»   » ತಂದೆ - ಮಗಳ ಭಾವನಾತ್ಮಕ ಅಂಶಗಳ 'ಕಿರಿಕ್ ಪಾರ್ಟಿ' ಕವರ್ ಸಾಂಗ್

ತಂದೆ - ಮಗಳ ಭಾವನಾತ್ಮಕ ಅಂಶಗಳ 'ಕಿರಿಕ್ ಪಾರ್ಟಿ' ಕವರ್ ಸಾಂಗ್

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ಸಿನಿಮಾದ 'ಕಾಗದ ದೋಣಿಯಲ್ಲಿ..' ಹಾಡಿನ ಕವರ್ ಸಾಂಗ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರತಿಭಾವಂತ ಯುವಕರ ಒಂದು ತಂಡ ಇದನ್ನು ಮಾಡಿದ್ದು, ಒಬ್ಬ ಪೊಲೀಸ್ ಆಫೀಸರ್ ಜೀವನವನ್ನು ಹಾಡಿನಲ್ಲಿ ತೋರಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ವೈಯಕ್ತಿಕ ಜೀವನದಲ್ಲಿ ಎಷ್ಟು ರಿಸ್ಕ್ ಇರುತ್ತದೆ ಎಂಬುದನ್ನು ಹಾಡಿನಲ್ಲಿ ಕಟ್ಟಿಕೊಟ್ಟಿದ್ದಾರೆ. ಹಾಡಿನಲ್ಲಿ ಬರುವ ತಂದೆ ಮಗಳ ಭಾವನಾತ್ಮಕ ಅಂಶಗಳು ಎಲ್ಲರಿಗೂ ಇಷ್ಟವಾಗುತ್ತೆ. ಈ ಹಾಡನ್ನು ಬೆಂಗಳೂರಿನ ಅನೇಕ ಕಡೆ ಚಿತ್ರೀಕರಿಸಿದ್ದಾರೆ.

'Kirik Party' Movie Cover Song

ಅಂದಹಾಗೆ, ಲೋಹಿತ್ ಎಂಬುವವರು ಹಾಡನ್ನು ನಿರ್ದೇಶನ ಮಾಡಿದ್ದು, ನಿತಿನ್ ಅಂಜನಪ್ಪ ಕ್ಯಾಮರಾ ಕೈ ಚಳಕ ತೋರಿಸಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಆಸೆ ಇಟ್ಟುಕೊಂಡಿರುವ ಈ ತಂಡ ಈ ಮೂಲಕ ತಮ್ಮ ಪ್ರತಿಭೆಯನ್ನು ನಿರೂಪಿಸುತ್ತಿದೆ. 'ಕಿರಿಕ್ ಪಾರ್ಟಿ' ಚಿತ್ರದ ಈ ಕವರ್ ಹಾಡನ್ನು ನೋಡುವುದಕ್ಕೆ ಈ ಲಿಂಕ್ ಕ್ಲಿಕ್ಕಿಸಿ.

English summary
Watch Kannada Movie 'Kirik Party' Cover Song

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada