twitter
    For Quick Alerts
    ALLOW NOTIFICATIONS  
    For Daily Alerts

    ಈಗಿನ ಗಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿದ ಹಿರಿಯ ಗಾಯಕ ಕುಮಾರ್ ಸಾನು

    |

    ಭಾರತೀಯ ಚಿತ್ರರಂಗದಲ್ಲಿ ಮೆಲೋಡಿ ಹಾಡುಗಳಿಗೆ ಖ್ಯಾತಿ ಗಳಿಸಿಕೊಂಡಿರುವ ಪ್ರಸಿದ್ಢ ಗಾಯಕ ಕುಮಾರ್ ಸಾನು ಇತ್ತೀಚಿನ ದಿನಗಳಲ್ಲಿ ಇಂಡಸ್ಟ್ರಿ ಪ್ರವೇಶಿಸಿರುವ ಗಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಗಾಯಕರು ಮಾತ್ರವಲ್ಲ, ಇತ್ತೀಚಿನ ಸಂಗೀತ ನಿರ್ದೇಶಕರ ಮೇಲೆಯೂ ಅಸಮಾಧಾನದ ಮಾತುಗಳನ್ನಾಡಿದ್ದಾರೆ.

    ಇಂದಿನ ಪೀಳಿಗೆಯ ಗಾಯಕರ ಬಗ್ಗೆ ಸಂತಸ ಇದೆ. ಅದು ಅಂತಾರಾಷ್ಟ್ರೀಯ ಸಂಗೀತ ನಕಲು ಮಾಡುವುದರಲ್ಲಿ ಮಾತ್ರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಈಗಿನ ಗಾಯಕರಲ್ಲಿ ಕ್ರೀಯಾಶೀಲತೆ ಶೂನ್ಯ ಎಂದಿದ್ದಾರೆ. ಬಹುಭಾಷೆಯಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಸಾನು ನವಪೀಳಿಗೆ ಕುರಿತು ಇಂತಹ ಅಭಿಪ್ರಾಯ ಮಂಡಿಸಿರುವುದು ಚರ್ಚೆಗೆ ಕಾರಣವಾಗಿದೆ. ಮುಂದೆ ಓದಿ...

    19ನೇ ವಯಸ್ಸಿನಲ್ಲೇ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿ ಆಗಿದ್ದೆ: ನೋವಿನ ಕಥೆ ಬಿಚ್ಚಿಟ್ಟ ಲೇಡಿ ಗಾಗಾ 19ನೇ ವಯಸ್ಸಿನಲ್ಲೇ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿ ಆಗಿದ್ದೆ: ನೋವಿನ ಕಥೆ ಬಿಚ್ಚಿಟ್ಟ ಲೇಡಿ ಗಾಗಾ

    ಇಂದಿನ ಗಾಯಕರಿಗೆ ಅಸುರಕ್ಷಿತ ಭಾವ ಕಾಡ್ತಿದೆ

    ಇಂದಿನ ಗಾಯಕರಿಗೆ ಅಸುರಕ್ಷಿತ ಭಾವ ಕಾಡ್ತಿದೆ

    ಟೈಮ್ಸ್ ಆಫ್ ಇಂಡಿಯಾ ಜೊತೆ ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಕುಮಾರ್ ಸಾನು ''ಸಂಗೀತ ಕ್ಷೇತ್ರದಲ್ಲಿ ಇಂದಿನ ಪೀಳಿಗೆ ಗಾಯಕರಿಗೆ ಅಸುರಕ್ಷಿತ ಭಾವ ಹೆಚ್ಚು ಕಾಡುತ್ತಿದೆ. ಇಂಡಸ್ಟ್ರಿ ಪ್ರವೇಶಿಸುವುದಕ್ಕೆ ಮುಂಚೆ ಹೊರಗಡೆ ಹಲವು ರೀತಿಯ ಕೆಲಸಗಳನ್ನು ಮಾಡಬೇಕು, ಅದು ಒಳ್ಳೆಯದಲ್ಲ. ಬಹಳಷ್ಟು ಜನ ಗಾಯಕರು ಮತ್ತು ಕಂಪೋಸರ್‌ಗಳು ಇದ್ದಾರೆ. ಆದರೆ, ಅವರಲ್ಲಿ ಕ್ರೀಯಾಶೀಲತೆ ಇಲ್ಲವೇ ಇಲ್ಲ'' ಎಂದಿದ್ದಾರೆ.

