For Quick Alerts
  ALLOW NOTIFICATIONS  
  For Daily Alerts

  ಮಾರುಕಟ್ಟೆಗೆ ಕೋಮಲ್ 'ಪುಂಗಿದಾಸ' ಆಡಿಯೋ

  By Rajendra
  |

  ಹಾಸ್ಯ ನಟ ಕೋಮಲ್ ಕುಮಾರ್ ಅಭಿನಯದ ಪುಂಗಿದಾಸ ಚಿತ್ರ ಬಿಡುಗಡೆಗೂ ಮುನ್ನವೇ ಪರಭಾಷೆಯಲ್ಲಿ ಸದ್ದು ಮಾಡುತ್ತಿವ ಚಿತ್ರ. ಕೋಮಲ್ ಚಿತ್ರಗಳಲ್ಲಿ ಹಾಡುಗಳಿಗೆ ವಿಶೇಷ ಪ್ರಾಧಾನ್ಯತೆ ಇರುತ್ತದೆ. ಈಗಾಗಲೆ ಅವರ ಗೋವಿಂದಾಯ ನಮಃ, ಕರೋಡ್ ಪತಿ ಚಿತ್ರಗಳ ಹಾಡುಗಳು ಕೇಳುಗರ ಕಿವಿಗಳನ್ನು ತಂಪು ಮಾಡಿರುವುದು ಗೊತ್ತೇ ಇದೆ.

  ಇದೀಗ ಅವರ ಬಹುನಿರೀಕ್ಷೆಯ 'ಪುಂಗಿದಾಸ' ಚಿತ್ರದ ಆಡಿಯೋ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಆಡಿಯೋ ಬಿಡುಗಡೆ ಸಮಾರಂಭದ ಆಹ್ವಾನ ಪತ್ರಿಕೆಯೇ ವಿಭಿನ್ನವಾಗಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್ ಡಿ ಗಂಗರಾಜು ಅವರು ಬೆಂಗಳೂರಿನ ಸಿಟಿ ಇನ್ಸ್ ಟಿಟ್ಯೂಟ್ ನಲ್ಲಿ ಆಡಿಯೋ ಬಿಡುಗಡೆ ಮಾಡಿದರು. [ತೆಲುಗು ವಿಕ್ಟರಿ ವೆಂಕಟೇಶ್ ಕೈಗೆ ಕೋಮಲ್ 'ಪುಂಗಿ']

  ಈ ಚಿತ್ರದಲ್ಲಿ ತಮ್ಮದು ವಿಭಿನ್ನ ಪಾತ್ರ ಎಂದರು ಕೋಮಲ್. 'ರ್‍ಯಾಂಬೋ' ನಿರ್ದೇಶಕ ಶ್ರೀನಾಥ್ ಆಕ್ಷನ್ ಕಟ್ ಹೇಳಿರುವ ಚಿತ್ರವಿದು. 'ವಿಕ್ಟರಿ' ಚಿತ್ರಕ್ಕೆ ಕಥೆ ಒದಗಿಸಿರುವವರು ಈ ಬಾರಿ ಒಂದು ವಿಚಿತ್ರ ಹಾಗೂ ಸಮಾಜದಲ್ಲಿ ಜರಗುವ ಸಂಗತಿಯನ್ನು ಇಟ್ಟುಕೊಂಡೇ ನಕ್ಕು ನಗಿಸಲು ಕೋಮಲ್ ಕುಮಾರ್ ಅವರ ಇಮೇಜ್ ಅನ್ನು ಬಳಸಿಕೊಳ್ಳುತ್ತಿದ್ದಾರೆ. ಮಾರ್ಚ್ ಅಂತ್ಯಕ್ಕೆ ಚಿತ್ರವನ್ನು ತೆರೆಗೆ ತರಲು ಸಿದ್ಧತೆಗಳಾಗುತ್ತಿವೆ.

  ಮನೆಯಲ್ಲಿ ತಾತ ಅಸುನೀಗಿದ್ದಾನೆ. ಆದರೆ ಆತ ಸಾಲ ಕೊಟ್ಟಿರುವ ತಾತ ಹಾಗೂ ಪಡೆದಿರುವ ಘಾಟಿ ತಾತ. ಅದನ್ನು ಪಡೆಯಲು ಹ್ಯಾಗಗೆಲ್ಲ ಪುಂಗಿ ಊದಬೇಕಾಗಬಹುದು ಎಂಬುದು ಚಿತ್ರದ ತಿರುಳು. ಕೋಮಲ್ ಕುಮಾರ್ ಅವರಿಗೆ ಆಸ್ಮ ಎಂಬುವರು ನಾಯಕಿ. ಆರ್ ಎನ್ ಸುದರ್ಶನ್ ತಾತ, ಸೌಕರ್ ಜಾನಕಿ ಅವರು ಅಜ್ಜಿ ಪಾತ್ರದಾರಿ. ಬಿ ಸಿ ಪಾಟೀಲ್, ಆಶಿಷ್, ತಬ್ಲ ನಾಣಿ, ಕುರಿ ಪ್ರತಾಪ್, ಬುಲ್ಲೆಟ್ ಪ್ರಕಾಷ್, ಪದ್ಮಜ ರಾವು, ಮುಖ್ಯ ಪಾತ್ರದಲ್ಲಿ ರಾಜೇಂದ್ರ ಕಾರಂತ್ ಹಾಗೂ ಇನ್ನಿತರರು ಇದ್ದಾರೆ.

  'ಪುಂಗಿ ದಾಸ' ಚಿತ್ರಕ್ಕೆ ಸಂಗೀತದ ಪುಂಗಿ ಊದುತ್ತಿರುವವರು ಫರ್ಹಾನ್ ರೋಶನ್ (ಈ ಹಿಂದೆ ಎಮಿಲ್ ಎಂದು ಪರಿಚಯ ಅದವರು ನಂದ ಲವ್ಸ್ ನಂದಿತಾ ಚಿತ್ರದ ಜಿಂಕೆಮರಿ ಹಾಡಿನ ಖ್ಯಾತಿ). ಅರುಳ್ ಅವರ ಛಾಯಾಗ್ರಹಣವಿದೆ.ಎಸ್ ಎಸ್ ವಿ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರದ ನಿರ್ಮಾಪಕರು ಸದಾಶಿವ. (ಒನ್ಇಂಡಿಯಾ ಕನ್ನಡ)

  English summary
  KFCC president H D Gangaraju has released the audio of Komal Kumar's upcoming film 'Pungi Dasa'. The movie directed by 'Rambo' fame Srinath and music by Ferhan Roshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X