ವಿಡಿಯೋ : ಚಂದನ್ ಶೆಟ್ಟಿ ಧ್ವನಿಯ 'ಕಿಸ್' ಹಾಡು ಕೇಳಿ
ನಿನ್ನೆಯಿಂದ ಎಲ್ಲರೂ ನ್ಯೂ ಇಯರ್ ಮೂಡ್ ನಲ್ಲಿದ್ದಾರೆ. ಈ ಜೋಶ್ ಹೆಚ್ಚು ಮಾಡಲು 'ಕಿಸ್' ಸಿನಿಮಾದ ಮೊದಲ ಹಾಡು ಇದೀಗ ಬಿಡುಗಡೆಯಾಗಿದೆ.
ಇಂದು ಹೊಸ ವರ್ಷದ ವಿಶೇಷವಾಗಿ 'ಕಿಸ್' ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ಹಾಡನ್ನು ರಿಲೀಸ್ ಮಾಡಿದ್ದಾರೆ. ಈ ವೇಳೆ ಚಿತ್ರತಂಡದ ಜೊತೆಗೆ ನಿರ್ದೇಶಕರಾದ ಬಹದ್ದೂರ್ ಚೇತನ್ ಹಾಗೂ ಮಹೇಶ್ ಗೌಡ ಕೂಡ ಭಾಗಿಯಾಗಿದ್ದರು.

ಅಂದಹಾಗೆ, ಸಿನಿಮಾದ ಈ ಹಾಡು ಕೇಳಲು ಸಖತ್ ಮಜಾವಾಗಿದೆ. 'ಶೀಲ ಸುಶೀಲ...' ಎಂಬ ಹಾಡಿನ ಬೀಟ್ಸ್ ಕೇಳುಗರನ್ನ ಕುಣಿಯುವಂತೆ ಮಾಡುತ್ತಿದೆ. ಹರಿಕೃಷ್ಣ ಸಂಗೀತ ಹಾಗೂ ಎ ಪಿ ಅರ್ಜುನ್ ಸಾಹಿತ್ಯ ಹಾಡಿನಲ್ಲಿದೆ.
ಚಂದನ್ ಶೆಟ್ಟಿ ಧ್ವನಿ ನೀಡಿದ್ದು, ಹಾಡಿನ ಕಿಕ್ ಹೆಚ್ಚಾಗಿದೆ. ಹಾಡಿನಲ್ಲಿ ವಿರಾಟ್ ಹಾಗೂ ಅಪೂರ್ವ ಗೌಡ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಶ್ರೀ ಲೀಲಾ ಚಿತ್ರದ ನಾಯಕಿಯಾಗಿದ್ದಾರೆ.
English summary
'Kiss' kannada movie first song released. The movie is directing by A P Arjun.


Click it and Unblock the Notifications