'ಮ್ಯಾಕ್ಸ್' ಸಾಂಗ್ ಲಿರಿಕ್ಸ್ ಲೀಕ್ ಮಾಡಿದ ಅನೂಪ್ ಭಂಡಾರಿ; ಮಾಸ್ ಲೈನ್ಸ್ ಕೇಳಿ ಸುದೀಪಿಯನ್ಸ್ ಖುಷ್
ಅಭಿನಯ ಚಕ್ರವರ್ತಿ ನಟ ಸುದೀಪ್ ಹುಟ್ಟುಹಬ್ಬದ ಸಂಭ್ರಮ ಶುರುವಾಗಿದೆ. ಈಗಾಗಲೇ ಅಭಿಮಾನಿಗಳು ಕಾಮನ್ ಡಿಪಿ ರಿಲೀಸ್ ಮಾಡಿದ್ದಾರೆ. ಈ ಬಾರಿ ನಮ್ಮ ಮನೆ ಬಳಿ ಬರ್ತ್‌ಡೇ ಸೆಲೆಬ್ರೆಷನ್ ಬೇಡ. ಎಂಜಿಎಸ್ ಗ್ರೌಂಡ್‌ನಲ್ಲಿ ಸಿಗ್ತೀನಿ ಎಂದು ಈಗಾಗಲೇ ಸುದೀಪ್ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್‌ಗಳು ಕಾಯತ್ತಿದೆ. ನನಗೆ ವಿಶ್ ಮಾಡಲು ಬರುವವರು ಯಾವುದೇ ಕೇಕ್, ಗಿಫ್ಟ್ ತರಬೇಡಿ. ಅದೇ ಹಣವನ್ನು ಒಳ್ಳೆ ಕೆಲಸಕ್ಕೆ ಬಳಸಿ ಎಂದಿದ್ದಾರೆ. ಆದರೆ ಅಭಿಮಾನಿಗಳಿಗೆ ಮಾತ್ರ 'ಮ್ಯಾಕ್ಸ್' ಹಾಗೂ 'ಬಿಲ್ಲ ರಂಗ ಬಾಷ' ಚಿತ್ರತಂಡಗಳಿಗೆ ಭರ್ಜರಿ ಗಿಫ್ಟ್ ಕಾಯ್ತಿದೆ. 'ಮ್ಯಾಕ್ಸ್' ಚಿತ್ರದ ಮಾಸ್ ಸಾಂಗ್ ರಿಲೀಸ್ ಆಗಲಿದೆ.

ಬೆಳ್ಳಂ ಬೆಳಗ್ಗೆ 'ಮ್ಯಾಕ್ಸ್' ಚಿತ್ರದ 'ಮ್ಯಾಕ್ಸಿಮಮ್ ಮಾಸ್' ಸಾಂಗ್ ರಿಲೀಸ್ ಮಾಡೋದಾಗಿ ಈಗಾಗಲೇ ಚಿತ್ರತಂಡ ಘೋಷಿಸಿದೆ. ಅಜನೀಶ್ ಲೋಕನಾಥ್ ಸಂಗೀತದ ಹಾಡಿಗೆ ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ಬರೆದಿದ್ದಾರೆ. ಸುದೀಪ್- ಅನೂಪ್ ಕಾಂಬಿನೇಷನ್ ಸಾಂಗ್ಸ್ ಎಲ್ಲಾ ಹಿಟ್ ಆಗಿದೆ. ಹಾಗಾಗಿ 'ಮ್ಯಾಕ್ಸ್' ಚಿತ್ರದ ಸಾಂಗ್ ಕೂಡ ಕುತೂಹಲ ಮೂಡಿಸಿದೆ.
ಸಾಮಾನ್ಯವಾಗಿ ಸಾಂಗ್ ರಿಲೀಸ್ ಆಗುವವರೆಗೂ ಸಾಹಿತ್ಯ ರಿವೀಲ್ ಆಗದಂತೆ ನೋಡಿಕೊಳ್ಳುತ್ತಾರೆ. ಸರ್‌ಪ್ರೈಸ್ ಉಳಿಸಿಕೊಳ್ಳುತ್ತಾರೆ. ಮ್ಯೂಸಿಕ್ ಜೊತೆ ಗಾಯಕರ ವಾಯ್ಸ್‌ನಲ್ಲಿ ಸಾಂಗ್ ಕೇಳಿದ್ರೇನೆ ಮಜಾ. ಆದರೆ ಇದೇ ಮೊದಲ ಬಾರಿಗೆ 'ಮ್ಯಾಕ್ಸ್' ಟೀಂ ಹೊಸ ಪ್ಲ್ಯಾನ್ ಮಾಡಿದೆ. ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಇಡೀ ಹಾಡಿನ ಸಾಹಿತ್ಯವನ್ನು ಒಂದು ದಿನ ಮೊದಲೇ ಲೀಕ್ ಮಾಡಿದ್ದಾರೆ.
