25 ಮಿಲಿಯನ್ ವೀಕ್ಷಣೆ ಪಡೆದ ಕ್ರಾಂತಿ ಚಿತ್ರದ ಪುಷ್ಪವತಿ ಹಾಡು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಚಿತ್ರ ಕ್ರಾಂತಿ ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ಜನವರಿ ತಿಂಗಳಿನಂದು ಗಣರಾಜ್ಯೋತ್ಸವದ ಪ್ರಯುಕ್ತ ತೆರೆಗೆ ಬಂದಿದ್ದ ಕ್ರಾಂತಿ ಚಿತ್ರ ಸದ್ಯ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಇತ್ತೀಚೆಗಷ್ಟೆ ಚಿತ್ರತಂಡ ಚಿತ್ರ 100 ಕೋಟಿ ಕ್ಲಬ್ ಸೇರಿದ ಸಂಭ್ರಮಾಚರಣೆಯನ್ನು ಮಾಡಿದೆ.
ಹೌದು, ಚಿತ್ರಮಂದಿರದ ಕಲೆಕ್ಷನ್ ಹಾಗೂ ಚಿತ್ರದ ಡಿಜಿಟಲ್ ಮತ್ರು ಸ್ಯಾಟಲೈಟ್ ಹಕ್ಕುಗಳ ಮಾರಾಟದ ಒಟ್ಟಾರೆ ಗಳಿಕೆಯಿಂದಾಗಿ ಕ್ರಾಂತಿ ಚಿತ್ರ ಮೊದಲ ವಾರವೇ ನೂರು ಕೋಟಿ ಕ್ಲಬ್ ಸೇರಿದೆ ಎಂದು ಚಿತ್ರತಂಡ ಈ ಸಂಭ್ರಮಾಚರಣೆಯನ್ನು ಸಕ್ಸಸ್ ಮೀಟ್ ಮಾಡಿ ಕೇಕ್ ಕತ್ತರಿಸುವ ಮೂಲಕ ಮಾಡಿದೆ.

ಇನ್ನು ಕ್ರಾಂತಿ ಚಿತ್ರ ಚಿತ್ರಮಂದಿರಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದ್ದರೆ, ಇತ್ತ ಚಿತ್ರದ ಹಿಟ್ ಹಾಡು ಪುಷ್ಪವತಿ ಯುಟ್ಯೂಬ್‌ನಲ್ಲಿ 25 ಮಿಲಿಯನ್ ವೀಕ್ಷಣೆ ಪಡೆದ ಮೈಲಿಗಲ್ಲನ್ನು ಮುಟ್ಟಿದೆ. ಹೌದು, ಡಿಸೆಂಬರ್ 25ರಂದು ಹುಬ್ಬಳ್ಳಿಯಲ್ಲಿ ಬಿಡುಗಡೆಯಾಗಿದ್ದ ಈ ಹಾಡು ಕೇಳುಗರಿಗೆ ಮೊದಲ ಸಲಕ್ಕೆ ಇಷ್ಟವಾಗಿಬಿಟ್ಟಿತ್ತು. ಹಾಡಿನಲ್ಲಿ ದರ್ಶನ್ ಸ್ಟೆಪ್ಸ್‌ಗೆ ಮನಸೋತಿದ್ದ ದರ್ಶನ್ ಅಭಿಮಾನಿಗಳು ಹೆಜ್ಜೆ ಹಾಕಿದ್ದ ಯುವ ನಟಿ ನಿಮಿಕಾ ರತ್ನಾಕರ್ ಅವರನ್ನು ಕ್ರಶ್ ಎಂದು ಕೊಂಡಾಡಿದ್ದರು.
ಬಿಡುಗಡೆಯಾದ ಹೊಸ್ತಿಲಲ್ಲಿ ಸತತವಾಗಿ ಹಲವಾರು ದಿನಗಳ ಕಾಲ ಯುಟ್ಯೂಬ್ ಟ್ರೆಂಡಿಂಗ್ ಪಟ್ಟಿಯಲ್ಲಿ ಇದ್ದ ಈ ಹಾಡು ಇಂದಿಗೂ ಸಹ ಯುಟ್ಯೂಬ್ ಮ್ಯೂಸಿಕ್‌ನಲ್ಲಿ 45ನೇ ಸ್ಥಾನದಲ್ಲಿದೆ. ಇನ್ನು ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ರೀಲ್ಸ್ ಮಾಡುವ ಹಲವಾರು ಬಳಕೆದಾರರು ಶೇಕ್ ಇಟ್ ಪುಷ್ಪವತಿ ಎಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಲ್ಲದೇ ಕ್ರಾಂತಿ ಸಕ್ಸಸ್ ಮೀಟ್‌ನಲ್ಲಿ ಚಿತ್ರತಂಡ ಸಹ ಇದೇ ಹಾಡಿಗೆ ಹುಕ್ ಸ್ಟೆಪ್ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿತ್ತು.


Click it and Unblock the Notifications











