ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ಲೈಕ್ಸ್ ಪಡೆದ ಹಾಡುಗಳು; ಧರಣಿಗೆ ಎಷ್ಟನೇ ಸ್ಥಾನ?

ಕ್ರಾಂತಿ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಮುಂದಿನ ಜನವರಿ 26ರಂದು ಗಣರಾಜ್ಯೋತ್ಸನದ ಪ್ರಯುಕ್ತ ದರ್ಶನ್ ಅಭಿನಯದ ಈ ಬಹುನಿರೀಕ್ಷಿತ ಚಿತ್ರ ಬೆಳ್ಳೆ ತೆರೆಗೆ ಅಪ್ಪಳಿಸಲಿದೆ. ಈ ಹಿಂದೆ ಯಶಸ್ಸು ಕಂಡಿದ್ದ ಯಜಮಾನ ಬಳಿಕ ವಿ ಹರಿಕೃಷ್ಣ ಹಾಗೂ ದರ್ಶನ್ ಕಾಂಬಿನೇಶನ್‌ನಲ್ಲಿ ಚಿತ್ರ ಮೂಡಿ ಬರುತ್ತಿರುವ ಕಾರಣ ಕ್ರಾಂತಿ ಮೇಲಿನ ನಿರೀಕ್ಷೆ ಹೆಚ್ಚಾಗಿದ್ದು, ಮತ್ತೊಂದೆಡೆ ರಾಬರ್ಟ್ ಚಿತ್ರದ ಬಳಿಕ ಸುಮಾತು ಇಪ್ಪತ್ತು ತಿಂಗಳ ಬಳಿಕ ಬಿಡುಗಡೆಯಾಗುತ್ತಿರುವ ದರ್ಶನ್ ಅಭಿನಯದ ಚಿತ್ರ ಎಂಬ ಕಾರಣಕ್ಕೆ ಮತ್ತಷ್ಟು ಹೈಪ್ ಹೆಚ್ಚಿಸಿದೆ.

ಇನ್ನು ಕ್ರಾಂತಿ ಚಿತ್ರತಂಡ ಹಾಡುಗಳ ಮೂಲಕ ಚಿತ್ರದ ಹೈಪ್ ಹೆಚ್ಚಿಸುವ ಕೆಲಸಕ್ಕೆ ಕೈಹಾಕಿದ್ದು, ಕಳೆದ ಡಿಸೆಂಬರ್ 10ರಂದು ಚಿತ್ರದ ಮೊದಲ ಹಾಡು ಧರಣಿ ಥೀಮ್ ಅನ್ನು ಬಿಡುಗಡೆಗೊಳಿಸಿತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಹಾಡನ್ನು ಚಿತ್ರತಂಡ ಬಿಡುಗಡೆಗೊಳಿಸಿದ್ದು, ಮತ್ತೊಮ್ಮೆ ವಿ ಹರಿಕೃಷ್ಣ ಹಾಗೂ ದರ್ಶನ್ ಕಾಂಬಿನೇಶನ್ ಕ್ಲಿಕ್ ಆಗಿದೆ.

ವಿ ನಾಗೇಂದ್ರ ಪ್ರಸಾದ್ ಬರೆದಿರುವ ಸಾಲುಗಳು ವೀಕ್ಷಕರ ಹೃದಯ ಗೆದ್ದಿದ್ದು, ಹಾಡು ಹಿಟ್ ಆಗಿದೆ. ಇನ್ನು ಕ್ರಾಂತಿ ಚಿತ್ರದ ಧರಣಿ ಹಾಡು ಮೊದಲ 24 ಗಂಟೆಗಳಲ್ಲಿ 2.3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇನ್ನು ಉತ್ತಮ ವೀಕ್ಷಣೆ ಮಾತ್ರವಲ್ಲದೇ ಹೆಚ್ಚು ಲೈಕ್‌ಗಳನ್ನೂ ಸಹ ಧರಣಿ ಹಾಡು ಪಡೆದುಕೊಂಡಿದ್ದು, ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ಲೈಕ್ಸ್ ಪಡೆದ ಕನ್ನಡದ ಲಿರಿಕಲ್ ಹಾಡುಗಳ ಟಾಪ್ 5 ಪಟ್ಟಿಯಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಗಿದ್ದರೆ ಬಿಡುಗಡೆಗೊಂಡ 24 ಗಂಟೆಗಳಲ್ಲಿ ಅತಿಹೆಚ್ಚು ಲೈಕ್ಸ್ ಗಿಟ್ಟಿಸಿಕೊಂಡ ಕನ್ನಡದ ಲಿರಿಕಲ್ ಹಾಡುಗಳ ಪೈಕಿ ಅತಿಹೆಚ್ಚು ಲೈಕ್ಸ್ ಪಡೆದುಕೊಂಡ ಹಾಡುಗಳು ಯಾವುವು ಎಂಬುದರ ಮಾಹಿತಿ ಈ ಕೆಳಕಂಡಂತಿದೆ..

