'ರಣವಿಕ್ರಮ'ನ ವಿರುದ್ಧ ಕೋರ್ಟ್ ಬಾಗಿಲು ತಟ್ಟಿದ ಲಹರಿ ವೇಲು

By Harshitha

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ' ಚಿತ್ರಕ್ಕೆ ದೊಡ್ಡ ಸಂಕಷ್ಟ ಎದುರಾಗಿದೆ. ಬಿಡುಗಡೆಯ ಹೊಸ್ತಿಲಲ್ಲಿರುವ 'ರಣವಿಕ್ರಮ' ಚಿತ್ರ ಈಗ ಕಾನೂನು ಸಮರವನ್ನ ಎದುರಿಸುವ ಪರಿಸ್ಥಿತಿ ಉಂಟಾಗಿದೆ.

'ರಣವಿಕ್ರಮ' ಚಿತ್ರದ ಎರಡು ಹಾಡುಗಳಲ್ಲಿ ಕಾಪಿರೈಟ್ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಲಹರಿ ವೇಲು ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಕಳೆದ ವಾರವಷ್ಟೇ ಈ ವಿಚಾರಕ್ಕೆ ಸಂಬಂಧಪಟ್ಟಂತೆ 'ರಣವಿಕ್ರಮ' ಚಿತ್ರತಂಡಕ್ಕೆ ಲಹರಿ ಆಡಿಯೋ ಸಂಸ್ಥೆ ನೋಟೀಸ್ ಜಾರಿ ಮಾಡಿತ್ತು.

Lahari Velu decides to take 'Ranavikrama' Plagiarism to court

ಆದರೆ, ಈವರೆಗೂ 'ರಣವಿಕ್ರಮ' ಚಿತ್ರತಂಡದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಲಹರಿ ವೇಲು ಕೋರ್ಟ್ ಮೊರೆ ಹೋಗಲು ಮುಂದಾಗಿದ್ದಾರೆ. ''ರಣವಿಕ್ರಮ ಸಿನಿಮಾ ತಂಡದವರಿಗೆ ನಾವು ನೋಟೀಸ್ ಕಳುಹಿಸಿದ್ವಿ. 'ಮಾತಾಡೋಣ' ಅಂತ ಅಂದವರು ಈವರೆಗೂ ಪತ್ತೆಯಿಲ್ಲ. ಹೀಗಾಗಿ ಕಾನೂನು ಪ್ರಕಾರ ಏನಾಗುತ್ತೋ ಆಗಲಿ ಅಂತ ಕೋರ್ಟ್ ಗೆ ಹೋಗ್ತಿದ್ದೇವೆ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಲಹರಿ ವೇಲು ತಿಳಿಸಿದರು. [ಪುನೀತ್ 'ರಣವಿಕ್ರಮ'ನಿಗೆ ಲಹರಿ ವೇಲು ನೋಟಿಸ್]

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ರಣರಂಗ' ಚಿತ್ರದಲ್ಲಿನ ''ಜಗವೇ ಒಂದು ರಣರಂಗ..'' ಹಾಡಿನ ಸಾಲುಗಳನ್ನ 'ರಣವಿಕ್ರಮ' ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಅಲ್ಲದೇ, ತೆಲುಗಿನ ಹಾಡೊಂದನ್ನ ನಕಲು ಮಾಡಿರುವ ಆರೋಪವನ್ನ 'ರಣವಿಕ್ರಮ' ಎದುರಿಸುತ್ತಿದೆ.

ಎರಡೂ ಹಾಡುಗಳ ಕಾಪಿರೈಟ್ಸ್ ಲಹರಿ ಆಡಿಯೋ ಸಂಸ್ಥೆ ಬಳಿಯಿದೆ. ಆದ್ರೆ, ಅನುಮತಿ ಪಡೆಯದೆ ಕಾನೂನುಬಾಹಿರವಾಗಿ ಸಾಲುಗಳನ್ನ ಬಳಿಸಿಕೊಂಡಿರುವುದರಿಂದ ಲಹರಿ ವೇಲು ಅಸಮಾಧಾನ ವ್ಯಕ್ತಪಡಿಸಿದ್ದಾರೆ. [ಪುನೀತ್ ಅಭಿನಯದ 'ರಣವಿಕ್ರಮ' ಆಡಿಯೋ ವಿಮರ್ಶೆ]

ಈಗಾಗಲೇ 'ರಣವಿಕ್ರಮ' ಹಾಡುಗಳನ್ನ ಯೂಟ್ಯೂಬ್ ನಿಂದ ತೆಗೆದು ಹಾಕಲಾಗಿದೆ. ವಿವಾದ ಕೋರ್ಟ್ ಮೆಟ್ಟಿಲೇರಿದರೆ, 'ರಣವಿಕ್ರಮ'ನ ಬಿಡುಗಡೆ ಎಂದಾಗುವುದೋ...!? (ಫಿಲ್ಮಿಬೀಟ್ ಕನ್ನಡ)

More from Filmibeat

English summary
Lahari Velu of Lahari Audio company decides to take 'Ranavikrama' Plagiarism to the court. Earlier, Lahari Velu had sent a notice to music director V.Harikrishna and director Pawan Wadeyar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X