For Quick Alerts
  ALLOW NOTIFICATIONS  
  For Daily Alerts

  ಲಹರಿ ಪಾಲಾಯ್ತು 'ಕೆಜಿಎಫ್' ಆಡಿಯೋ: ಐದು ಭಾಷೆಗೆ ಸಿಕ್ಕ ಹಣ ಎಷ್ಟು?

  |

  ಭಾರತೀಯ ಚಿತ್ರಜಗತ್ತಿನಲ್ಲಿ ಭಾರಿ ಕುತೂಹಲ ಮೂಡಿಸಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಆಡಿಯೋ ಹಕ್ಕು ಲಹರಿ ಮ್ಯೂಸಿಕ್ ಪಾಲಾಗಿದೆ. ಕೆಜಿಎಫ್ ಚಾಪ್ಟರ್ 2 ಸಿನಿಮಾದ ಐದು ಭಾಷೆಯ ಹಾಡುಗಳನ್ನು ಲಹರಿ ಸಂಸ್ಥೆ ಖರೀದಿಸಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

  KGF 2 ನ ಎಲ್ಲಾ ಭಾಷೆಯ ಆಡಿಯೋ ಹಕ್ಕು ಖರೀದಿಸಿದ ಲಹರಿ ಸಂಸ್ಥೆ | Filmibeat Kannada

  ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಕೆಜಿಎಫ್ ಸಿನಿಮಾ ಬಿಡುಗಡೆಯಾಗುತ್ತಿದ್ದು, ಎಲ್ಲಾ ಭಾಷೆಯ ಹಾಡುಗಳು ಲಹರಿ ಸಂಸ್ಥೆ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಸದ್ಯಕ್ಕೆ ಆಡಿಯೋ ಹಕ್ಕು ಎಷ್ಟು ಮೊತ್ತಕ್ಕೆ ಮಾರಾಟವಾಗಿದೆ ಎನ್ನುವುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದರೆ, ದೊಡ್ಡ ಮೊತ್ತವೇ ಕೊಡಲಾಗಿದೆ ಎಂಬ ಸುದ್ದಿ ಇದೆ. ಮುಂದೆ ಓದಿ...

  ರವಿ ಬಸ್ರೂರು ಸಂಗೀತ

  ರವಿ ಬಸ್ರೂರು ಸಂಗೀತ

  ಕೆಜಿಎಫ್ ಚಾಪ್ಟರ್ 1ರ ಹಾಡುಗಳು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಸಿನಿಮಾದ ಎಲ್ಲಾ ಹಾಡುಗಳು ಎಲ್ಲಾ ಭಾಷೆಯಲ್ಲೂ ಮೆಚ್ಚುಗೆ ಪಡೆದುಕೊಂಡಿತ್ತು. ಚಾಪ್ಟರ್ 2ರ ಮೇಲೂ ಅಷ್ಟೇ ನಿರೀಕ್ಷೆಯಿದೆ. ರವಿ ಬಸ್ರೂರು ಸಂಗೀತಕ್ಕೆ ಬಹಳ ಕ್ರೇಜ್ ಹುಟ್ಟಿಕೊಂಡಿದೆ. ಇದೀಗ, ಭಾರತೀಯ ಸಿನಿಮಾರಂಗದ ಪ್ರಭಾವಿ ಮ್ಯೂಸಿಕ್ ಸಂಸ್ಥೆ ಲಹರಿ ಕೆಜಿಎಫ್ ಹಾಡು ಖರೀದಿ ಮಾಡಿರುವುದರಿಂದ ಇನ್ನಷ್ಟು ಥ್ರಿಲ್ ಹೆಚ್ಚಾಗಿದೆ.

