರೀತಿಯ ನಟಿಯರೆಲ್ಲಾ ಐಟಂ ಸಾಂಗ್‌ಗೆ ಕುಣಿದಿದ್ದಾರೆ.
ರೇಪ್
ಸೀನ್
ಶೂಟಿಂಗ್
ವೇಳೆ
ದಲಿಪ್
ತಹಿಲ್
ಕೆನ್ನೆಗೆ
ಬಾರಿಸಿದ್ರಾ
ಜಯಪ್ರದ?
ದಶಕಗಳ
ನಂತರ
ಮೌನ
ಮುರಿದ
ನಟ!
ದಕ್ಷಿಣ ಭಾರತದಲ್ಲಿ ಅನುಷ್ಕಾ ಶರ್ಮಾ, ತಮನ್ನಾ ಭಾಟಿಯಾ, ಕಾಜಲ್ ಅಗರ್‌ವಾಲ್ ಕೂಡ ಡ್ಯಾನ್ಸಿಂಗ್ ನಂಬರ್‌ಗೆ ಡ್ಯಾನ್ಸ್ ಮಾಡಿ ರಂಗೇರಿಸಿದ್ದಾರೆ. ಸದ್ಯ 'ಗೋವಿಂದಾ ನಾಮ್ ಮೇರಾ' ಚಿತ್ರದಲ್ಲಿ ಕಿಯಾರ ಅದ್ವಾನಿ 2ನೇ ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಐಟಂ ಸಾಂಗ್‌ಗೂ ಕುಣಿದಿದ್ದಾರೆ. ಶಶಾಂಕ್ ಕೇತನ್ ನಿರ್ದೇಶನದ ಈ ಕಾಮಿಡಿ ಎಂಟರ್‌ಟೈನರ್ ಚಿತ್ರ ಡಿಸೆಂಬರ್ 16ಕ್ಕೆ ನೇರವಾಗಿ ಓಟಿಟಿಗೆ ಬರ್ತಿದೆ. ಧರ್ಮ ಪ್ರೊಡಕ್ಷನ್ಸ್ ಹಾಗೂ ವಯಕಾಂ ಸಂಸ್ಥೆ ನಿರ್ಮಾಣದ ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ಹೀರೊ ಆಗಿ ಮಿಂಚಿದ್ದಾರೆ.
ಅದ್ಯಾಕೋ ಕಿಯಾರಾ ಅದ್ವಾನಿ ನಸೀಬೇ ಚೆನ್ನಾಗಿಲ್ಲ. ಹಾಟ್ ಬೆಡಗಿಗೆ ಒಳ್ಳೆ ಅವಕಾಶಗಳು ಸಿಗಲೇಯಿಲ್ಲ. ಗ್ಲಾಮರಸ್ ರೋಲ್‌ಗಳಿಗೆ ಸೈ ಎಂದರೂ ಪ್ರಯೋಜನವಾಗಲಿಲ್ಲ. ಕರಿಯರ್ ಆರಂಭದಲ್ಲೇ 'ಲಸ್ಟ್ ಸ್ಟೋರೀಸ್' ರೀತಿಯ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸಿದ್ದು ವ್ಯರ್ಥವಾಯಿತು. ಹಾಟ್ ಹಾಟ್ ಫೋಟೊಶೂಟ್‌ನಲ್ಲಿ ಮಿಂಚಿದ್ದು ಆಯಿತು. ಬಾಲಿವುಡ್ ಸ್ಟಾರ್ ನಟರ ಸಿನಿಮಾಗಳಲ್ಲಿ ಮಾತ್ರ ಅವಕಾಶ ಸಿಗಲಿಲ್ಲ. ಇದೀಗ ಐಟಂ ಸಾಂಗ್‌ಗೂ ಕುಣಿಯುವ ಸಾಹಸ ಮಾಡಿದ್ದಾರೆ. 'ಬಿಜ್ಲಿ' ಎಂದು ಶುರುವಾಗುವ 'ಗೋವಿಂದಾ ನಾಮ್ ಮೇರಾ' ಚಿತ್ರದ ಸ್ಪೆಷಲ್ ನಂಬರ್ ಟೀಸರ್ ರಿಲೀಸ್ ಆಗಿದೆ.
ಶಿಲ್ಪಾ
ಶೆಟ್ಟಿ
ಪತಿ
ರಾಜ್
ಕುಂದ್ರ
ನೀಲಿ
ಚಿತ್ರ
ನಿರ್ಮಿಸಿದ್ದರು:
ಪೊಲೀಸ್
ಆರೋಪ
ಕಿಯಾರಾ ಅದ್ವಾನಿ ನೋಡಿ 'ಕೊಲ್ಲಾಪುರ್ ಬಿಜಿಲಿ' ಎಂದು ವಿಕ್ಕಿ ಕೌಶಲ್ ಹಾಡಿ ಕುಣಿದಿದ್ದಾರೆ. ಸಚಿನ್ ಜಿಗರ್ ಟ್ಯೂನ್‌ಗೆ ವಯು ಲಿರಿಕ್ಸ್ ಬರೆದಿದ್ದು ಮಿಕಾ ಸಿಂಗ್, ನೇಹಾ ಕಕ್ಕರ್ ಹಾಡಿದ್ದಾರೆ. ಚಿತ್ರದಲ್ಲಿ ಕಿಯಾರಾ ಕೊರಿಯೋಗ್ರಫರ್ ರೋಲ್ ಪ್ಲೇ ಮಾಡ್ತಿದ್ದಾರೆ. ಅದಕ್ಕೆ ತಕ್ಕಂತೆ ಸಿಕ್ಕಾಪಟ್ಟೆ ಹಾಟ್ ಲುಕ್‌ನಲ್ಲಿ ಆಕೆ ಮಿಂಚಿದ್ದಾರೆ. ಸದ್ಯ ಸಾಂಗ್ ಟೀಸರ್ ಮಾತ್ರ ರಿಲೀಸ್ ಆಗಿದ್ದು, ಶೀಘ್ರದಲ್ಲೇ ಕಂಪ್ಲೀಟ್ ಸಾಂಗ್ ಯೂಟ್ಯೂಬ್‌ಗೆ ಅಪ್‌ಲೋಡ್ ಆಗಲಿದೆ.