ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸುದೀಪ್ ಮಗಳು ; 'ಮಾರ್ಕ್‌'ನ 'ಮಸ್ತ್ ಮಲೈಕಾ'ಗೆ ಕಂಠ ಕುಣಿಸಿದ ಸಾನ್ವಿ

''ಬಿಗ್ ಬಾಸ್'' ಕಾರ್ಯಕ್ರಮದಲ್ಲಿ ಪ್ರತಿ ವರ್ಷ ತಪ್ಪದೇ ತಲ್ಲೀನವಾಗುವ ಸುದೀಪ್, ಸಿನಿಮಾದಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ ಎನ್ನುವ ಮಾತು ಕಳೆದ ಕೆಲ ವರ್ಷಗಳಿಂದ ಅಭಿಮಾನಿ ವಲಯದಲ್ಲಿಯೇ ಕೇಳಿ ಬರುತ್ತಿತ್ತು. ಇದಕ್ಕೆ ಪೂರಕವಾಗಿ ಕನ್ನಡದಲ್ಲಿ 2018ರಿಂದ ಸುದೀಪ್ ವರ್ಷಕ್ಕೆ ಒಂದು ಚಿತ್ರವನ್ನಷ್ಟೇ ಮಾಡುತ್ತಾ ಬಂದಿದ್ದರು. ಆದರೆ .. ''ಮ್ಯಾಕ್ಸ್'' ನಂತರ ಸುದೀಪ್ ಸ್ಪೀಡಾದಂತೆ ಕಾಣ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ....

''ಮಾರ್ಕ್'' ಚಿತ್ರವನ್ನು ಸುದೀಪ್ ಕೇವಲ ಆರೇ ತಿಂಗಳಿನಲ್ಲಿ ಮುಗಿಸಿದ್ದಾರೆ. ಮುಂದಿನ ವರಮಹಾಲಕ್ಷ್ಮೀ ಹಬ್ಬಕ್ಕೆ ಮತ್ತೊಂದು ಚಿತ್ರವನ್ನು ಬಿಡುಗಡೆ ಮಾಡುವ ಮಾತುಗಳನ್ನಾಡಿದ್ದಾರೆ. ಸುದೀಪ್ ಅವರ ಈ ನಡೆ ಸದ್ಯ ಇವರ ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದ್ದು ''ಮಾರ್ಕ್‌'' ಚಿತ್ರದ ಬಿಡುಗಡೆಯನ್ನು ಹಲವರು ಎದುರು ನೋಡ್ತಿದ್ದಾರೆ.

Kichcha Sudeep s DANCE FEVER Meets Sanvi Sudeep s Debut Voice Masth Malaika Party Track is HERE

ಚಿತ್ರದ ಟ್ರೇಲರ್ ಕೂಡ ನಿರೀಕ್ಷೆ ಮೂಡಿಸಿದ್ದು ಖುದ್ದು ಸುದೀಪ್ ಅವರಿಗೆ ಕೂಡ ಈ ಚಿತ್ರದ ಮೇಲೆ ಅಪಾರವಾದ ನಿರೀಕ್ಷೆಗಳಿವೆ. ಹೀಗಾಗಿಯೇ ಪ್ರಚಾರದ ಕಣಕ್ಕೆ ಧುಮುಕಿರುವ ಸುದೀಪ್ ಸದ್ಯ ಮಾಧ್ಯಮದವರಿಗೆ ಸಂದರ್ಶನಗಳನ್ನು ಕೊಡುತ್ತಿದ್ದಾರೆ. ಇದರ ನಡುವೆ ಇದೀಗ ''ಮಾರ್ಕ್‌'' ಚಿತ್ರದ ಮತ್ತೊಂದು ಹಾಡೊಂದು ಬಿಡುಗಡೆಯಾಗಿದ್ದು ಸುದೀಪ್ ಸೈನ್ಯವನ್ನು ಈ ಹಾಡು ಹುಚ್ಚೆದ್ದು ಕುಣಿಸುತ್ತಿದೆ.

ಕೆಚ್ಚೆದೆಯ ಕಿಚ್ಚ ಸುದೀಪ್ ಅವರ ಜೊತೆ ಇಲ್ಲಿ ನಿಶ್ವಿಕಾ ನಾಯ್ಡು ಹೆಜ್ಜೆ ಹಾಕಿದ್ದಾರೆ. ಈ ಮೂಲಕ ತಮ್ಮ 7 ವರ್ಷಗಳ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿ ಸುದೀಪ್ ಜೊತೆ ನಿಶ್ವಿಕಾ ನಾಯ್ಡು ತೆರೆ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆ ನಿಶ್ವಿಕಾ ನಾಯ್ಡು ಸದ್ಯ ಸಂಭ್ರಮದ ಅಲೆಯಲ್ಲಿದ್ದಾರೆ.