  ಕೆಜಿಎಫ್ ರಿಲೀಸ್ ಬಗ್ಗೆ ನಿರಾಸೆ ಮೂಡಿಸಿದ ತರಣ್ ಆದರ್ಶ್ ಟ್ವೀಟ್ಕೆಜಿಎಫ್ ರಿಲೀಸ್ ಬಗ್ಗೆ ನಿರಾಸೆ ಮೂಡಿಸಿದ ತರಣ್ ಆದರ್ಶ್ ಟ್ವೀಟ್

  ಕೆಜಿಎಫ್ ಬಿಡುಗಡೆ ಮುಂದಕ್ಕೆ

  ಕೆಜಿಎಫ್ ಬಿಡುಗಡೆ ಮುಂದಕ್ಕೆ

  ಈ ಹಿಂದೆ ಪ್ರಕಟಿಸಿದ್ದಂತೆ ಜುಲೈ 16ಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ತೆರೆಗೆ ಬರಬೇಕಿತ್ತು. ಕೋವಿಡ್ ಎರಡನೇ ಅಲೆಯ ಪರಿಣಾಮ ಪರಿಸ್ಥಿತಿ ಸಂಪೂರ್ಣವಾಗಿ ಕೈಕೊಟ್ಟಿದೆ. ಆದ ಕಾರಣ ಈ ಹಿಂದೆ ನಿಗದಿಪಡಿಸಿದ ದಿನಾಂಕಕ್ಕೆ ಕೆಜಿಎಫ್ ಚಾಪ್ಟರ್ 2 ಬರುವುದು ಕಷ್ಟ. ಸೆಪ್ಟೆಂಬರ್ ತಿಂಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ಆಲೋಚಿಸಿದ್ದು, ಅಧಿಕೃತ ಮಾಹಿತಿ ಇಲ್ಲ.

  ಚಿತ್ರಮಂದಿರದಲ್ಲೇ ಕೆಜಿಎಫ್ ಎಂಟ್ರಿ

  ಚಿತ್ರಮಂದಿರದಲ್ಲೇ ಕೆಜಿಎಫ್ ಎಂಟ್ರಿ

  ಒಂದು ಹಂತದಲ್ಲಿ ಕೆಜಿಎಫ್ ಸಿನಿಮಾ ಒಟಿಟಿಯಲ್ಲಿ ತೆರೆಕಾಣಬಹುದಾ ಎಂಬ ಅನುಮಾನ ವ್ಯಕ್ತವಾಗಿತ್ತು. ಕೋವಿಡ್ ಪರಿಸ್ಥಿತಿ ನಿಯಂತ್ರಣ ಬಾರದ ಕಾರಣ ಒಟಿಟಿಯಲ್ಲೇ ಸಿನಿಮಾ ಪ್ರೀಮಿಯರ್ ಮಾಡಬಹುದು ಎನ್ನಲಾಗಿತ್ತು. ಆದರೆ, ಚಿತ್ರಮಂದಿರದಲ್ಲೇ ಕೆಜಿಎಫ್ ಬರೋದು ಎಂದು ನಿರ್ಮಾಪಕರು ಸ್ಪಷ್ಟನೆ ನೀಡಿದ್ದರು.

  'ಪುಷ್ಪ' ಸಿನಿಮಾ ಹತ್ತು 'ಕೆಜಿಎಫ್‌'ಗೆ ಸಮ ಎಂದ ನಿರ್ದೇಶಕ: ಯಶ್ ಅಭಿಮಾನಿಗಳು ಗರಂ'ಪುಷ್ಪ' ಸಿನಿಮಾ ಹತ್ತು 'ಕೆಜಿಎಫ್‌'ಗೆ ಸಮ ಎಂದ ನಿರ್ದೇಶಕ: ಯಶ್ ಅಭಿಮಾನಿಗಳು ಗರಂ

  ಪೋಸ್ಟ್ ಪ್ರೊಡಕ್ಷನ್ ಕೆಲಸ

  ಪೋಸ್ಟ್ ಪ್ರೊಡಕ್ಷನ್ ಕೆಲಸ

  ಸಂಪೂರ್ಣವಾಗಿ ಶೂಟಿಂಗ್ ಮುಗಿಸಿರುವ ಕೆಜಿಎಫ್ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿದೆ. ಪ್ರಶಾಂತ್ ನೀಲ್ ತಮ್ಮ ಕೆಲಸ ಪೂರ್ಣಗೊಳಿಸಿ ಸಲಾರ್ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಯಶ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ರಾವ್ ರಮೇಶ್, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ.

  English summary
  Lahari Music bags audio rights of Yash Starrer KGF Chapter 2 Movie in 5 languages.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X