ಕುರುಕ್ಷೇತ್ರ ಮೊದಲ ಹಾಡು: ಪ್ರಚಾರ ಕಮ್ಮಿ, ಅಬ್ಬರ ಜಾಸ್ತಿ

Recommended Video

Kurukshetra Kannada Movie: ಕುರುಕ್ಷೇತ್ರ ಮೊದಲ ಹಾಡು: ಪ್ರಚಾರ ಕಮ್ಮಿ, ಅಬ್ಬರ ಜಾಸ್ತಿ | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್, ರೆಬೆಲ್ ಸ್ಟಾರ್ ಅಂಬರೀಶ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ಸೋನು ಸೂದ್, ಮೇಘನಾ ರಾಜ್ ಹೀಗೆ ಕನ್ನಡ ಚಿತ್ರರಂಗದ ಹಲವು ಪ್ರಮುಖ ನಟರು ಅಭಿನಯಿಸಿರುವ ಪೌರಾಣಿಕ ಸಿನಿಮಾ ಕುರುಕ್ಷೇತ್ರ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ.

ಈಗಾಗಲೇ ಘೋಷಣೆಯಾಗಿರುವಂತೆ ಜುಲೈ 7 ರಂದು ಕುರುಕ್ಷೇತ್ರ ಆಡಿಯೋ ಬಿಡುಗಡೆಯಾಗುತ್ತಿದೆ. ಅಧಿಕೃತವಾಗಿ ಧ್ವನಿ ಸುರಳಿ ರಿಲೀಸ್ ಆಗುವುದಕ್ಕೂ ಮುಂಚೆಯೇ ಯೂಟ್ಯೂಬ್ ನಲ್ಲಿ ಚಿತ್ರದ ಮೊದಲ ಹಾಡು ಅನಾವರಣಗೊಂಡಿದೆ.

'ಸಾಹೋರೇ ಸಾಹೋ....' ಹಾಡು ರಿಲೀಸ್ ಆಗಿದ್ದು ಸದ್ಯ ಯೂಟ್ಯೂಬ್ ನಲ್ಲಿ ಅಬ್ಬರ ಮಾಡುತ್ತಿದೆ. ಡಾ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಹೊಂದಿರುವ ಈ ಹಾಡನ್ನ ವಿಜಯ ಪ್ರಕಾಶ್ ಹಾಡಿದ್ದಾರೆ. ಹರಿಕೃಷ್ಣ ಅವರ ಸಂಗೀತ ಒಳಗೊಂಡಿದ್ದು, ಪೌರಾಣಿಕ ಚಿತ್ರಕ್ಕೆ ಅಗತ್ಯವಾದಂತೆ ಮೂಡಿ ಬಂದಿದೆ.

Kurukshetra first song records

ಅಂದ್ಹಾಗೆ, ಈ ಹಾಡು ದುರ್ಯೋಧನನ ವ್ಯಕ್ತಿತ್ವವನ್ನ ಬಣ್ಣಿಸುವ ಹಾಡಾಗಿದ್ದು, ಒಂದೇ ಹಾಡಿನಲ್ಲಿ ಕೌರವನ ಗುಣಗಾನ ಮಾಡಲಾಗಿದೆ. ದುರ್ಯೋಧನನಾಗಿ ದರ್ಶನ್ ಹೇಗಿರಬಹುದು ಎಂಬುದನ್ನ ಈ ಲಿರಿಕಲ್ ವಿಡಿಯೋ ಸಾಕ್ಷಿಯಾಗಿದೆ.

ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆಗಾಗಿ ಕಾಯುತ್ತಿದ್ದ ಫ್ಯಾನ್ಸ್ ಗೆ ಲಹರಿ ಸಂಸ್ಥೆ ಸರ್ಪ್ರೈಸ್ ನೀಡಿತ್ತು. ಮೊದಲ ಹಾಡು ರಿಲೀಸ್ ಆಗುವ ಬಗ್ಗೆ ಜುಲೈ 5 ರಂದು ಬೆಳಿಗ್ಗೆ ಸುಳಿವು ನೀಡಿದ್ದರು. ಒಂದು ಗಂಟೆಗೆ ಮುಂಚೆ ನಿಖರವಾದ ಸಮಯ ಹೇಳಿದ್ದರು. ಆದರೂ ಬಿಡುಗಡೆಯಾಗಿ 55 ನಿಮಿಷದಲ್ಲಿ 100k ವೀವ್ಸ್ ಕಂಡಿದೆ.

ಇನ್ನುಳಿದಂತೆ ಭಾನುವಾರ ಸಂಜೆ ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆಯಾಗುತ್ತಿದ್ದು, ಎಷ್ಟು ಹಾಡುಗಳಿವೆ, ಅದು ಹೇಗಿವೆ ಎಂಬುದು ಬಹಿರಂಗವಾಗಲಿದೆ.

More from Filmibeat

English summary
Kannada most expected Multi-starrer movie Kurukshetra with Challenging Star Darshan, Rebel Star Ambarish, Arjun sarja, Sonu sood as lead First single Song has been released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X