ಕೇವಲ ನಿಶ್ವಿಕಾ ನಾಯ್ಡು ಮಾತ್ರವಲ್ಲ ಸುದೀಪ್ ಅವರ ಸುಪುತ್ರಿ ಸಾನ್ವಿ ಕೂಡ ಕ್ಲೌಡ್ ನೈನ್‌ನಲ್ಲಿದ್ದಾರೆ. ಯಾಕೆಂದರೆ.. ತಮ್ಮ ತಂದೆಯ ''ಮಾರ್ಕ್‌'' ಚಿತ್ರದ ಮೂಲಕ ಸಾನ್ವಿ ಕೂಡ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ''ಮಸ್ತ್ ಮಲೈಕಾ''ಗಾಗಿ ಇದೇ ಮೊದಲ ಬಾರಿ ಕನ್ನಡದಲ್ಲಿ ತಮ್ಮ ಚಿನ್ನದ ಕಂಠ ಕುಣಿಸಿದ್ದಾರೆ. ಹೀಗಾಗಿ ಮಾರ್ಕ್ ಕೇವಲ ನಿಶ್ವಿಕಾಗೆ ಮಾತ್ರ ವಿಶೇಷ ಅಲ್ಲ. ಸಾನ್ವಿಗೆ ಕೂಡ ವಿಶೇಷ. ಸುದೀಪ್ ಅವರಿಗೆ ಕೂಡ ತುಂಬಾ ವಿಶೇಷ.

ಅಂದ್ಹಾಗೇ ಈ ಹಿಂದೆ ಸಾನ್ವಿ ಸಂಚಿತ್ ಸಂಜೀವ್ ಅಭಿನಯದಲ್ಲಿ ಬರಬೇಕಿದ್ದ ''ಜಿಮ್ಮಿ'' ಚಿತ್ರದ ಟೈಟಲ್ ಟೀಸರ್‌ಗೆ ಧ್ವನಿಯಾಗಿದ್ದರು. ಆ ನಂತರ ''ಹಿಟ್ 3'' ಥೀಮ್ ಹಾಡನ್ನು ಕೂಡ ಸಾನ್ವಿ ಹಾಡಿದ್ದರು. ಈಗ ತಮ್ಮ ತಂದೆಯ ಚಿತ್ರದ ಹಾಡನ್ನು ಹಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಸಾನ್ವಿ ಬಂದಿದ್ಧಾರೆ.

Kichcha Sudeep s DANCE FEVER Meets Sanvi Sudeep s Debut Voice Masth Malaika Party Track is HERE

ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಇರುವ ಈ ಹಾಡನ್ನು ಅನೂಪ್ ಭಂಡಾರಿ ಬರೆದಿದ್ದಾರೆ. ಸಾನ್ವಿ ಅವರ ನಕಾಶ್ ಅಜೀಜ್ ಹಾಡು ಹಾಡಿದ್ದಾರೆ. ಶೋಭಿ ಪೌಲ್‌ರಾಜ್ ಇಲ್ಲಿ ಸುದೀಪ್ ಮತ್ತು ನಿಶ್ವಿಕಾ ನಾಯ್ಡು ಹಾಗೂ ಸಂಗಡಿಗರನ್ನು ಕುಣಿಸಿದ್ದಾರೆ.

ಸದ್ಯ ಈ ಹಾಡು ಎಲ್ಲರ ಗಮನ ಸೆಳೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ನಾಲ್ಕು ಗಂಟೆಯಲ್ಲಿ (ಡಿಸೆಂಬರ್ 15- ರಾತ್ರಿ 7-51ರವರೆಗೆ) 549,510 ವೀವ್ಸ್ ಪಡೆದಿದೆ. 6000ಕ್ಕೂ ಅಧಿಕ ಜನ ಹಾಡು ಮೆಚ್ಚಿಕೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಇನ್ನುಳಿದಂತೆ ಈ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ''ಮಾರ್ಕ್‌'' ಚಿತ್ರ ಬಿಡುಗಡೆಯಾಗಲಿದೆ. ಅವತ್ತೇ ಉಪೇಂದ್ರ, ಶಿವರಾಜ್ ಕುಮಾರ್, ರಾಜ್ ಬಿ ಶೆಟ್ಟಿ ಅಭಿನಯದ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಚಿತ್ರ ''45'' ಕೂಡ ಬಿಡುಗಡೆಯಾಗಲಿದ್ದು ಈ ಬಾಕ್ಸಾಫೀಸ್‌ ಸಮರ ಸದ್ಯ ಕುತೂಹಲ ಕೆರಳಿಸಿದೆ.

More from Filmibeat

English summary
Sanvi Sudeep makes a sensational singing debut with the vibrant party track 'Masth Malaika'! Hear Kiccha Sudeep’s daughter lend her voice to this must-watch dance number.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X