'ಎಂಥಮ್ಮಾ' ಸಾಂಗ್ ರಿಲೀಸ್: ಸಲ್ಲು- ರಾಮ್‌ಚರಣ್ ಲುಂಗಿ ಡ್ಯಾನ್ಸ್.. ಟಪ್ಪಾಂಗುಚಿ ಸಾಂಗ್ ಫಸ್ಟ್ ಕ್ಲಾಸ್
ಸಲ್ಮಾನ್ ಖಾನ್ ನಟನೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಮತ್ತೊಂದು ಸಾಂಗ್ ರಿಲೀಸ್ ಆಗಿದೆ. ಪಕ್ಕಾ ಟಪ್ಪಾಂಗುಚ್ಚಿ ಸಾಂಗ್‌ಗೆ ಲುಂಗಿ ಉಟ್ಟು ಸಲ್ಮಾನ್ ಖಾನ್ ಕುಣಿಸಿದ್ದಾರೆ. ಸಲ್ಲು ಹೆಜ್ಜೆಗೆ ಟಾಲಿವುಡ್ ನಟರಾದ ವಿಕ್ಟರಿ ವೆಂಕಟೇಶ್ ಹಾಗೂ ರಾಮ್‌ಚರಣ್ ಸಾಥ್ ಕೊಟ್ಟಿದ್ದಾರೆ. ಸಿಕ್ಕಾಪಟ್ಟೆ ಕಲರ್‌ಫುಲ್ಲಾಗಿ ಸಾಂಗ್ ಶೂಟ್ ಮಾಡಿದ್ದಾರೆ. ಸಾಂಗ್ ಸಖತ್ ಸೌಂಡ್ ಮಾಡ್ತಿದೆ.
ತಮಿಳಿನ 'ವೀರಂ' ಚಿತ್ರವನ್ನು ನಿರ್ದೇಶಕ ಫರ್ಹಾದ್ ಸಮ್ಜಿ ಹಿಂದಿದೆ ರೀಮೆಕ್ ಮಾಡಿದ್ದಾರೆ. ಸಲ್ಲು 4 ಜನ ಸಹೋದರರ ಅಣ್ಣನಾಗಿ ಚಿತ್ರದಲ್ಲಿ ನಟಿಸಿದ್ದಾರೆ. ಏಪ್ರಿಲ್ 21ಕ್ಕೆ ಸಿನಿಮಾ ರಿಲೀಸ್ ಆಗ್ತಿದ್ದು ಒಂದೊಂದೇ ಸಾಂಗ್ ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡಲಾಗುತ್ತಿದೆ. ಎಲ್ಲಾ ಕಮರ್ಷಿಯಲ್ ಅಂಶಗಳು ಇರುವ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಇದು. ಸಲ್ಲು ತಮ್ಮ ವಿಭಿನ್ನ ಸ್ಟೈಲ್ ಹಾಗೂ ಮ್ಯಾನರಿಸಂನಿಂದ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಸುಳಿವು ಸಿಕ್ತಿದೆ.

