twitter
    For Quick Alerts
    ALLOW NOTIFICATIONS  
    For Daily Alerts

    ಲತಾ ಮಂಗೇಶ್ಕರ್ ಆರೋಗ್ಯದ ಬಗ್ಗೆ ಆತಂಕ: ವೈದ್ಯರು ಹೇಳಿದ್ದೇನು?

    |

    ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರಿಗೆ ಕೋವಿಡ್ ಆಗಿದ್ದು ಅವರ ಆರೋಗ್ಯದ ಬಗ್ಗೆ ಆತಂಕಕಾರಿ ಸುದ್ದಿಗಳು ಹೊರಬಿದ್ದಿವೆ.

    ಲತಾ ಮಂಗೇಶ್ಕರ್ ಅವರು ಶನಿವಾರ (ಜನವರಿ 08) ರಿಂದಲೂ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿದ್ದಾರೆ. ಅವರನ್ನು ತೀವ್ರ ನಿಗಾಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಕೋವಿಡ್ ಆಗಿರುವ ಬಗ್ಗೆ ನಿನ್ನೆ ವರದಿ ಹೊರಬಿದ್ದಿದೆ.

    ಲತಾ ಮಂಗೇಶ್ಕರ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿರುವಂತೆ, ಲತಾ ಮಂಗೇಶ್ಕರ್‌ಗೆ ಕೋವಿಡ್ ಜೊತೆಗೆ ನ್ಯುಮೋನಿಯಾ ಸಹ ಆಗಿದೆಯಂತೆ. ಆದರೆ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ವೈದ್ಯರು ನಿರಾಕರಿಸಿದ್ದಾರೆ. ಈ ನಿರಾಕರಣೆಯು ಆತಂಕದ ಗೆರೆಗಳನ್ನು ಮತ್ತಷ್ಟು ಹೆಚ್ಚಿಸಿದೆ.

    Lata Mangeshkar Has COVID And Pneumonia Both Says Doctor
    ಕೋವಿಡ್ ಜೊತೆಗೆ ನ್ಯುಮೋನಿಯಾ ತೀವ್ರ ಆತಂಕಕಾರಿ ಸಂಗತಿ ಎಂಬುದನ್ನು ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಪ್ರಕರಣದಲ್ಲಿಯೇ ಅರಿವಾಗಿದೆ. ಬಾಲಸುಬ್ರಹ್ಮಣ್ಯಂ ಅವರಿಗೂ ಕೋವಿಡ್ ಆದ ಬಳಿಕ ನ್ಯುಮೋನಿಯಾ ಆಗಿತ್ತು. ಇದೇ ಅವರ ನಿಧನಕ್ಕೂ ಪ್ರಮುಖ ಕಾರಣವಾಯ್ತು.

    ನ್ಯುಮೋನಿಯಾ ಹಾಗೂ ಕೋವಿಡ್ 'ಡೆಡ್ಲಿ ಕಾಂಬಿನೇಶನ್' ಎಂದೇ ಬಣ್ಣಿಸಲಾಗುತ್ತದೆ. ಸಾಮಾನ್ಯ ನ್ಯುಮೋನಿಯಾದ ರೀತಿಯಲ್ಲಿದೆ ಕೋವಿಡ್‌ನಿಂದಾದ ನ್ಯುಮೋನಿಯಾ ಬಹಳ ಬೇಗ ಹರಡಿ ಶ್ವಾಸಕೋಶಗಳಿಗೆ ತೀವ್ರ ಹಾನಿಯುಂಟು ಮಾಡುತ್ತದೆ. ಅದರಲ್ಲಿಯೂ ವಯಸ್ಸಾದ ವ್ಯಕ್ತಿಗಳಿಗೆ ಇದು ದೊಡ್ಡ ಪ್ರಮಾಣದ ಅಪಾಯವನ್ನು ತಂದಿಡುತ್ತದೆ ಎನ್ನಲಾಗಿದೆ.

    ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಲತಾ ಮಂಗೇಶ್ಕರ್ ಸಹೋದರಿ ಉಷಾ ಮಂಗೇಶ್ಕರ್, ''ಅಕ್ಕನನ್ನು ನೋಡಲು ನಮ್ಮನ್ನು ಬಿಡುತ್ತಿಲ್ಲ. ಆದರೆ ಅಲ್ಲಿ (ಆಸ್ಪತ್ರೆಯಲ್ಲಿ) ಸಾಕಷ್ಟು ವೈದ್ಯರು ಮತ್ತು ದಾದಿಯರು ಅಕ್ಕನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂಬ ವಿಶ್ವಾಸವಿದೆ'' ಎಂದಿದ್ದಾರೆ. ಮುಂದುವರೆದು, ''ಅಕ್ಕ ಯಾವಾಗ ಡಿಸ್‌ಚಾರ್ಜ್ ಆಗಲಿದ್ದಾರೆ ಎಂದು ವೈದ್ಯರು ಹೇಳಿಲ್ಲ ಬದಲಿಗೆ ಅವರ ವಯಸ್ಸು ಹೆಚ್ಚಾಗಿರುವ ಕಾರಣ ಹೆಚ್ಚು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಎಂದಿದ್ದಾರೆ'' ಎಂದು ಉಶಾ ಮಾಹಿತಿ ನೀಡಿದ್ದಾರೆ.

    ಲತಾ ಮಂಗೇಶ್ಕರ್‌ಗೆ ಉಶಾ ಮಂಗೇಶ್ಕರ್, ಆಶಾ ಭೋಂಸ್ಲೆ ಮತ್ತು ಮೀನ ಖಡಿಕಾರ್ ಎಂಬ ಸಹೋದರಿಯರಿದ್ದಾರೆ. ಇವರಲ್ಲಿ ಆಶಾ ಭೋಂಸ್ಲೆ ಸಹ ಭಾರತದ ಅತ್ಯುತ್ತಮ ಗಾಯಕಿಯರಲ್ಲಿ ಒಬ್ಬರು.

    92 ವರ್ಷ ವಯಸ್ಸಿನ ಲತಾ ಮಂಗೇಶ್ಕರ್ ಭಾರತ ಸಿನಿಮಾರಂಗದ ಅತ್ಯಂತ ಹಿರಿಯ ಗಾಯಕಿ. 1942ನೇ ವರ್ಷದಿಂದಲೇ ಲತಾ ಮಂಗೇಶ್ಕರ್ ಸಿನಿಮಾಗಳಲ್ಲಿ ಹಾಡಲು ಪ್ರಾರಂಭಿಸಿದ್ದರು. ಭಾರತ ಸ್ವಾತಂತ್ರ್ಯಗೊಂಡಾಗ ಪ್ರಥಮ ಸ್ವಾತಂತ್ರ್ಯೋತ್ಸವದಲ್ಲಿಯೂ ಲತಾ ಮಂಗೇಶ್ಕರ್ ಹಾಡು ಹಾಡಿ ಸಭಿಕರನ್ನು ಮಂತ್ರಮುಗ್ಧಗೊಳಿಸಿದ್ದರು. 1942ರಿಂದ ಈ ವರೆಗೆ ಸಾವಿರಾರು ಹಾಡುಗಳನ್ನು ಲತಾ ಮಂಗೇಶ್ಕರ್ ಹಾಡಿದ್ದಾರೆ. 1967ರಲ್ಲಿ ಬಿಡುಗಡೆ ಆಗಿದ್ದ ಕನ್ನಡ ಸಿನಿಮಾ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾದಲ್ಲಿ ಎರಡು ಹಾಡುಗಳನ್ನು ಲತಾ ಮಂಗೇಶ್ಕರ್ ಹಾಡಿರುವುದು ವಿಶೇಷ.

    English summary
    Legendary singer Lata Mangeshkar has COVID and Pneumonia both says doctor. Lata Mangeshkar admitted to Mumbai hospital on Saturday night. She is in ICU now.
    Wednesday, January 12, 2022, 10:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X