    ಸಂಗೀತ ನಕಲು ಮಾಡ್ತಿದ್ದಾರೆ ಅಷ್ಟೇ

    ಸಂಗೀತ ನಕಲು ಮಾಡ್ತಿದ್ದಾರೆ ಅಷ್ಟೇ

    ''ಇಂಡಸ್ಟ್ರಿ ಬಹಳ ಬದಲಾಗಿದೆ ಎಂದು ನನಗೆ ಎನಿಸುತ್ತಿದೆ. ತುಂಬಾ ಜನರು ಅಂತಾರಾಷ್ಟ್ರೀಯ ಸಂಗೀತದಿಂದ ಸ್ಪೂರ್ತಿಯಾಗಿ ಹಿಂದಿ ಸಾಹಿತ್ಯಕ್ಕೆ ಅದನ್ನು ನಕಲು ಮಾಡುತ್ತಿದ್ದಾರೆ. ಈ ಉದ್ಯಮದಲ್ಲಿ ಯಾವುದೇ ಗಾಯಕ ಮತ್ತು ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಳ್ಳಬೇಕು ಅಂದ್ರೆ ಅದು ಕಷ್ಟಕರವಾಗಿದೆ. ಎಲ್ಲಿ ಕ್ರೀಯಾಶೀಲತೆ ಇರುವುದಿಲ್ಲವೋ ಅಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ನನ್ನ ಭಾವನೆ'' ಎಂದು ಕುಮಾರ್ ಸಾನು ಹೇಳಿದರು.

    ಹಾಲಿವುಡ್‌ ಹಾಡುಗಾರ್ತಿಯರಿಗೆ ಎ.ಆರ್.ರೆಹಮಾನ್ ಜೊತೆ ಕೆಲಸ ಮಾಡುವ ಆಸೆಹಾಲಿವುಡ್‌ ಹಾಡುಗಾರ್ತಿಯರಿಗೆ ಎ.ಆರ್.ರೆಹಮಾನ್ ಜೊತೆ ಕೆಲಸ ಮಾಡುವ ಆಸೆ

    ಸಿಕ್ಕ ಅವಕಾಶ ಬಳಕೆ ಮಾಡಿದ್ದೇನೆ

    ಸಿಕ್ಕ ಅವಕಾಶ ಬಳಕೆ ಮಾಡಿದ್ದೇನೆ

    ಮಾತು ಮುಂದುವರಿಸಿದ ಕುಮಾರ್ ಸಾನು ''ನನಗೆ ಸಿಕ್ಕ ಎಲ್ಲಾ ಅವಕಾಶಗಳನ್ನು ಚೆನ್ನಾಗಿ ಬಳಕೆ ಮಾಡಿಕೊಂಡಿದ್ದೇನೆ ಮತ್ತು ನಾನು ಎಲ್ಲಾ ಹಾಡುಗಳಿಗೆ ನ್ಯಾಯ ಒದಗಿಸುವಲ್ಲಿ ಪ್ರಯತ್ನಿಸಿದ್ದೇನೆ ಎಂಬ ನಂಬಿಕೆ ನನಗಿದೆ'' ಎಂದಿದ್ದಾರೆ.

    ಕನ್ನಡದಲ್ಲಿಯೂ ಹಾಡಿದ್ದಾರೆ ಸಾನು

    ಕನ್ನಡದಲ್ಲಿಯೂ ಹಾಡಿದ್ದಾರೆ ಸಾನು

    ಬಾಲಿವುಡ್‌ನಲ್ಲಿ ಮೆಲೋಡಿ ಹಾಡುಗಳಿಗೆ ಖ್ಯಾತಿ ಗಳಿಸಿರುವ ಕುಮಾರ್ ಸಾನು, ಹಿಂದಿ, ಮರಾಠಿ, ನೇಪಾಳಿ, ಭೋಜ್‌ಫುರಿ, ಅಸ್ಸಾಂ, ತೆಲುಗು, ಮಲಯಾಳಂ ಹಾಗೂ ಕನ್ನಡ ಸೇರಿದಂತೆ ಹಲವು ಭಾಷೆಯಲ್ಲಿ ಹಾಡಿದ್ದಾರೆ. ಹಲವು ಪ್ರಶಸ್ತಿ ಪಡೆದಿದ್ದಾರೆ. ಕನ್ನಡದಲ್ಲಿ ಕೆಲವು ಹಾಡುಗಳನ್ನು ಪಟ್ಟಿ ಮಾಡುವುದಾದರೆ ಚಂಡ ಚಿತ್ರದ 'ನೀ ಚೆಂದಾನೆ ನಿನ್ನ ಆಸೆ ಚೆಂದಾನೆ'...ಸತ್ಯ ಇನ್ ಲವ್ ಚಿತ್ರದ 'ಸೆರೆಯಾದೇನು'.....'ದೇವರು ವರವನು ಕೊಟ್ರೆ' ಚಿತ್ರದ ಟೈಟಲ್ ಹಾಡನ್ನು ಇವರೇ ಹಾಡಿರುವುದು.

    English summary
    Indian Playback singer Kumar Sanu unhappy on recent Generation singers and Music Composers.
    Tuesday, May 25, 2021, 16:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X