24 ಗಂಟೆಗಳಲ್ಲಿ ಅತಿಹೆಚ್ಚು ಲೈಕ್ಸ್ ಪಡೆದುಕೊಂಡ ಕನ್ನಡದ ಲಿರಿಕಲ್ ಹಾಡುಗಳು

24 ಗಂಟೆಗಳಲ್ಲಿ ಅತಿಹೆಚ್ಚು ಲೈಕ್ಸ್ ಪಡೆದುಕೊಂಡ ಕನ್ನಡದ ಲಿರಿಕಲ್ ಹಾಡುಗಳು

ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ಯುಟ್ಯೂಬ್ ಲೈಕ್ಸ್ ಪಡೆದುಕೊಂಡ ಕನ್ನಡದ ಲಿರಿಕಲ್ ಹಾಡುಗಳ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ..

1. ತೂಫಾನ್ ( ಕೆಜಿಎಫ್ ಚಾಪ್ಟರ್ 2 ) - 501K ಲೈಕ್ಸ್

2. ಧರಣಿ ( ಕ್ರಾಂತಿ ) - 301K ಲೈಕ್ಸ್

3. ಗಗನ ನೀ ( ಕೆಜಿಎಫ್ ಚಾಪ್ಟರ್ 2 ) - 296K ಲೈಕ್ಸ್

4. ಟ್ರೇಡ್ ಮಾರ್ಕ್ ( ಜೇಮ್ಸ್ ) - 264K ಲೈಕ್ಸ್

5. ಸುಲ್ತಾನ ( ಕೆಜಿಎಫ್ ಚಾಪ್ಟರ್ 2 ) - 250K ಲೈಕ್ಸ್

ಹೆಚ್ಚು ವೀಕ್ಷಣೆ ಪಡೆದುಕೊಂಡ ಹಾಡುಗಳು

ಹೆಚ್ಚು ವೀಕ್ಷಣೆ ಪಡೆದುಕೊಂಡ ಹಾಡುಗಳು

ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ಯುಟ್ಯೂಬ್ ವೀಕ್ಷಣೆ ಪಡೆದುಕೊಂಡ ಕನ್ನಡದ ಲಿರಿಕಲ್ ಹಾಡುಗಳ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ..

1. ತೂಫಾನ್ ( ಕೆಜಿಎಫ್ ಚಾಪ್ಟರ್ 2 ) - 5.1 ಮಿಲಿಯನ್ ವೀಕ್ಷಣೆ

2. ಟ್ರೇಡ್ ಮಾರ್ಕ್ ( ಜೇಮ್ಸ್ ) - 5 ಮಿಲಿಯನ್ ವೀಕ್ಷಣೆ

3. ರಾ ರಾ ರಕ್ಕಮ್ಮ ( ವಿಕ್ರಾಂತ್ ರೋಣ ) - 4.5 ಮಿಲಿಯನ್ ವೀಕ್ಷಣೆ

4. ಪಾಠಾಶಾಲಾ ( ಯುವರತ್ನ ) - 3.1 ಮಿಲಿಯನ್ ವೀಕ್ಷಣೆ

5. ಆಕಾಶಾನೇ ಅದರಿಸುವ ( ಕೋಟಿಗೊಬ್ಬ 3 ) - 2.7 ಮಿಲಿಯನ್ ವೀಕ್ಷಣೆ

ಕ್ರಾಂತಿ ಮುಂದಿನ ಹಾಡು ಯಾವಾಗ?

ಕ್ರಾಂತಿ ಮುಂದಿನ ಹಾಡು ಯಾವಾಗ?

ಇನ್ನು ಕ್ರಾಂತಿ ಚಿತ್ರದ ಮುಂದಿನ ಹಾಡನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆ ಪಟ್ಟಣದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ದರ್ಶನ್ ತಿಳಿಸಿದ್ದಾರೆ. ಡಿಸೆಂಬರ್ 18ರ ಭಾನುವಾರದಂದು ಈ ಹಾಡು ಬಿಡುಗಡೆಯಾಗಲಿದೆ ಎಂಬ ವಿಷಯವನ್ನು ತಿಳಿಸಿದ್ದ ದರ್ಶನ್ ಯಾವ ಹಾಡು ಎಂನ ಅಪ್‌ಡೇಟ್ ಅನ್ನು ಶೀಘ್ರದಲ್ಲೇ ತಿಳಿಸಲಿದ್ದೇವೆ ಎಂದಿದ್ದರು.

More from Filmibeat

FB Artcles

English summary
Kranti's Dharani song beats James, Vikrant Rona likes but failed to beat KGF Chapter 2 in youtube likes . Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X