'ಕಿಂಗ್ ಆಫ್ ಬ್ಲೂಸ್' ಬಿ.ಬಿ ಕಿಂಗ್ ಇನ್ನು ನೆನಪು

By ಜೇಮ್ಸ್ ಮಾರ್ಟಿನ್

ಕಿಂಗ್ ಆಫ್ ಬ್ಲೂಸ್ ಎಂದೇ ಜನಪ್ರಿಯಗೊಂಡಿದ್ದ ಖ್ಯಾತ ಗಿಟಾರಿಸ್ಟ್, ಸಂಗೀತಗಾರ ಬಿಬಿ ಕಿಂಗ್ ಅವರು ಲಾಸ್ ವೇಗಸ್ ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಅಸೋಸಿಯೇಟ್ ಪ್ರೆಸ್ ವರದಿ ಮಾಡಿದೆ.

ಲೂಸಿಲೆ, ಸ್ವೀಟ್ ಬ್ಲ್ಯಾಕ್ ಏಂಜಲ್, ದಿ ಥ್ರಿಲ್ ಇಸ್ ಗಾನ್ ಸೇರಿದಂತೆ ಹಲವು ಸಂಯೋಜನೆಗಳ ಗುಚ್ಛವನ್ನು ಸಂಗೀತಪ್ರಿಯರಿಗೆ ನೀಡಿದ್ದ ಕಿಂಗ್ ಗೆ 89 ವರ್ಷ ವಯಸ್ಸಾಗಿತ್ತು.

1940ರಿಂದ ಸಂಗೀತಧಾರೆ ಹರಿಸಲು ಆರಂಭಿಸಿದ ಕಿಂಗ್ ಅವರು ಬ್ಲೂಸ್ genre ಹಾಲ್ ಆಫ್ ಫೇಮ್ ಹಾಗೂ ರಾಕ್ ಅಂಡ್ ರೋಲ್ ಹಾಲ್ ಫೇಮ್ ಸೇರಿದ ವಿಶಿಷ್ಟ ಸಂಗೀತಗಾರ.

'King of the blues 'guitar legend BB King dies in Las Vegas

30 ಬಾರಿ ನಾಮಾಂಕಣಗೊಂಡು 15 ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತರಾಗಿದ್ದ ಕಿಂಗ್ ಅವರು 100ಕ್ಕೂ ಅಧಿಕ ಶೋಗಳನ್ನು ನೀಡಿದ್ದರು. ಗಿಬ್ಸನ್ ಗಿಟಾರ್ ಗೆ ಮುದ್ದಾಗಿ Lucille ಎಂದು ಹೆಸರಿಟ್ಟಿದ್ದರು. ಅಮೆರಿಕದ ಮಿಸಿಸಿಪ್ಪಿ ಪ್ರಸ್ಥಭೂಮಿಯಲ್ಲಿ ಜಾಜ್ ಮಾದರಿ ಸಂಗೀತ ಪ್ರಕಾರದ ಜೊತೆಜೊತೆಗೆ 'ಬ್ಲೂಸ್' ಕೂಡಾ ಬೆಳೆವಣಿಗೆ ಕಂಡಿತು.

ಆರು ದಶಕಗಳ ಕಾಲ ಸಂಗೀತ ಸುಧೆ ಹರಿಸಿದ ಕಿಂಗ್ ಅವರು ಎರಿಕ್ ಕ್ಲಾಪ್ಟನ್, ಸ್ಟೀವ್ ರೇ ವಾಗನ್, ಶೆರ್ಲಿ ಕ್ರೋ, ಜಾನ್ ಮೇಯರ್ ಸೇರಿದಂತೆ ಹಲವು ಸಂಗೀತ ದಿಗ್ಗಜರಿಗೆ ಸ್ಪೂರ್ತಿಯಾಗಿದ್ದರು.

ಮೊದಲ ಗ್ರ್ಯಾಮಿ ಪ್ರಶಸ್ತಿ ತಂದು ಕೊಟ್ಟ ಟ್ರೇಡ್ ಮಾರ್ಕ್ ಸಾಂಗ್ ಎನಿಸಿರುವ ದಿ ಥ್ರಿಕಲ್ ಇಸ್ ಗಾನ್ ನಿಮಗಾಗಿ ಇಲ್ಲಿದೆ. Rest In Peace BB King

More from Filmibeat

English summary
Well known guitarist Riley B. King popularly known as B.B. King died in his sleep in Las Vegas, media reported Friday. BB King who was is also known as the icon of blues has passed away.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X