ಕೊರಿಯಾ ಅಭಿಮಾನಿಯ ಕನ್ನಡ ಪ್ರೇಮ: ಅಪ್ಪು ಸಿನಿಮಾದ ಹಾಡು ಹಾಡಿದ ವಿದೇಶಿ ಯುವತಿ
ಕನ್ನಡ ಹಾಡುಗಳು, ಸಿನಿಮಾಗಳನ್ನು ಕೆಲವು ವಿದೇಶಿಗರು ಸಹ ತುಂಬಾ ಇಷ್ಟಪಡುತ್ತಾರೆ. ಆಗಾಗ ಕನ್ನಡ ಕಲಾವಿದರ ಮೇಲೆ ಅಭಿಮಾನ, ಪ್ರೀತಿ ವ್ಯಕ್ತಪಡಿಸಿರುವ ವಿಡಿಯೋಗಳನ್ನು ನೋಡಿರುತ್ತೀರಾ. ಇದೀಗ ಕೊರಿಯಾದ ಯುವತಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾದ ಹಾಡನ್ನು ಹಾಡಿ ಕನ್ನಡ ಅಭಿಮಾನಿಗಳ ಮನಗೆದ್ದಿದ್ದಾರೆ.
Recommended Video
'ಯುವರತ್ನ' ಸಿನಿಮಾದ ಪ್ರಸಿದ್ಧ 'ನೀನಾದೇನಾ..' ಹಾಡಿಗೆ ಕೊರಿಯಾ ಮೂಲದ ಯುವತಿ ಧ್ವನಿಯಾಗಿದ್ದಾರೆ. ಈ ಹಾಡು ಈಗ ಅಪ್ಪು ಫ್ಯಾನ್ ಪೇಜ್ ಗಳಲ್ಲಿ ವೈರಲ್ ಆಗಿದೆ. ಹಳದಿ ಬಣ್ಣದ ಕೆಂಪು ಜರಿ ಇರುವ ಸೀರೆ ಧರಿಸಿ ಕನ್ನಡ ಹಾಡು ಹಾಡಿದ ಯುವತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಕೊರಿಯಾ ಯುವತಿಯ ಕನ್ನಡ ಪ್ರೇಮಕ್ಕೆ ಕನ್ನಡಿಗರು ಮನಸೋತಿದ್ದಾರೆ. ಅಂದಹಾಗೆ ಯುವರತ್ನ ಚಿತ್ರಕ್ಕೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಸ್. ತಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡನ್ನು ಅರ್ಮಾನ್ ಮಲ್ಲಿಕ್ ಮತ್ತು ಶ್ರೇಯಾ ಘೋಷಾಲ್ ಹಾಡಿದ್ದಾರೆ. ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದ ಈ ಹಾಡು ಈಗ ವಿದೇಶಿಗರ ಬಾಯಲ್ಲಿ ಕೇಳುತ್ತಿರುವುದು ಚಿತ್ರತಂಡಕ್ಕೆ ಮತ್ತಷ್ಟು ಖುಷಿ ತಂದಿದೆ.

ಪುನೀತ್ ನಟನೆಯ ಯುವರತ್ನ ಸಿನಿಮಾ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬಂದಿದೆ. ಈ ಸಿನಿಮಾ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಕೊರೊನಾ ಕಾರಣದಿಂದ ಚಿತ್ರಮಂದಿರಗಳನ್ನು ಬಂದ್ ಮಾಡಲಾಯಿತು. ಬಳಿಕ ಯುವರತ್ನ ಒಟಿಟಿಗೆ ಎಂಟ್ರಿ ಕೊಟ್ಟಿತು. ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ಕಾಂಬಿನೇಷನ್ ನಲ್ಲಿ ಮೂಡಿಬಂದ ಯುವರತ್ನ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಪುನೀತ್ ಸದ್ಯ ಜೇಮ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚೇತನ್ ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಚಿತ್ರೀಕರಣ ಬಹುತೇಕ ಮಾಡಿ ಮುಗಿಸಿದೆ ಸಿನಿಮಾತಂಡ. ಸದ್ಯ ಲಾಕ್ ಡೌನ್ ಕಾರಣ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಜುಲೈನಿಂದ ಚಿತ್ರೀಕರಣ ಪ್ರಾರಂಭ ಮಾಡಲು ಸಿದ್ಧವಾಗಿದೆ ಜೇಮ್ಸ್ ತಂಡ.


Click it and Unblock the Notifications











