Don't Miss!
- News
ಕೃಷಿ ಪ್ರಶಸ್ತಿಗೆ ಭಾಜನರಾದವರ ಮಕ್ಕಳಿಗೆ ಕೃಷಿ ವಿವಿಯಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಸರ್ಕಾರದ ನೆರವು : ಬಸವರಾಜ ಬೊಮ್ಮಾಯಿ
- Sports
ಸಾಧು ಸಂತರಿಗೆ ಅನ್ನದಾನ ಮಾಡಿ ಆಶೀರ್ವಾದ ಪಡೆದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಲತಾ ಮಂಗೇಶ್ಕರ್ ಪ್ರಸಿದ್ದ ಹಾಡುಗಳು ಮತ್ತು ಸಂಭಾವನೆ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು
ಗಾನಕೋಗಿಲೆ ಲತಾ ಮಂಗೇಶ್ಕರ್ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ. ಕೋವಿಡ್ ಪಾಸಿಟಿವ್ ಬಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಲತಾ ಮಂಗೇಶ್ಕರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಲತಾ ಮಂಗೇಶ್ಕರ್ ಅವರು 10,000ಕ್ಕೂ ಹೆಚ್ಚು ಹಾಡುಗಳನ್ನು 22 ಭಾಷೆಗಳಲ್ಲಿ ಹಾಡಿದ್ದಾರೆ. ಅಮೆರಿಕ, ಯುರೋಪ್ ಸುತ್ತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅವರ ಹಾಡುಗಳ ವಿಶೇಷವೆಂದರೆ, ಅಸಾಧಾರಣ ಸ್ಪಷ್ಟ ಶಬ್ದೋಚ್ಚಾರ, ಶಾಸ್ತ್ರೀಯ ಸಂಗೀತದ ಸ್ವರಬದ್ಧ ಸಂಸ್ಕಾರ, ಗೀತೆಗಳ ಗುಣಮಟ್ಟ, ಸನ್ನಿವೇಶಕ್ಕೆ ನಟಿಯರ ಕಂಠಕ್ಕೆ ಸರಿಯಾಗಿ ಅಳವಡಿಸಿ ಹಾಡುವ ಕಲೆ ಅವರದ್ದು. ಅವರ ಸಾಧನೆಗೆ ಲತಾ ಮಂಗೇಶ್ಕರ್ ಪಡೆದಿದ್ದ ಪ್ರಶಸ್ತಿಗಳು ಯಾವುವು? ಪ್ರಸಿದ್ಧ ಗೀತೆಗಳು ಯಾವುದು? ಮತ್ತು ಸಂಭಾವಣೆ ಎಷ್ಟು ಪಡೆಯುತ್ತಿದ್ದರು ಮುಂದೆ ಓದಿ
ಮೆಲೋಡಿ ಹಾಡುಗಳಿಂದ ಲಕ್ಷಾಂತರ ಸಂಗೀತ ಪ್ರೇಮಿಗಳ ಮನಗೆದ್ದಿದ್ದ ಲತಾ ಮಂಗೇಷ್ಕರ್ ಇಂದಿಗೂ ಹೊಸ ಪೀಳಿಗೆಗೆ ಆದರ್ಶ ಪ್ರಿಯರಾಗಿದ್ದಾರೆ. ಲತಾ ಮಂಗೇಶ್ಕರ್ ಅವರು ರಸಿಕ ಬಲಮಾ (ಚೋರಿ ಚೋರಿ), ಜ್ಯೋತಿ ಕಲಷ್ ಛಲಕೇ ... (ಭಾಭೀ ಕೀ ಚೂಡಿಯಾಂ), ಯೆ ದಿಲ್ ಔರ್ ಉನ್ ಕೀ ನಿಗಾಹೋಂಕೆ ಸಾಯೇ(ಪ್ರೇಮ್ ಪರ್ಬತ್), ಕುಹೂ ಕುಹೂ ಬೋಲೇ ಕೋಯಲಿಯಾ(ಸುವರ್ಣ ಸುಂದರಿ), ಪಂಖ್ ಹೋತೀ ತೋ ಉಡ್ ಜಾತೀರೇ(ಸೆಹರಾ), ನೈನೋಂ ಮೆ ಬದರಾ ಛಾಯೆ (ಮೇರಾ ಸಾಯಾ), ಜಾನೆ ಕೈಸೆ ಸಪ್ನೋಮೆ ಖೋಗಯೀ ಅಖಿಯಾ (ಅನುರಾಧಾ), ತುಮ್ ನಾ ಜಾನೆ ಕಿಸ್ ಜಹಾಂಮೆ ಖೋಗಯೇ (ಸಜಾ), ಏರೀ ಮೈ ತೋ ಪ್ರೇಮ್ ದಿವಾನಿ (ಬಹಾರ್), ಯೂ ಹಸರತೋ ಕೆ ದಾಗ್ (ಅದಾಲತ್), ಯೆ ಜಿಂದಗೀ ಉಸೀಕಿ ಹೈ (ಅರ್ನಾಕಲಿ), ಮೋಹೆ ಭೂಲ್ ಗಯೇ ಸಾವರಿಯಾಂ (ಬೈಜೂ ಬಾವ್ರಾ), ಧೀರೆಸೆ ಆಜಾರೆ ಅಖಿಯನ್ ಮೇಂ ನಿಂದಿಯಾ, ರೈನಾ ಬೀತಿ ಜಾಯೇ, ಪವನ್ ದಿವಾನಿ, ಕೈಸೆ ಜಾಂವು ಜಮುನಾ ಕೆ ತೀರ್ ಜನಪ್ರಿಯ ಹಾಡುಗಳನ್ನು ಹಾಡಿದ್ದಾರೆ
ಲತಾ ಮಂಗೇಶ್ಕರ್ ಅವರ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ 6 ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ನ್ಯೂಯಾರ್ಕ್ ವಿಶ್ವವಿದ್ಯಾಲಯವೂ ಸೇರಿದಂತೆ, ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳು, ಶಾಂತಿನಿಕೇತನದಿಂದ ದೇಶಿಕೋತ್ತಮ ಪ್ರಶಸ್ತಿ, ಆಸ್ಥಾನ ವಿದ್ವಾನ್, ತಿರುಪತಿ ದೇವಸ್ಥಾನಮ್ದಾ, ದಾಸಾಹೆಬ್ ಫಾಲ್ಕೆ ಪ್ರಶಸ್ತಿ, ಪದ್ಮಭೂಷಣ, ಭಾರತರತ್ನ ಫ್ರಾನ್ಸ್ ಸರ್ಕಾರ ನೀಡುವ 'ಆಫೀಸರ್ ಆಫ್ ದ ಲೀಜಿಯನ್ ಆಫ್ ಆನರ್' ಪ್ರತಿಷ್ಠಿತ ಪ್ರಶಸ್ತಿಗಳು ಬಂದಿವೆ.