ಇದೀಗ ಸಾಹಿತ್ಯ ಗೊತ್ತಿದ್ದು ಸಿನಿರಸಿಕರು ಸಾಂಗ್ ಕೇಳಲು, ನೋಡಲು ಸಿದ್ಧರಾಗುವಂತಾಗಿದೆ. ಅನೂಪ್ ಭಂಡಾರಿ ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದಾರೆ. 'ಮ್ಯಾಕ್ಸಿಮಮ್ ಮ್ಯಾಕ್ಸ್' ಸಾಂಗ್ ಲಿರಿಕ್ಸ್ ಲೀಕ್. ನಾಳೆ ಹಾಡ್ ರಿಲೀಸ್ ಆದಾಗ ಜೊತೆಗ್ ಹಾಡಿ ಎಂದು ಬರೆದುಕೊಂಡಿದ್ದಾರೆ. ನಿಮ್ಮಿಷ್ಟದ ಸಾಲು ಯಾವುದು ಎಂದು ಕಾಮೆಂಟ್ ಮಾಡಿ ಎಂದಿದ್ದಾರೆ.
ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ
ಬುದ್ಧಿ ನೆಟ್ಟಿದ್ರೆ ಹಂಗೆ ಸೈಡ್ ಜಾರೋ
ಉರಿಯೋ ಜ್ವಾಲಾಮುಖಿ ಮುಂದೆ ನಿರ್ ಯಾರೋ ವಾರ್ನಿಂಗ್ ವಾರಂಟ್ ಇಲ್ಲ ಹಂಗೆ ಡೈರೆಕ್ಟ್ ವಾರೋ
ಪಂಜ ಎತ್ತಿ ಬಿಟ್ಟ ಅಂದ್ರೆ
ಒಂದೂವರೆ ಟನ್ ಬಾಸ್
ರಟ್ಟೇಲ್ ಬಾಳಾ ಬಲ
ಎದೆಲ್ ಇದೆ ದಮ್ ಬಾಸ್
ಸುಕ್ಕ ಸುಕ್ಕ ಸುಕ್ಕ ಸುಕ್ಕ
ಸಿಕ್ಕಾಪಟ್ಟೆ ಬ್ಯಾಡ್ ಆಸ್
ಮುಖ ಮೂತಿ ಸೀಳೋಗುತ್ತೆ
ಇಕ್ತಾನ್ ಬಂದು ಮಾಡ್ ಮಾಕ್ಸ್
ಮಾಕ್ಸ್ ಮಾಕ್ಸಿಮಮ್ ಮಾಸ್
ಮಾಸಲಿ ಮಾಸಿಗೆ ಬಾಸ್
ಭಯ ಭೀತಿ ಗೊತ್ತೆ ಇಲ್ಲ
ಯಾರೇ ಬಂದ್ರೂ ಬಿಂದಾಸ್
ಪುಂಡರ ಹಿಗ್ಗ ಮುಗ ರುಬೋದೇನೇ ಟೈಂ ಪಾಸ್
ಸುಕ ಸುಕ್ಕ ಸುಕ್ಕ ಸುಕ್ಕ
ಸಿಕ್ಕಾಪಟ್ಟೆ ಬ್ಯಾಡ್ ಆಸ್
ಮುಖ ಮೂತಿ ಸೀಳೋಗುತ್ತೆ
ಇಕ್ತಾನ್ ಬಂದು ಮಾಡ್ ಮ್ಯಾಕ್ಸ್
ಮಾಕ್ಸ್ ಮಾಕ್ಸಿಮಮ್ ಮಾಸ್
ಮಾಸಲಿ ಮಾಸಿಗೆ ಬಾಸ್
ಹೀಗೆ 'ಮ್ಯಾಕ್ಸ್' ಚಿತ್ರದ ಹಾಡಿಗೆ ಅನೂಪ್ ಭಂಡಾರಿ ಸಾಹಿತ್ಯ ಬರೆದಿದ್ದಾರೆ. ಖಡಕ್ ನಟ ಸುದೀಪ್ ಮಾಸ್ ಫಾಲೋಯಿಂಗ್ ಕೇಳುವಂತಹ ಪದಗಳನ್ನು ಸೇರಿಸಿ ಸಾಹಿತ್ಯ ಬರೆದಿರೋದು ಗೊತ್ತಾಗುತ್ತಿದೆ. ಈಗಾಗಲೇ ಕೆಲವರು ಹಾಡೋಕೆ ಶುರು ಮಾಡಿದ್ದಾರೆ. ಇನ್ನು ಅಜನೀಶ್ ಮ್ಯೂಸಿಕ್, ಚೇತನ್ ಗಂಧರ್ವ ವಾಯ್ಸ್‌ನಲ್ಲಿ ಈ ಸಾಹಿತ್ಯ ಕೇಳಿದರೆ ಸೂಪರ್ ಆಗಿರುತ್ತದೆ ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ.
'ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ' ಎನ್ನುವ ಮೊದಲ ಸಾಲು ಅಭಿಮಾನಿಗಳ ಹಾಟ್ ಫೇವರಿಟ್ ಆಗಿಬಿಟ್ಟಿದೆ. ಒರಿಜಿನಲ್ ಸಾಂಗ್‌ನಲ್ಲಿ ಕೂಡ ಇದೇ ಸಾಹಿತ್ಯ ಇರುತ್ತಾ ಅಥವಾ ಬದಲಾಗುತ್ತಾ ಕಾದು ನೋಡಬೇಕಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮ್ಯಾಕ್ಸ್' ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗುವ ಸಾಧ್ಯತೆಯಿದೆ.


Click it and Unblock the Notifications