ಸದ್ಯ ರಿಲೀಸ್ ಆಗಿರುವ 'ಎಂಥಮ್ಮ' ಸಾಂಗ್ ಸಿನಿರಸಿಕರ ಮನಗೆದ್ದಿದೆ. ಚಿರಂಜೀವಿ ನಟನೆಯ 'ಆಚಾರ್ಯ' ಚಿತ್ರಕ್ಕಾಗಿ ಹಾಕಿದ್ದ ದೇವಾಲಯದ ಸೆಟ್‌ನಲ್ಲೇ ಸಾಂಗ್ ಶೂಟ್ ಮಾಡಿರುವಂತೆ ಕಾಣ್ತದೆ. ನೂರಾರು ಜನ ಡ್ಯಾನ್ಸರ್ಸ್ ಬಳಿಸಿಕೊಂಡು ಬಹಳ ಅದ್ಧೂರಿಯಾಗಿ ಸಾಂಗ್ ಶೂಟಿಂಗ್ ಮಾಡಲಾಗಿದೆ. ಚಿತ್ರದ 7 ಹಾಡುಗಳಿಗೆ 7 ಜನ ಬೇರೆ ಬೇರೆ ಸಂಗೀತ ನಿರ್ದೇಶಕರು ಟ್ಯೂನ್ ಹಾಕಿದ್ದಾರೆ. ಈ ಹಾಡಿಗೆ ಪಾಯಲ್ ದೇವ್ ಟ್ಯೂನ್ ಹಾಕಿದ್ದು ಶಬೀರ್ ಅಹ್ಮದ್ ಸಾಹಿತ್ಯ ಬರೆದಿದ್ದಾರೆ. ವಿಶಾಲ್ ದದ್ಲಾನಿ, ಪಾಯಲ್ ದೇವ್ ಹಾಡು ಹಾಡಿದ್ಧಾರೆ. ಜಾನಿ ಮಾಸ್ಟರ್ ಸಾಂಗ್ ಕೊರಿಯೋಗ್ರಫಿ ಮಾಡಿದ್ದಾರೆ.
ಹಬ್ಬದ ಸಂಭ್ರಮದಲ್ಲಿ ಈ ಹಾಡು ಮೂಡಿಬಂದಿದೆ. ಅದಕ್ಕೆ ತಕ್ಕಂತೆ ದಕ್ಷಿಣಭಾರತದ ಆಚಾರ, ಸಂಸ್ಕೃತಿಯನ್ನು ಹೈಲೆಟ್ ಮಾಡಿ ಸಾಂಗ್ ಸೆರೆಹಿಡಿದಿದ್ದಾರೆ. ಸಲ್ಲು, ವೆಂಕಿ, ಚರಣ್ ಹಳದಿ ಬಣ್ಣದ ಶರ್ಟ್ ಹಾಗೂ ಬಿಳಿ ಲುಂಗಿಯಲ್ಲಿ ಬಿಂದಾಸ್ ಸ್ಟೆಪ್ಸ್ ಹಾಕಿ ಎಂಜಾಯ್ ಮಾಡಿದ್ದಾರೆ. ಚಿತ್ರದ ನಾಯಕಿ ಪೂಜಾ ಹೆಗ್ಡೆ ಕೂಡ ಹಾಡಿನಲ್ಲಿ ಲುಂಗಿ ಉಟ್ಟು ಕುಣಿದಿದ್ದಾರೆ. ರಾಮ್‌ಚರಣ್ ಎಂಟ್ರಿ ನಂತರ ಸಾಂಗ್ ಮತ್ತೊಂದು ಹಂತಕ್ಕೆ ಏರುತ್ತದೆ. ನೂರಾರು ಡ್ಯಾನ್ಸರ್ಸ್ ಇವರ ಜೊತೆ ಹೆಜ್ಜೆ ಸೇರಿಸಿದ್ದಾರೆ.
ತೆಲುಗು ನಟ ವಿಕ್ಟರಿ ವೆಂಕಟೇಶ್ ಚಿತ್ರದಲ್ಲಿ ಒಂದು ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ರಾಮ್‌ಚರಣ್ ಹಾಡಿನಲ್ಲಿ ಮಾತ್ರ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಸಲ್ಲು ಹಾಗೂ ಚಿರಂಜೀವಿ ಫ್ಯಾಮಿಲಿ ನಡುವೆ ಆತ್ಮೀಯ ಒಡನಾಟವಿದೆ. ಈ ಹಿಂದೆ ಚಿರಂಜೀವಿ ನಟನೆಯ 'ಗಾಡ್‌ಫಾದರ್' ಚಿತ್ರದಲ್ಲಿ ಸಲ್ಮಾನ್ ಖಾನ್ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದರು. ರಾಮ್‌ಚರಣ್ ಈ ಸಿನಿಮಾ ನಿರ್ಮಾಣ ಮಾಡಿದ್ದರು. ಅದಕ್ಕೆ ಪ್ರತಿಯಾಗಿ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಹಾಡಿನಲ್ಲಿ ರಾಮ್‌ಚರಣ್ ಕಾಣಿಸಿಕೊಂಡಿದ್ದಾರೆ.

9 ವರ್ಷಗಳ ಹಿಂದೆ ತಮಿಳಿನಲ್ಲಿ ಬಂದಿದ್ದ 'ವೀರಂ' ಸಿನಿಮಾ ಹಿಟ್ ಆಗಿತ್ತು. ಇದೇ ಚಿತ್ರವನ್ನು 'ಕಾಟಮರಾಯುಡು' ತೆಲುಗಿಗೆ ಪವನ್ ಕಲ್ಯಾಣ್ ರೀಮೆಕ್ ಮಾಡಿದ್ದರು. ಕನ್ನಡದಲ್ಲಿ ದರ್ಶನ್ 'ಒಡೆಯ'ನಾಗಿ ದರ್ಶನ್ ನಟಿಸಿದ್ದರು. 2 ಭಾಷೆಗಳಲ್ಲಿ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೂ ಕೂಡ ಸಲ್ಮಾನ್ ಖಾನ್ ಹಿಂದಿಗೆ ರೀಮೆಕ್ ಮಾಡಿದ್ದಾರೆ. ಜಗಪತಿ ಬಾಬು, ಜೆಸ್ಸಿ ಗಿಲ್, ರಾಘವ್ ಜುಯೆಲ್, ಸಿದ್ದಾರ್ಥ್ ನಿಗಂ, ಭೂಮಿಕಾ ಚಾವ್ಲಾ, ಭಾಗ್ಯಶ್ರೀ, ಶೆಜನಾಜ್ ಗಿಲ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸಲ್ಲು ತಮ್ಮದೇ ಬ್ಯಾನರ್‌ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರವಿಬಸ್ರೂರು ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.


Click it and Unblock the Notifications











